ಇನ್ಮುಂದೆ ಹೋಟೆಲ್ ಪ್ರಿಯರ ಜೇಬಿಗೆ ಕತ್ತರಿ , ಕಾಫಿ-ತಿಂಡಿ ದರ ನಾಳೆಯಿಂದಲೇ ಏರಿಕೆ, ಹೊಸ ದರ ಇಲ್ಲಿದೆ ಹೋಟೆಲ್ ತಿಂಡಿಗಳ ಬೆಲೆ ಶೇ. 10ರಷ್ಟು ದರ ಏರಿಕೆ ಮಾಡಲಾಗುತ್ತಿದೆ. ಆಗಸ್ಟ್ 1 ರಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ. ಬೆಂಗಳೂರು (ಜು.31):ಇನ್ನು ಮುಂದೆ ನೀವು ಹೋಟೆಲ್‌ ಗೆ ಹೋಗಿ ತಿನ್ನಬೇಕು ಎಂದಾದರೆ ಕೊಂಚ ಯೋಚಿಸೋದು ಬಹಳ ಮುಖ್ಯ. ಹೋಟೆಲ್‌ಗೆ ಹೋಗಿ ತಿನ್ನುವ ದರದಲ್ಲಿ ಹೊಟ್ಟೆತುಂಬಾ ಮನೆಯಲ್ಲಿಯೇ ನಿಮ್ಮಷ್ಟದ ತಿಂಡಿಯನ್ನು ಮಾಡಿಕೊಂಡು ತಿನ್ನುವುದು ಒಳ್ಳೆಯದು. ಯಾಕೆಂದರೆ ಹಾಲಿನ ದರ ಏರಿಕೆಯ ಜೊತೆಗೆ ದಿನಬಳಕೆಯ ವಸ್ತುಗಳ ದರ ಕೂಡ ಹೆಚ್ಚಳವಾಗುತ್ತಿದೆ. ಹೀಗಾಗಿ ಹೋಟೆಲ್ ತಿಂಡಿಗಳ ಬೆಲೆ ಶೇ. 10ರಷ್ಟು ದರ ಏರಿಕೆ ಮಾಡಲಾಗುತ್ತಿದೆ. ಆಗಸ್ಟ್ 1 ರಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ. ಪರಿಷ್ಕೃತ ದರಗಳ ಪಟ್ಟಿ ಇಲ್ಲಿದೆ:1. ರೈಸ್ ಬಾತ್ಸದ್ಯದ ಬೆಲೆ 40-50 ರೂ.ನಾಳೆಯಿಂದ 44-55 ರೂ 2. ಇಡ್ಲಿಸದ್ಯದ ಬೆಲೆ(ಎರಡಕ್ಕೆ) 30-40 ರೂನಾಳೆಯಿಂದ 35-45 ರೂ 3. ಸೆಟ್ ದೋಸೆಸದ್ಯದ ದರ‌‌‌‌‌‌‌ 60- 65 ರೂನಾಳೆಯಿಂದ 65-70 ರೂ 4. ಬೆಣ್ಣೆ ಮಸಾಲೆಸದ್ಯದ ದರ ‌‌‌‌ 70 ರೂನಾಳೆಯಿಂದ 80 ರೂ 5. ಚೌಚೌ ಬಾತ್ಸದ್ಯದ ದರ- 40-50 ರೂನಾಳೆಯಿಂದ 45-55 ರೂ 6. ಪೂರಿಸದ್ಯದ ದರ 50-60 ರೂನಾಳೆಯಿಂದ 55-65 ರೂ 7. ಮಿನಿ ಮಿಲ್ಸ್ಸದ್ಯದ ದರ 60- 65 ರೂನಾಳೆಯಿಂದ 75-80 ರೂ 8. ರೈಸ್ - ಸಂಬಾರ್ ,ಸಾಧ್ಯದ ದರ ‌‌‌ 40- 50 ರೂನಾಳೆಯಿಂದ 45-55 ರೂ 9. ಕಾಫಿ-ಟೀಸದ್ಯದ ದರ 12-15 ರೂನಾಳೆಯಿಂದ 15-18 ರೂ 10. ಬಾದಾಮಿ ಹಾಲುಸದ್ಯದ ದರ 15 ರೂನಾಳೆಯಿಂದ18 ರೂ 11. ಕರ್ಡ್ ರೈಸ್ಸದ್ಯದ ದರ 40-50 ರೂನಾಳೆಯಿಂದ 45-55 ರೂ 12. ಚಪಾತಿ(ಎರಡಕ್ಕೆ)ಸದ್ಯದ ದರ : 40-50 ರೂನಾಳೆಯಿಂದ 45-65 ರೂ 13. ಬಿಸಿಬೇಳೆ ಬಾತ್ಸದ್ಯದ ದರ 40-50 ರೂನಾಳೆಯಿಂದ 45-55 ರೂ.