: ಫನ್ ಮೂಡಲ್ಲಿದ್ದ ಕಾಗೆಗೆ ತಮಾಷೆ, ಕುಟುಕಿಸಿಕೊಂಡವರಿಗೆ ಸಂಕಟ ಈ ಕಾಗೆಗೆ ಏನಾಗಿದೆ ಮರಾಯ್ರೆ..! ದಾರಿಯಲ್ಲಿ ಹೋಗೋರನ್ನ ಬಿಡ್ತಾನೇ ಇಲ್ಲ. ಒಬ್ಬರಾದ್ಮೇಲೆ ಒಬ್ಬರ ತಲೆ ಟಚ್ ಮಾಡಿ ಮಜಾ ತೆಗೆದುಕೊಳ್ತಿದೆ. ವಿಡಿಯೋ ನೋಡಿ ಜನ ನಕ್ಕರೆ, ಕಾಗೆಯಿಂದ ಮೊಟಕಿಸಿಕೊಂಡವರು ಫುಲ್ ಟೆನ್ಸ್ ಆಗಿದ್ದಾರೆ. ನಾವು ಕಾಗೆಯನ್ನು ಅಪಶಕುನವೆಂದೇ ಭಾವಿಸ್ತೇವೆ. ಕಾಗೆ ಕಂಡ್ರೆ, ಕಾಗೆ ಕೂಗಿದ್ರೆ, ಕಾಗೆ ಮನೆ ಮುಂದೆ ಬಂದ್ರೆ, ಅಪ್ಪಿತಪ್ಪಿ ಕಾಗೆ ಟಚ್ ಮಾಡಿದ್ರೆ ಎಲ್ಲದಕ್ಕೂ ಅದರದೇ ಆದ ಅರ್ಥವಿದೆ. ಕಾಗೆ ತಲೆ ಮೇಲೆ ಮೊಟಕೋದು ಬಹಳ ಅಪರೂಪ. ಒಂದ್ವೇಳೆ ಅದು ತಲೆ ಮೇಲೆ ಮೊಟಕಿದ್ರೆ ದೊಡ್ಡ ಅನಾಹುತ ಕಾದಿದೆ ಎಂದು ಭಾವಿಸುವ ಜನರು ಮನೆಗೆ ಹೋಗಿ ತಲೆ ಸ್ನಾನ ಮಾಡಿ ನಂತ್ರ ತುಪ್ಪದ ದೀಪವನ್ನು ದೇವರ ಮುಂದೆ ಹಚ್ಚಿ, ಏನೂ ಆಗದಿರಲಿ ಅಂತಾ ಪ್ರಾರ್ಥಿಸುತ್ತಾರೆ. ಕಾಗೆ () ತಲೆಮೇಲೆ ಮೊಟಕುವ ವಿಷ್ಯಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಪ್ರದೇಶಗಳಲ್ಲಿ ನಂಬಿಕೆ () ಭಿನ್ನವಾಗಿದೆ. ಕೆಲವರು ಕಾಗೆಯನ್ನು ಶನಿಗೆ ಹೋಲಿಕೆ ಮಾಡ್ತಾರೆ. ಮತ್ತೆ ಕೆಲ ಶಾಸ್ತ್ರದಲ್ಲಿ ಕಾಗೆ ತಲೆ ಟಚ್ ಮಾಡಿದ್ರೆ ಲಾಭವಿದೆ ಎಂದು ಹೇಳಲಾಗುತ್ತದೆ. ಬೆಳಿಗ್ಗೆ ಇದ್ದಕ್ಕಿದ್ದಂತೆ ಕಾಗೆಯು ಬಂದು ನಿಮ್ಮ ತಲೆಯನ್ನು ತನ್ನ ಪಾದಗಳಿಂದ ಮುಟ್ಟಿದರೆ, ನಿಮಗೆ ಆರ್ಥಿಕ ಪ್ರಗತಿ ಆಗಲಿದೆ ಎಂದರ್ಥ. ಕೆಲ ದಿನಗಳ ಹಿಂದೆ ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ರಾಘವ್‌ ಚಡ್ಡಾ ( ) ತಲೆ ಮೇಲೆ ಕಾಗೆ ಮೊಟಕಿತ್ತು. ಈ ವಿಷ್ಯ ಭಾರೀ ಚರ್ಚೆಗೆ ಕಾರಣವಾಗಿದೆ. ವಿರೋಧ ಪಕ್ಷಗಳು ಚಡ್ಡಾ ಕಾಲೆಳೆದ್ರೆ ಅಭಿಮಾನಿಗಳು ಎಚ್ಚರವಾಗಿರುವಂತೆ ಸಲಹೆ ನೀಡಿದ್ದಾರೆ. ಸದ್ಯದಲ್ಲೇ ಚಡ್ಡಾ, ನಟಿ ಪರಿಣಿತಿ ಚೋಪ್ರಾ ಜೊತೆ ಮದುವೆಯಾಗಲಿರುವ ಕಾರಣ ಜನರು ಒಂದೊಂದು ರೀತಿ ಮಾತನಾಡ್ತಾ ಇದ್ದಾರೆ. (@) ಮದ್ವೆ ಆದ್ರೂ ಕೋಟಿ, ಡೈವೋರ್ಸ್‌ ಆದ್ರೂ ಕೋಟಿ! ಬಾಲಿವುಡ್‌ನ ಅತೀ ದುಬಾರಿ ಡೈವೋರ್ಸ್‌ಗಳಿವು! ಅದೇನೇ ಇರಲಿ, ನಿಮ್ಮದೇ ಆಲೋಚನೆಯಲ್ಲಿ ನೀವು ಹೋಗುತ್ತಿರುವಾಗ ಕಾಗೆ ಬಂದು ನಿಮ್ಮ ತಲೆಗೆ ಮೊಟಕಿದ್ರೆ ಹೆಂಗಾಗುತ್ತೇ ಹೇಳಿ? ಒಮ್ಮೆ ಭಯವಾಗುತ್ತೆ. ಅದೇ ಕಾಗೆ ನಿಮ್ಮನ್ನು ಬೆನ್ನು ಹಟ್ಟಿದ್ರೆ ಮತ್ತಷ್ಟು ಭಯ ಕಾಡೋದು ಗ್ಯಾರಂಟಿ. ಇನ್ಸ್ಟಾಗ್ರಾಮ್ ನಲ್ಲಿ ಸದ್ಯ ವಿಡಿಯೋ ಒಂದು ವೈರಲ್ ಆಗಿದೆ. ಅದ್ರಲ್ಲಿ ಕಾಗೆ, ದಾರಿಯಲ್ಲಿ ಹೋಗುವ ಜನರ ತಲೆ ಮೊಟಕಿ ಮಜಾ ತೆಗೆದುಕೊಳ್ತಿದೆ. ವಿಡಿಯೋ ನೋಡಿದ್ರೆ ನಿಮಗೆ ನಗು ಬರುತ್ತೆ. ಆದ್ರೆ ಕಾಗೆಯಿಂದ ಮೊಟಕಿಸಿಕೊಂಡವರ ಸ್ಥಿತಿ ಹೆಂಗಾಗಿರಬೇಡ.. ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಮಸ್ತಿ ಮಾಡುವ ಕಾಗೆ ಎಂದು ಇದಕ್ಕೆ ಶೀರ್ಷಿಕೆ ಹಾಕಲಾಗಿದೆ. ವಿಡಿಯೋದಲ್ಲಿ ಕಾಗೆ, ದಾರಿಯಲ್ಲಿ ಹೋಗುವ ವ್ಯಕ್ತಿಗಳ ತಲೆ ಟಚ್ ಮಾಡಿ ಪುರ್ ಅಂತಾ ಹಾರಿ ಹೋಗುತ್ತೆ. ಆರಂಭದಲ್ಲಿ ವ್ಯಕ್ತಿಯೊಬ್ಬನ ತಲೆ ಮೊಟಕುವ ಕಾಗೆ, ಆತನನ್ನು ಹಿಂಬಾಲಿಸಿ ಮತ್ತೊಮ್ಮೆ ಮೊಟಕುತ್ತೆ. ಅಲ್ಲೇ ನಡೆದು ಹೋಗ್ತಿದ್ದ ಮಹಿಳೆಯೊಬ್ಬಳ ತಲೆ ಮೇಲೆ ನಂತ್ರ ಮೊಟಕುತ್ತೆ. ಒಬ್ಬರಾದ್ಮೇಲೆ ಒಬ್ಬರಂತೆ ನಾಲ್ಕೈದು ಜನರ ತಲೆ ಮೊಟಕುತ್ತೆ ಕಾಗೆ. ಕಾಗೆಯ ಈ ವರ್ತನೆ ನೋಡಿ ವ್ಯಕ್ತಿಯೊಬ್ಬ ಕಂಗಾಲಾಗ್ತಾನೆ. ಬೈಕ್ ನಲ್ಲಿ ಹೋಗುವವರನ್ನು ಕೂಡ ಕಾಗೆ ಬಿಡ್ತಿಲ್ಲ. ಕಾಗೆ ಮೋಜು ಮಾಡುವ ಮೂಡ್ ನಲ್ಲಿದೆ. ಬಿಡುವಿಲ್ಲದ ಶುಕ್ರವಾರ ಈ ವಿಡಿಯೋ ನೋಡಿದ್ರೆ ನೀವು ನಗದೆ ಇರೋದಿಲ್ಲ ಎಂದು ವಿಡಿಯೋ ಹಂಚಿಕೊಂಡವರು ಬರೆದಿದ್ದಾರೆ. ಕೊರೋನಾದಿಂದ ನೆನಪಿನ ಶಕ್ತಿ ಕುಂಠಿತ, ಅಧ್ಯಯನದಲ್ಲಿ ಶಾಕಿಂಗ್ ಮಾಹಿತಿ ಬಹಿರಂಗ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಆಗಿರುವ ಈ ವಿಡಿಯೋವನ್ನು ಲಕ್ಷಾಂತರ ಬಾರಿ ವೀಕ್ಷಣೆ ಮಾಡಲಾಗಿದೆ. 12 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅನೇಕರು ಕಮೆಂಟ್ ಮಾಡಿದ್ದಾರೆ. ಕಾಗೆಗೆ ನನ್ನ ಬಾಯ್ ಫ್ರೆಂಡ್ ಆಗು ಅಂತಾ ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಅಕ್ಕಪಕ್ಕದಲ್ಲಿ ಕಾಗೆ ಮರಿ ಇರಬಹುದು, ಹಾಗಾಗಿ ಅದು ಈ ರೀತಿ ಮಾಡ್ತಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಕಾಗೆ ತಲೆ ಮೇಲೆ ಮೊಟಕೋದು ಅಪಶಕುನವೆಂದು ಒಬ್ಬರು ಹೇಳಿದ್ರೆ ಮತ್ತೊಬ್ಬರು ಇದು ಚಡ್ಡಾ ತಲೆ ಮೇಲೆ ಕುಳಿತಿದ್ದ ಕಾಗೆ ಅಲ್ಲಾ ತಾನೇ ಎಂದು ತಮಾಷೆ ಮಾಡಿದ್ದಾರೆ.