ಹುಡ್ಗೀನ ಇಂಪ್ರೆಸ್ ಮಾಡಿ ಸೋತಿದ್ದೀರಾ… 90s ನ ಈ ಟ್ರಿಕ್ಸ್ ಟ್ರೈ ಮಾಡಿ… ನಿಮ್ಮ ಪ್ರೀತಿಗೆ ಶರಣಾಗ್ತಾರೆ! ಹುಡುಗರ ಫೀಲಿಂಗ್ಸ್ ಗೆ ಹುಡುಗಿಯರು ಕ್ಯಾರೇ ಮಾಡಿಲ್ಲಾಂದ್ರೆ, ಹುಡುಗರಿಗೆ ಈಗ ಏನು ಮಾಡಬೇಕೆಂದು ಗೊತ್ತೆ ಆಗಲ್ಲ. ಹುಡುಗಿಯನ್ನು ಒಲಿಸಿಕೊಳ್ಳಲು ಹುಡುಗರು ಏನೇನೋ ಟ್ರಿಕ್ಸ್ ಟ್ರೈ ಮಾಡ್ತಾರೆ. ನೀವು ಪದೇ ಪದೇ ಹುಡುಗೀನ ಇಂಪ್ರೆಸ್ ಮಾಡೋದ್ರಲ್ಲಿ ಸೋಲ್ತಿದ್ರೆ ಈ 90ರ ದಶಕದ ಟ್ರಿಕ್ಸ್ ನಿಮಗಾಗಿ. ಹುಡುಗರ ಫೀಲಿಂಗ್ಸ್ ಗೆ ಹುಡುಗಿಯರು ಕ್ಯಾರೇ ಮಾಡಿಲ್ಲಾಂದ್ರೆ, ಹುಡುಗರಿಗೆ ಈಗ ಏನು ಮಾಡಬೇಕೆಂದು ಗೊತ್ತೆ ಆಗಲ್ಲ. ಹುಡುಗಿಯನ್ನು ಒಲಿಸಿಕೊಳ್ಳಲು ಹುಡುಗರು ಏನೇನೋ ಟ್ರಿಕ್ಸ್ ಟ್ರೈ ಮಾಡ್ತಾರೆ. ನೀವು ಪದೇ ಪದೇ ಹುಡುಗೀನ ಇಂಪ್ರೆಸ್ ಮಾಡೋದ್ರಲ್ಲಿ ಸೋಲ್ತಿದ್ರೆ ಈ 90ರ ದಶಕದ ಟ್ರಿಕ್ಸ್ ನಿಮಗಾಗಿ. ಪ್ರೀತಿಸೋದು ತುಂಬಾನೆ ಸುಲಭ, ಆದರೆ ಅದನ್ನ ವ್ಯಕ್ತಪಡಿಸೋದು ಮತ್ತು ಅನುಭವಿಸುವುದು ತುಂಬಾನೆ ಕಷ್ಟ. ಅಂತಹ ಕ್ಷಣವು ಪ್ರತಿಯೊಬ್ಬರ ಬಾಳಲ್ಲಿ ಒಂದಲ್ಲ ಒಂದು ಸಲ ಬಂದೇ ಬರುತ್ತೆ. ಹುಡುಗೀನ ತುಂಬಾ ಇಷ್ಟಪಟ್ಟಿರ್ತಾರೆ ಆದರೆ ಅದನ್ನ ಆಕೆಗೆ ಹೇಳೊಕೆ ಸಾಧ್ಯಾನೆ ಆಗಲ್ಲ. ಹುಡುಗಿಯನ್ನು ಒಲಿಸಿಕೊಳ್ಳೋದಕ್ಕೆ ಸಿಕ್ಕಾಪಟ್ಟೆ ಟ್ರೈ ಮಾಡಿದ್ರೂ, ಆಕೆಯನ್ನು ಒಲಿಸಿಕೊಳ್ಳುವಲ್ಲಿ ಹುಡುಗರು ಸೋಲುತ್ತಾರೆ. ನಿಮ್ಮ ಕಥೆಯೂ ಹೀಗೆ ಆಗಿದ್ಯಾ? ನೀವು ಇಷ್ಟಪಟ್ಟ ಹುಡುಗಿಯನ್ನು ಒಲಿಸಿಕೊಳ್ಳಲು ಹೊಸ ಹೊಸ ಎಲ್ಲಾ ಟ್ರಿಕ್ಸ್ ಟ್ರೈ ಮಾಡಿ ಸೋತು ಹೋಗಿದ್ದೀರಾ? ನಿಮಗೊತ್ತಾ?, 90 ರ ದಶಕದಲ್ಲಿ ಇದು ಬೇರೆಯೇ ಆಗಿತ್ತು. ಆವಾಗ ಇವತ್ತಿನ ಹಾಗೆ ಫೋನ್ ನಲ್ಲಿ ಕಾಟ ಕೊಡ್ತಾ, ಕಾಸ್ಲಿ ಗಿಫ್ಟ್ ನೀಡುತ್ತಾ ಇಂಪ್ರೆಸ್ ಮಾಡ್ತಿರಲಿಲ್ಲ. ನೀವು ನಿಮ್ಮ ಹುಡುಗೀನ ಇಂಪ್ರೆಸ್ ಮಾಡುವಲ್ಲಿ ಸೋತಿದ್ರೆ, 90ರ ದಶಕನ ಈ ಟ್ರಿಕ್ಸ್ ಗಳನ್ನ ಟ್ರೈ ಮಾಡಿ. ಖಂಡಿತಾ ಆಕೆ ಒಲಿದು ಬಿಡುತ್ತಾಳೆ. ಚಾಟಿಂಗ್, ಟೆಕ್ಸ್ಟ್ ಮೆಸೇಜ್ ಬಿಟ್ಟು, ಪತ್ರ ಬರೆಯಿರಿಯೋಚಿಸಿ, ಈ ಡಿಜಿಟಲ್ ಯುಗದಲ್ಲಿ ( ), ಹುಡುಗ ಹುಡುಗಿಗೆ ಪ್ರೇಮ ಪತ್ರ ಬರೆದರೆ ಹೇಗಿರುತ್ತೆ ಅಲ್ವಾ?. ನಿಮ್ಮ ಹುಡುಗಿಯನ್ನು ಮೆಚ್ಚಿಸಲು, ವಾಟ್ಸಾಪ್ ಅಥವಾ ಯಾವುದೇ ಸೋಶಿಯಲ್ ಮೀಡಿಯಾ ಮೂಲಕ ಮೆಸೇಜ್ ಮಾಡೋ ಬದಲು ಪತ್ರ ಅಥವಾ ಕಾರ್ಡ್ನಲ್ಲಿ ಬರೆಯುವ ಮೂಲಕ ನಿಮ್ಮ ಮನದ ಮಾತುಗಳನ್ನು ತಿಳಿಸಿ. ಹೀಗೆ ಮಾಡಿದ್ರೆ, ಹುಡುಗಿಗೆ ಸ್ಪೆಷಲ್ ಫೀಲ್ ಆಗೋದು ಖಂಡಿತಾ. ಹಾಡನ್ನ ಡೆಡಿಕೇಟ್ ಮಾಡಿ ( )90 ರ ದಶಕದ ಸಿನಿಮಾಗಳನ್ನ ನೀವು ನೋಡಿದ್ರೆ, ಅಲ್ಲಿ ನಾಯಕಿಯನ್ನು ಮೆಚ್ಚಿಸಲು ನಾಯಕ ಹಾಡೋದನ್ನು ನೋಡಿರಬಹುದು ಅಲ್ವಾ?. ಇದನ್ನ ನೀವು ಟ್ರೈ ಮಾಡಬಹುದು, ನೀವು ಹಾಡುಗಾರರಾಗಿದ್ರೆ, ಆಕೆಗಾಗಿ ಆಕೆಯ ಇಷ್ಟದ ಹಾಡನ್ನು ಡೆಡಿಕೇಟ್ ಮಾಡಿ, ನೀವು ಹಾಡಿ. ನಿಮಗೆ ಹಾಡು ಹೇಳೋಕೆ ಬರದೇ ಇದ್ರೆ ಅವರ ಇಷ್ಟದ ತಾಣದಲ್ಲಿ ಅವರಿಷ್ಟದ ಹಾಡನ್ನ ಪ್ಲೇ ಮಾಡಿ. ಸ್ಟ್ರೀಟ್ ಫುಡ್ ಡೇಟ್ ( )ಎಲ್ಲರಿಗೂ ತಿಳಿದಿರುವಂತೆ, ಹೆಚ್ಚಿನ ಹುಡುಗಿಯರು ಪಾನಿ ಪುರಿ, ಚಾಟ್-ಪಕೋಡಾಗಳಂತಹ ಸ್ಟ್ರೀಟ್ ಫುಡ್ ಗಳನ್ನ ಇಷ್ಟಪಡ್ತಾರೆ. ಆದ್ದರಿಂದ ನಿಮ್ಮ ಹುಡುಗಿಯನ್ನು ದುಬಾರಿ ಸ್ಥಳಗಳಿಗೆ ಕರೆದೊಯ್ಯುವ ಬದಲು, ನೀವು ಅವರನ್ನ ಸ್ಟ್ರೀಟ್ ಫುಡ್ ಡೇಟ್ ಗೆ ಕರೆದೊಯ್ಯಬಹುದು. ಅವರಿಗೆ ಸ್ಪೆಷಲ್ ಫೀಲ್ ಮೂಡಿಸಲು, ನಿಮ್ಮ ಕೈಯಿಂದ ಗೋಲ್ಗಪ್ಪಾ, ಚಾಟ್ ಮತ್ತು ಆಹಾರಗಳನ್ನ ತಿನ್ನಿಸಿ. ಹುಡುಗಿಯರು ಈ ಸಣ್ಣ ವಿಷಯಗಳನ್ನು ಇಷ್ಟಪಡೋದರಿಂದ, ಅವರಿಗೂ ನಿಮ್ಮ ಮೇಲೆ ಒಲವಾಗಬಹುದು. ಅವರ ಆಯ್ಕೆಯ ಡ್ರೆಸ್ ಧರಿಸಿ ( )ಹಳೆಯ ಚಲನಚಿತ್ರಗಳಲ್ಲಿ, ನಟರು ಹುಡುಗಿಯರು ಇಷ್ಟಪಡುವಂತಹ ಅಥವಾ ಅವರ ಡ್ರೆಸ್ ಗೆ ಮ್ಯಾಚ್ ಆಗುವಂತಹ ಉಡುಪನ್ನು ಧರಿಸುವುದನ್ನು ನೀವು ಆಗಾಗ್ಗೆ ನೋಡಿದ್ದೀರಿ. ಅಂದಹಾಗೆ, ಈ ಕೆಲಸವನ್ನು ಇಂದಿಗೂ ಮಾಡಬಹುದು. ನಿಮ್ಮಾಕೆ ಇಷ್ಟಪಡುವ ಡ್ರೆಸ್ ಧರಿಸಿ, ಅಥವಾ ಅವರಿಗೆ ಮ್ಯಾಚ್ ಆಗುವ ಬಟ್ಟೆ ಧರಿಸಿ. ಖಂಡಿತಾ ಅವರು ಇಂಪ್ರೆಸ್ ಆಗ್ತಾರೆ. ದೇವಸ್ಥಾನಕ್ಕೆ ಕರೆದೊಯ್ಯಿರಿ ( )ಇದೆಂಥಾ ಟಿಪ್ಸ್ ಅಂತಾ ನಿಮಗೆ ಅನಿಸಬಹುದು, ತುಂಬಾ ಟ್ರೆಡಿಶನಲ್ ಅಂತಾನೂ ಅನಿಸಬಹುದು. ಆದ್ರೆ ನಿಮ್ಮ ಹುಡುಗಿಗೆ ದೇವರ ಮೇಲೆ ಭಕ್ತಿ ಇದ್ರೆ ಇದು ಆಕೆಗೆ ಖಂಡಿತಾ ಇಷ್ಟವಾಗುತ್ತೆ. ವಿಶೇಷ ದಿನದಂದು ಆಕೆಯನ್ನು ದೇಗುಲಕ್ಕೆ ಕರೆದುಕೊಂಡು ಹೋಗಿ, ಆಕೆಯ ಹೆಸರಲ್ಲಿ ಪೂಜೆಯನ್ನೂ ಮಾಡಿಸಿ. ಆಕೆ ಯಾಕೆ ಇಷ್ಟಪಡದೇ ಇರ್ತಾಳೆ ನೋಡೋಣ.