- ಹೊಂದಿರುವ ಪ್ರಪಂಚದ ಟಾಪ್ 10 ದೇಶಗಳಿವು… ಭಾರತ ಯಾವ ಸ್ಥಾನದಲ್ಲಿದೆ? ಪ್ರಪಂಚದ ಟಾಪ್ 10 ವರ್ಕ್ ಲೈಫ್ ಬ್ಯಾಲೆನ್ಸ್ ಹೊಂದಿರುವ ದೇಶಗಳ ಲಿಸ್ಟ್ ಇಲ್ಲಿದೆ. ಭಾರತ ಟಾಪ್ 50 ರಲ್ಲಿ ಸ್ಥಾನ ಪಡೆದಿದೆ. ಕೆಲಸದ ಒತ್ತಡದಿಂದ ಸಾಲು ಸಾಲು ಸಾವು ಸಂಭವಿಸುತ್ತಿರುವ ಸಂದರ್ಭದಲ್ಲಿ ಈ ವರ್ಕ್ ಲೈ ಬ್ಯಾಲೆನ್ಸ್ ನಲ್ಲಿ ಭಾರತದ ಸ್ಥಾನ ಎಷ್ಟು ತಿಳಿಯೋಣ. ಪ್ರಪಂಚದ ಟಾಪ್ 10 ವರ್ಕ್ ಲೈಫ್ ಬ್ಯಾಲೆನ್ಸ್ ಹೊಂದಿರುವ ದೇಶಗಳ ಲಿಸ್ಟ್ ಇಲ್ಲಿದೆ. ಭಾರತ ಟಾಪ್ 50 ರಲ್ಲಿ ಸ್ಥಾನ ಪಡೆದಿದೆ. ಕೆಲಸದ ಒತ್ತಡದಿಂದ ಸಾಲು ಸಾಲು ಸಾವು ಸಂಭವಿಸುತ್ತಿರುವ ಸಂದರ್ಭದಲ್ಲಿ ಈ ವರ್ಕ್ ಲೈ ಬ್ಯಾಲೆನ್ಸ್ ನಲ್ಲಿ ಭಾರತದ ಸ್ಥಾನ ಎಷ್ಟು ತಿಳಿಯೋಣ. ಭಾರತದಲ್ಲಿ ಕೆಲವು ದಿನಗಳಿಂದ ಕೆಲಸದ ಒತ್ತಡದಿಂದ ಸಾವನ್ನಪ್ಪುತ್ತಿರುವವರ ಸುದ್ದಿಯೇ ಕೇಳಿ ಬರ್ತಿದೆ. ಅಂದ್ರೆ ನಮ್ಮ ದೇಶದಲ್ಲಿ ವರ್ಕ್ ಲೈಫ್ ಬ್ಯಾಲೆನ್ಸ್ ಸರಿಯಾಗಿಲ್ಲ ಎಂದು ಅರ್ಥ. ಶಾಸನಬದ್ಧ ವಾರ್ಷಿಕ ರಜೆ, ಪೇಯ್ಡ್ ಹೆರಿಗೆ ರಜೆ ಮತ್ತು ಪ್ರತಿ ಉದ್ಯೋಗಿಗೆ ಕೆಲಸ ಮಾಡುವ ಸರಾಸರಿ ಗಂಟೆಗಳಂತಹ ಪ್ರಮುಖ ಕೆಲಸದ ಅಂಶಗಳ ಸಂಯೋಜನೆಯ ಆಧಾರದ ಮೇಲೆ ಕೆಳಗಿನ 10 ದೇಶಗಳು ನಮ್ಮ ಜಾಗತಿಕ ಅಧ್ಯಯನದಲ್ಲಿ ಬೆಸ್ಟ್ ವರ್ಕ್ ಲೈಫ್ ಬ್ಯಾಲೆನ್ಸ್ ( ) ಹೊಂದಿರುವ ದೇಶಗಳು ಎಂದು ತಿಳಿದು ಬಂದಿದೆ. ಈ ಲಿಸ್ಟ್ ನಲ್ಲಿ ಭಾರತ ಯಾವ ಸ್ಥಾನದಲ್ಲಿದೆ ನೋಡೋಣ. ನ್ಯೂಝಿಲ್ಯಾಂಡ್ಅದ್ಭುತವಾದ ವರ್ಕ್ ಲೈಫ್ ಬ್ಯಾಲೆನ್ಸ್ ಹೊಂದಿರುವ ದೇಶಗಳಲ್ಲಿ ನ್ಯೂಝಿಲ್ಯಾಂಡ್ ಮೊದಲನೇ ಸ್ಥಾನದಲ್ಲಿದೆ. 52,69,939 ಜನಸಂಖ್ಯೆ ಇರುವ ಈ ದೇಶದಲ್ಲಿನ 80.76 % ವರ್ಕ್ ಲೈಫ್ ಬ್ಯಾನೆನ್ಸ್ ಇದೆ. ಇವರಿಗೆ 32 ವಾರ್ಷಿಕ ರಜೆ ಇದೆ. 80% ಸಿಕ್ ಪೇಯ್ಡ್ ಲೀವ್ ಇದೆ. ಅಷ್ಟೇ ಅಲ್ಲ 26 ವಾರಗಳ ಮಟರ್ನಿಟಿ ರಜೆ ಇದ್ದು, ವಾರಕ್ಕೆ 177 $ ನೀಡಲಾಗುತ್ತೆ. ಐರ್ಲ್ಯಾಂಡ್ಯುರೋಪ್ ನ ಈ ದೇಶದಲ್ಲಿ 50,89,478 ಜನಸಂಖ್ಯೆ ಇದೆ. ಇಲ್ಲಿಯೂ ಕೂಡ ಜನರ ವರ್ಕ್ ಲೈಫ್ ಬ್ಯಾಲೆನ್ಸ್ ಸರಿಯಾಗಿಯೇ ಇದೆ. ಇಲ್ಲಿ 77.89% ವರ್ಕ್ ಲೈಫ್ ಬ್ಯಾಲೆನ್ಸ್ ಇದೆ. 30 ವಾರ್ಷಿಕ ರಜೆ, 70% ವೇತನ ಸಹಿತ ಸಿಕ್ ಲೀವ್ ( ), ವೇತನ ಸಹಿತ 26 ವಾರಗಳ ಮೆಟರ್ನಿಟಿ ರಜೆ . ಬೆಲ್ಜಿಯಂಬೆಲ್ಜಿಯಂ ನಲ್ಲಿ 11, 715, 744 ಜನಸಂಖ್ಯೆ ಹೊಂದಿರುವ ಈ ದೇಶದಲ್ಲಿ 73.45% ವರ್ಕ್ ಲೈಫ್ ಬ್ಯಾಲೆನ್ಸ್ ಇದೆ. 30 ವಾರ್ಷಿಕ ರಜೆ, 100% ವೇತನ ಸಹಿತ ಸಿಕ್ ಲೀವ್, ವೇತನ ಸಹಿತ 15 ವಾರಗಳ ಮೆಟರ್ನಿಟಿ ರಜೆ ( ) . ಡೆನ್ಮಾರ್ಕ್ಡೆನ್ಮಾರ್ಕ್ ನ ವರ್ಕ್ ಲೈಫ್ ಬ್ಯಾಲೆನ್ಸ್ ಕೂಡ ಚೆನ್ನಾಗಿದೆ. ಜನಸಂಖ್ಯೆ 59,39,695 ಇರುವ ಈ ದೇಶದಲ್ಲಿ 73.45% ವರ್ಕ್ ಲೈಫ್ ಬ್ಯಾಲೆನ್ಸ್ ಇದೆ. 35 ವಾರ್ಷಿಕ ರಜೆ, 100%ವೇತನ ಸಹಿತ ಸಿಕ್ ಲೀವ್, ವೇತನ ಸಹಿತ 15 ವಾರಗಳ ಮೆಟರ್ನಿಟಿ ರಜೆ . ಕೆನಡಾಬರೋಬ್ಬರಿ 3,91,07,046 ಜನಸಂಖ್ಯೆ ಹೊಂದಿರುವ ಕೆನಡಾದಲ್ಲಿ 72.75% ವರ್ಕ್ ಲೈಫ್ ಬ್ಯಾಲೆನ್ಸ್ ಇದೆ. 17 ವಾರ್ಷಿಕ ರಜೆ, 100%ವೇತನ ಸಹಿತ ಸಿಕ್ ಲೀವ್, ವೇತನ ಸಹಿತ 17 ವಾರಗಳ ಮೆಟರ್ನಿಟಿ ರಜೆ . ಜರ್ಮನಿ84,552,242 ಜನಸಂಖ್ಯೆ ಹೊಂದಿರುವ ಜರ್ಮನಿಯಲ್ಲಿ 71.84% ವರ್ಕ್ ಲೈಫ್ ಬ್ಯಾಲೆನ್ಸ್ ಇದೆ. 30 ವಾರ್ಷಿಕ ರಜೆ, 70%ವೇತನ ಸಹಿತ ಸಿಕ್ ಲೀವ್, ವೇತನ ಸಹಿತ 14ವಾರಗಳ ಮೆಟರ್ನಿಟಿ ರಜೆ . ಫಿನ್ಲ್ಯಾಂಡ್ಯೂರೋಪ್ ನ ನಗರ ಫಿನ್ ಲ್ಯಾಂಡ್ ನ ಜನಸಂಖ್ಯೆ 5,618,694 ಆಗಿದೆ. ಇಲ್ಲಿ 71.55% ವರ್ಕ್ ಲೈಫ್ ಬ್ಯಾಲೆನ್ಸ್ ಇದೆ. 36 ವಾರ್ಷಿಕ ರಜೆ, 100%ವೇತನ ಸಹಿತ ಸಿಕ್ ಲೀವ್, ವೇತನ ಸಹಿತ 17.5ವಾರಗಳ ಮೆಟರ್ನಿಟಿ ರಜೆ ಸಿಗುತ್ತೆ. ಆಸ್ಟ್ರೇಲಿಯಾಸುಮಾರು 27,122,411, ಜನಸಂಖ್ಯೆ ಇರುವ ಆಸ್ಟ್ರೇಲಿಯಾದ ವರ್ಕ್ ಲೈಫ್ ಬ್ಯಾಲೆನ್ಸ್ 71.35% ಆಗಿದೆ. ಈ ಜನರಿಗೆ 30 ವಾರ್ಷಿಕ ರಜೆ, 100%ವೇತನ ಸಹಿತ ಸಿಕ್ ಲೀವ್, ವೇತನ ಸಹಿತ 12 ವಾರಗಳ ಮೆಟರ್ನಿಟಿ ರಜೆ ಸಿಗುತ್ತೆ. ನಾರ್ವೆನಾರ್ವೇ ದೇಶದಲ್ಲಿ ಸುಮಾರು 5,576,660 ಜನ ವಾಸಿಸುತ್ತಾರೆ. ನಾರ್ವೇ ವರ್ಕ್ ಲೈಫ್ ಬ್ಯಾಲೆನ್ಸ್ 70.85% ಆಗಿದೆ. ಈ ಜನರಿಗೆ 35 ವಾರ್ಷಿಕ ರಜೆ, 100%ವೇತನ ಸಹಿತ ಸಿಕ್ ಲೀವ್, ವೇತನ ಸಹಿತ 18 ವಾರಗಳ ಮೆಟರ್ನಿಟಿ ರಜೆ ಸಿಗುತ್ತೆ. ಸ್ಪೈನ್ಸ್ಪೈನ್ ದೇಶದ ಜನಸಂಖ್ಯೆ ಸುಮಾರು 48,797,875 ಆಗಿದೆ. ಟಾಪ್ 10ನೇ ಸ್ಥಾನದಲ್ಲಿರುವ ಈ ದೇಶದ ವರ್ಕ್ ಲೈಫ್ ಬ್ಯಾಲೆನ್ಸ್ 70.06% ಆಗಿದೆ. ಈ ಜನರಿಗೆ 36 ವಾರ್ಷಿಕ ರಜೆ, 60%ವೇತನ ಸಹಿತ ಸಿಕ್ ಲೀವ್, ವೇತನ ಸಹಿತ 16ವಾರಗಳ ಮೆಟರ್ನಿಟಿ ರಜೆ ಸಿಗುತ್ತೆ. ಹಾಗಿದ್ರೆ ನಮ್ಮ ದೇಶ () ಈ ಲಿಸ್ಟ್ ನಲ್ಲಿ ಎಷ್ಟನೇ ಸ್ಥಾನದಲ್ಲಿದೆ ಎಂದು ನೀವು ಯೋಚನೆ ಮಾಡ್ತಿರಬಹುದು ಅಲ್ವಾ? 1,450,935,791 ಜನಸಂಖ್ಯೆಯುಳ್ಳ ಭಾರತದಲ್ಲಿ ವರ್ಕ್ ಲೈಫ್ ಬ್ಯಾಲೆನ್ಸ್ 38.83% ಆಗಿದ್ದು, ಈ ಲಿಸ್ಟ್ ನಲ್ಲಿ 48ನೇ ಸ್ಥಾನದಲ್ಲಿದೆ. ಈ ಜನರಿಗೆ 35 ವಾರ್ಷಿಕ ರಜೆ, 50%ವೇತನ ಸಹಿತ ಸಿಕ್ ಲೀವ್, ವೇತನ ಸಹಿತ 12ವಾರಗಳ ಮೆಟರ್ನಿಟಿ ರಜೆ ಸಿಗುತ್ತೆ.