ದೈವ ಸನ್ನಿಧಿಯಲ್ಲಿ ಮತ್ತೊಂದು ಪವಾಡ: 24 ಗಂಟೆಯೊಳಗೆ ಕಳ್ಳನನ್ನು ಹುಡುಕಿಕೊಟ್ಟ ಬಬ್ಬು ಸ್ವಾಮಿ ದೈವ! ಉಡುಪಿಯ ದೈವ ಸನ್ನಿಧಿಯಲ್ಲಿ ಪವಾಡವೊಂದು ನಡೆದಿದ್ದು, 24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವ ಅಭಯ ನೀಡಿತ್ತು. ಅದರಂತೆ ಇದೀಗ ಕಳ್ಳ ಸಿಕ್ಕಿಬಿದ್ದಿದ್ದಾನೆ. ಉಡುಪಿ:ದೈವ ಸನ್ನಿಧಿಯಲ್ಲಿ ಮತ್ತೊಂದು ಪವಾಡ ನಡೆದಿದೆ. ಉಡುಪಿಯ() ಚಿಟ್ಪಾಡಿ ಕಸ್ತೂರಬಾ ನಗರ ಬಬ್ಬು ಸ್ವಾಮಿ( ) ಸನ್ನಿಧಾನ ಈ ಘಟನೆ ನಡೆದಿದೆ. 24 ಗಂಟೆಯೊಳಗೆ ಕಳ್ಳನನ್ನು() ದೈವ ಹುಡುಕಿಕೊಟ್ಟಿದೆ. ಜು.4 ರ ನಡುರಾತ್ರಿ ದೈವಸ್ಥಾನದ ಕಾಣಿಕೆ ಡಬ್ಬಿ ಒಡೆದು ಕಳ್ಳತನ ಮಾಡಲಾಗಿತ್ತು. ಜು.5 ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ಕಳ್ಳತನ ಬೆಳಕಿಗೆ ಬರುತ್ತಿದ್ದಂತೆ ಭಕ್ತರಿಂದ ಸಾಮೂಹಿಕ ಪ್ರಾರ್ಥನೆ ಮಾಡಲಾಗಿತ್ತು. ಸನ್ನಿಧಾನದಲ್ಲಿ ಕಳ್ಳತನ ಮಾಡಿದರೆ ಅಪಚಾರವಾಗುವುದಿಲ್ಲವೇ ಎಂದು ದೈವಕ್ಕೆ ಪ್ರಶ್ನೆ? ಇಡಲಾಗಿತ್ತು. ಊರಿನ ಸಂಕಷ್ಟ ಬಗೆಹರಿಸುವ ದೈವ ಸನ್ನಿಧಾನದಲ್ಲಿ ಕಳ್ಳತನವಾಗಿದ್ದಕ್ಕೆ ಬೇಸರವಾಗಿದ್ದು, 24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವ ಅಭಯ ನೀಡಿತ್ತು. ಜು. 6ರ ಬೆಳಗ್ಗೆ ಕಳ್ಳ ಪತ್ತೆಯಾಗಿದ್ದು, ನಗರದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಲಗಿದ್ದ. ಬಸ್ ನಿಲ್ದಾಣ ಪರಿಸರದಲ್ಲಿ ಆಟೋ ಚಾಲಕನಿಂದ ಗುರುತು ಪತ್ತೆಯಾಗಿದೆ. ಸಿಸಿಟಿವಿಯಲ್ಲಿ ಕಳ್ಳನ ವಿಡಿಯೋ ನೋಡಿದ್ದ ಆಟೋ ಚಾಲಕ, ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಬಾಗಲಕೋಟೆ ಮೂಲದ ಮುದುಕಪ್ಪ ಪೊಲೀಸರಿಗೆ ಸೆರೆಯಾದ ಕಳ್ಳ. ಬೆಳಗ್ಗೆ ಎಂಟು ಗಂಟೆಯಾದರೂ ಮಂಪರಿನಲ್ಲಿ ಮಲಗಿದ್ದ ಕಳ್ಳ, ಕೊನೆಗೂ ಬಬ್ಬು ಸ್ವಾಮಿ ದೈವ ಮಾತು ಉಳಿಸಿಕೊಂಡಿದೆ. ದೈವದ ಕಾರ್ಣಿಕಕ್ಕೆ ಭಕ್ತರು ಅಚ್ಚರಿಗೊಂಡಿದ್ದಾರೆ.ಇದನ್ನೂ ವೀಕ್ಷಿಸಿ: : ಆಟೋ ಚಾಲಕನಿಂದ ರ್‍ಯಾಶ್ ಡ್ರೈವಿಂಗ್‌: ಬೈಕ್‌,ಪಾದಚಾರಿಗೆ ಗುದ್ದಿ ಎಸ್ಕೇಪ್‌..ವಿಡಿಯೋ ಉಡುಪಿ:ದೈವ ಸನ್ನಿಧಿಯಲ್ಲಿ ಮತ್ತೊಂದು ಪವಾಡ ನಡೆದಿದೆ. ಉಡುಪಿಯ() ಚಿಟ್ಪಾಡಿ ಕಸ್ತೂರಬಾ ನಗರ ಬಬ್ಬು ಸ್ವಾಮಿ( ) ಸನ್ನಿಧಾನ ಈ ಘಟನೆ ನಡೆದಿದೆ. 24 ಗಂಟೆಯೊಳಗೆ ಕಳ್ಳನನ್ನು() ದೈವ ಹುಡುಕಿಕೊಟ್ಟಿದೆ. ಜು.4 ರ ನಡುರಾತ್ರಿ ದೈವಸ್ಥಾನದ ಕಾಣಿಕೆ ಡಬ್ಬಿ ಒಡೆದು ಕಳ್ಳತನ ಮಾಡಲಾಗಿತ್ತು. ಜು.5 ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ಕಳ್ಳತನ ಬೆಳಕಿಗೆ ಬರುತ್ತಿದ್ದಂತೆ ಭಕ್ತರಿಂದ ಸಾಮೂಹಿಕ ಪ್ರಾರ್ಥನೆ ಮಾಡಲಾಗಿತ್ತು. ಸನ್ನಿಧಾನದಲ್ಲಿ ಕಳ್ಳತನ ಮಾಡಿದರೆ ಅಪಚಾರವಾಗುವುದಿಲ್ಲವೇ ಎಂದು ದೈವಕ್ಕೆ ಪ್ರಶ್ನೆ? ಇಡಲಾಗಿತ್ತು. ಊರಿನ ಸಂಕಷ್ಟ ಬಗೆಹರಿಸುವ ದೈವ ಸನ್ನಿಧಾನದಲ್ಲಿ ಕಳ್ಳತನವಾಗಿದ್ದಕ್ಕೆ ಬೇಸರವಾಗಿದ್ದು, 24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವ ಅಭಯ ನೀಡಿತ್ತು. ಜು. 6ರ ಬೆಳಗ್ಗೆ ಕಳ್ಳ ಪತ್ತೆಯಾಗಿದ್ದು, ನಗರದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಲಗಿದ್ದ. ಬಸ್ ನಿಲ್ದಾಣ ಪರಿಸರದಲ್ಲಿ ಆಟೋ ಚಾಲಕನಿಂದ ಗುರುತು ಪತ್ತೆಯಾಗಿದೆ. ಸಿಸಿಟಿವಿಯಲ್ಲಿ ಕಳ್ಳನ ವಿಡಿಯೋ ನೋಡಿದ್ದ ಆಟೋ ಚಾಲಕ, ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಬಾಗಲಕೋಟೆ ಮೂಲದ ಮುದುಕಪ್ಪ ಪೊಲೀಸರಿಗೆ ಸೆರೆಯಾದ ಕಳ್ಳ. ಬೆಳಗ್ಗೆ ಎಂಟು ಗಂಟೆಯಾದರೂ ಮಂಪರಿನಲ್ಲಿ ಮಲಗಿದ್ದ ಕಳ್ಳ, ಕೊನೆಗೂ ಬಬ್ಬು ಸ್ವಾಮಿ ದೈವ ಮಾತು ಉಳಿಸಿಕೊಂಡಿದೆ. ದೈವದ ಕಾರ್ಣಿಕಕ್ಕೆ ಭಕ್ತರು ಅಚ್ಚರಿಗೊಂಡಿದ್ದಾರೆ. ಇದನ್ನೂ ವೀಕ್ಷಿಸಿ: : ಆಟೋ ಚಾಲಕನಿಂದ ರ್‍ಯಾಶ್ ಡ್ರೈವಿಂಗ್‌: ಬೈಕ್‌,ಪಾದಚಾರಿಗೆ ಗುದ್ದಿ ಎಸ್ಕೇಪ್‌..ವಿಡಿಯೋ