ಬೆಂಗಳೂರು: ಬೆಳ್ಳಂ ಬೆಳಿಗ್ಗೆ ಹೊತ್ತಿ ಉರಿದ ಬಿಎಂಟಿಸಿ ಬಸ್..! ಅನಿಲ್ ಕುಂಬ್ಳೆ ಜಂಕ್ಷನ್ ಹತ್ತಿರ 1235 ನಂಬರ್‌ ಬಸ್ ಬೆಂಕಿಗೆ ಆಹುತಿಯಾಗಿದೆ. 144E/11 ರೂಟ್ ನಂಬರ್ ಬಿಎಂಟಿಸಿ ಬಸ್ ಕೋರಮಂಗಲ ಡಿಪೋಗೆ ಸೇರಿದ್ದಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಗಳೂರು(ಜು.09):ಬೆಳ್ಳಂ ಬೆಳಿಗ್ಗೆ ಬಿಎಂಟಿಸಿ ಬಸ್ ಹೊತ್ತಿ ಉರಿದ ಘಟನೆ ಇಂದು(ಮಂಗಳವಾರ) ಅನಿಲ್ ಕುಂಬ್ಳೆ ಜಂಕ್ಷನ್ ಹತ್ತಿರ ನಡೆದಿದೆ. ಬೆಳಿಗ್ಗೆ 9 ಗಂಟೆಗೆ ಅನಿಲ್ ಕುಂಬ್ಳೆ ಜಂಕ್ಷನ್ ಹತ್ತಿರ 1235 ನಂಬರ್‌ ಬಸ್ ಬೆಂಕಿಗೆ ಆಹುತಿಯಾಗಿದೆ. 144E/11 ರೂಟ್ ನಂಬರ್ ಬಿಎಂಟಿಸಿ ಬಸ್ ಕೋರಮಂಗಲ ಡಿಪೋಗೆ ಸೇರಿದ್ದಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿ ನಂದಿಸಲು ಬೆಂಗಳೂರಿಗೆ ಶೀಘ್ರವೇ ಬರಲಿದೆ ರೋಬೋಟ್‌: ಇದರ ವಿಶೇಷತೆಯೇನು! ಇಂಜಿನ್ ಬಳಿ ಕಾಣಿಸಿಕೊಂಡು ಬೆಂಕಿಯಿಂದ ಬಿಎಂಟಿಸಿ ಬಸ್ ಹೊತ್ತಿ ಉರಿದಿದೆ ಎಂದು ತಿಳಿದು ಬಂದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನ ನಂದಿಸಿದ್ದಾರೆ.