ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿ ರವಿಶಂಕರ್‌ ಜೈಲುಪಾಲು..ಪತ್ನಿ ಕವಿತಾ ಅಳಲು ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ8 ಆರೋಪಿ ರವಿಶಂಕರ್ ಜೈಲು ಪಾಲಾಗಿದ್ದು, ಅವರ ಪತ್ನಿ ಕವಿತಾ ಏಷ್ಯಾನೆಟ್ ಸುವರ್ಣ ನ್ಯೂಸ್‌ ನೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಚಿತ್ರದುರ್ಗ: ದರ್ಶನ್ & ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ( ) ಸಂಬಂಧಿಸಿದಂತೆ ಎ8 ಆರೋಪಿ ರವಿಶಂಕರ್ ಜೈಲು ( A8 ) ಪಾಲಾಗಿದ್ದಾನೆ. ಈ ಹಿನ್ನೆಲೆ ಆತನ ಕುಟುಂಬ ಕಂಗಾಲಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ರವಿ ಪತ್ನಿ ಕವಿತಾ ( ) ಅಳಲು ತೋಡಿಕೊಂಡಿದ್ದು, ನಿನ್ನೆ ನಮ್ಮ ಪತಿಯನ್ನು ನೋಡಲು ತುಮಕೂರು() ಜೈಲಿಗೆ ಹೋಗಿದ್ವಿ. ಗಂಡನನ್ನು ನೋಡಲಿಕ್ಕೂ ಬೆಳಗ್ಗೆಯಿಂದ ಸಂಜೆವರೆಗೂ ಕಾಯಿಸಿದ್ರು. ನನ್ನನ್ನು ನೋಡಿದ ಕೂಡಲೇ ನನ್ನ ಗಂಡ ತುಂಬಾ ಅಳ್ತಿದಾರೆ. ನಾನೇನು ತಪ್ಪು ಮಾಡಿಲ್ಲ ಆದರೂ ನನಗ್ಯಾಕೆ ಈ ಶಿಕ್ಷೆ. ಕೇವಲ 15 ದಿನಕ್ಕೆ ನನಗೆ ಈ ರೀತಿ ಇರಲು ಆಗ್ತಿಲ್ಲ. ಜೈಲಲ್ಲಿ ವಾತಾವರಣ ಸರಿಯಿಲ್ಲ, ನನಗೆ ಇಲ್ಲಿ ಇರಲು ಆಗ್ತಿಲ್ಲ ಎಂದರು. ನಮಗೆ ಧೈರ್ಯ ಹೇಳುವವರೇ ಈ ರೀತಿ ಹೇಳಿದಾಗ ಏನು ಮಾಡಬೇಕು ಅಂತ ಗೊತ್ತಾಗ್ಲಿಲ್ಲ. ನನ್ನ ಗಂಡನ ಸ್ಥಿತಿ ನೋಡಿ ನಮಗೆ ಬಹಳ ಬೇಸರ ಆಗ್ತಿದೆ. ಇಡೀ ದಿನ ಕೆಲಸ ಬಿಟ್ಟು ಮಕ್ಕಳನ್ನು ಕಟ್ಕೊಂಡ್ ಹೋದ್ರು 5 ನಿಮಿಷ ಮಾತನಾಡೋಕೆ ಟೈಮ್ ಕೊಡ್ಲಿಲ್ಲ. ಇಡೀ ದಿನ ಕಾದರೂ ಸಂಜೆ 5.30ಕ್ಕೆ ಭೇಟಿ ಅವಕಾಶ ಕೊಟ್ಟರು. 5 ನಿಮಿಷಕ್ಕೆ ಡೋರ್ ಕ್ಲೋಸ್ ಮಾಡಿ ಒಳಗೆ ಕಳಿಸಿದ್ರು. ಜೊತೆಗಿದ್ದವರು ದೂರ ಇರೋದಕ್ಕೆ ತುಂಬಾ ನೋವಾಗ್ತಿದೆ. ನಮ್ಮ ಮಕ್ಕಳಂತೂ ಅಪ್ಪನನ್ನು ನೋಡಿ ತುಂಬಾ ಅತ್ತರು ಎಂದು ಕವಿತಾ ಹೇಳಿದರು.ಇದನ್ನೂ ವೀಕ್ಷಿಸಿ:ಎಲ್ಲಾ ಹಣವನ್ನ ಕ್ಯಾಷ್‌ಗೆ ಕನ್ವರ್ಟ್ ಮಾಡಿ ನುಂಗಲು ಸಿದ್ದತೆ..? ಕುರಿಗಾಹಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿತ್ತು ಲಕ್ಷ ಲಕ್ಷ..! ಚಿತ್ರದುರ್ಗ: ದರ್ಶನ್ & ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ( ) ಸಂಬಂಧಿಸಿದಂತೆ ಎ8 ಆರೋಪಿ ರವಿಶಂಕರ್ ಜೈಲು ( A8 ) ಪಾಲಾಗಿದ್ದಾನೆ. ಈ ಹಿನ್ನೆಲೆ ಆತನ ಕುಟುಂಬ ಕಂಗಾಲಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ರವಿ ಪತ್ನಿ ಕವಿತಾ ( ) ಅಳಲು ತೋಡಿಕೊಂಡಿದ್ದು, ನಿನ್ನೆ ನಮ್ಮ ಪತಿಯನ್ನು ನೋಡಲು ತುಮಕೂರು() ಜೈಲಿಗೆ ಹೋಗಿದ್ವಿ. ಗಂಡನನ್ನು ನೋಡಲಿಕ್ಕೂ ಬೆಳಗ್ಗೆಯಿಂದ ಸಂಜೆವರೆಗೂ ಕಾಯಿಸಿದ್ರು. ನನ್ನನ್ನು ನೋಡಿದ ಕೂಡಲೇ ನನ್ನ ಗಂಡ ತುಂಬಾ ಅಳ್ತಿದಾರೆ. ನಾನೇನು ತಪ್ಪು ಮಾಡಿಲ್ಲ ಆದರೂ ನನಗ್ಯಾಕೆ ಈ ಶಿಕ್ಷೆ. ಕೇವಲ 15 ದಿನಕ್ಕೆ ನನಗೆ ಈ ರೀತಿ ಇರಲು ಆಗ್ತಿಲ್ಲ. ಜೈಲಲ್ಲಿ ವಾತಾವರಣ ಸರಿಯಿಲ್ಲ, ನನಗೆ ಇಲ್ಲಿ ಇರಲು ಆಗ್ತಿಲ್ಲ ಎಂದರು. ನಮಗೆ ಧೈರ್ಯ ಹೇಳುವವರೇ ಈ ರೀತಿ ಹೇಳಿದಾಗ ಏನು ಮಾಡಬೇಕು ಅಂತ ಗೊತ್ತಾಗ್ಲಿಲ್ಲ. ನನ್ನ ಗಂಡನ ಸ್ಥಿತಿ ನೋಡಿ ನಮಗೆ ಬಹಳ ಬೇಸರ ಆಗ್ತಿದೆ. ಇಡೀ ದಿನ ಕೆಲಸ ಬಿಟ್ಟು ಮಕ್ಕಳನ್ನು ಕಟ್ಕೊಂಡ್ ಹೋದ್ರು 5 ನಿಮಿಷ ಮಾತನಾಡೋಕೆ ಟೈಮ್ ಕೊಡ್ಲಿಲ್ಲ. ಇಡೀ ದಿನ ಕಾದರೂ ಸಂಜೆ 5.30ಕ್ಕೆ ಭೇಟಿ ಅವಕಾಶ ಕೊಟ್ಟರು. 5 ನಿಮಿಷಕ್ಕೆ ಡೋರ್ ಕ್ಲೋಸ್ ಮಾಡಿ ಒಳಗೆ ಕಳಿಸಿದ್ರು. ಜೊತೆಗಿದ್ದವರು ದೂರ ಇರೋದಕ್ಕೆ ತುಂಬಾ ನೋವಾಗ್ತಿದೆ. ನಮ್ಮ ಮಕ್ಕಳಂತೂ ಅಪ್ಪನನ್ನು ನೋಡಿ ತುಂಬಾ ಅತ್ತರು ಎಂದು ಕವಿತಾ ಹೇಳಿದರು. ಇದನ್ನೂ ವೀಕ್ಷಿಸಿ:ಎಲ್ಲಾ ಹಣವನ್ನ ಕ್ಯಾಷ್‌ಗೆ ಕನ್ವರ್ಟ್ ಮಾಡಿ ನುಂಗಲು ಸಿದ್ದತೆ..? ಕುರಿಗಾಹಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿತ್ತು ಲಕ್ಷ ಲಕ್ಷ..!