ಹಾಲು ದುಬಾರಿ, ಪೆಟ್ರೋಲ್ ಡೀಸೆಲ್‌ನಿಂದ ಜೇಬಿಗೆ ಕತ್ತರಿ, ನಿಮ್ಮ ಜಿಲ್ಲೆಯಲ್ಲಿ ಇಂಧನ ದರ ಎಷ್ಟಿದೆ? ಹಾಲಿನ ಬೆಲೆ ಹೆಚ್ಚಳವಾಗಿದೆ. ಈಗಾಗಲೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಸಲಾಗಿದೆ. ಸತತ ಬೆಲೆ ಏರಿಕೆಯಿಂದ ರಾಜ್ಯದ ಜನತೆಯ ಜೇಬಿಗೆ ಕತ್ತರಿ ಬಿದ್ದಿದೆ. ಇಂದು ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟು? ಬೆಂಗಳೂರು(ಜೂ.26) ಕರ್ನಾಟಕದಲ್ಲಿ ಒಂದರ ಹಿಂದೆ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಹಾಲಿನ ಬೆಲೆ ಏರಿಕೆಯಾಗಿದೆ. ಇದರ ಬೆನ್ನಲ್ಲೆ ಕಾಫಿ, ತಿಂಡಿ, ಊಟ ಸೇರಿದಂತೆ ಹೊಟೆಲ್ ಉದ್ಯಮ ಬೆಲೆ ಏರಿಕೆ ಸೂಚನೆ ಸಿಕ್ಕಿದೆ. ಪರಿಣಾಮ ರಾಜ್ಯದ ಜನ ತತ್ತರಿಸಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಂಗಲಾಗಿದ್ದಾರೆ. ಇಂಧನದ ಮೇಲೆ ಮಾರಾಟ ತೆರಿಗೆ ಏರಿಸಿದ ಬಳಿಕ ಪೆಟ್ರೋಲ್ ಡೀಸೆಲ್ ಕೈಗೆಟುಕದ ದ್ರಾಕ್ಷಿಯಾಗಿದೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 102.86 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 88.94 ರೂಪಾಯಿ ಆಗಿದೆ. ದೆಹಲಿಯಲ್ಲಿ ಇಂಧನ ಸ್ಥಿರತೆ ಕಾಪಾಡಿಕೊಂಡಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 94.72 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 87.62 ರೂಪಾಯಿ ಆಗಿದೆ. ಇನ್ನು ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 100.85, ಡೀಸೆಲ್ ಬೆಲೆ 92.44 ರೂಪಾಯಿ ಆಗಿದೆ. ಒಂದೆಡೆ ದೆಹಲಿ ಸೇರಿದಂತೆ ಕೆಲ ರಾಜ್ಯಗಳು ಉರಿ ಬಿಸಿಲಿನಿಂದ ತತ್ತರಿಸಿದೆ. ಈಶಾನ್ಯ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ದಕ್ಷಿಣ ಭಾರತದಲ್ಲಿ ಕೆಲ ರಾಜ್ಯದಲ್ಲಿ ಮಳೆ ಕೊರತೆ ಕಾಡುತ್ತಿದೆ. ಇದರ ಪರಿಣಾಮ ತರಕಾರಿ ಸೇರಿದಂತ ಇತರ ವಸ್ತುಗಳ ಬೆಲೆ ಗಗನಕ್ಕೇರಿದೆ. : ಮದುವೆಗೆ ಹಣ ಖರ್ಚು ಮಾಡೋದ್ರಲ್ಲಿ ಭಾರತೀಯರು ಮುಂದೆ ಕರ್ನಾಟಕದ ಜಿಲ್ಲೆಗಳಲ್ಲಿ ಇಂಧನ ದರದ ಪಟ್ಟಿ ಇಲ್ಲಿದೆ.ಬಾಗಲಕೋಟೆ: ಪೆಟ್ರೋಲ್ ದರ: 103.44 ರೂಬೆಳಗಾವಿ: ಪೆಟ್ರೋಲ್ ದರ: 102.90 ರೂಧಾರವಾಡ: ಪೆಟ್ರೋಲ್ ದರ: 102.63 ರೂಗದಗ: ಪೆಟ್ರೋಲ್ ದರ: 103.19 ರೂಹಾವೇರಿ: ಪೆಟ್ರೋಲ್ ದರ: 103.35 ರೂಉತ್ತರ ಕನ್ನಡ: ಪೆಟ್ರೋಲ್ ದರ: 103.91 ರೂವಿಜಯಪುರ: ಪೆಟ್ರೋಲ್ ದರ: 103.05 ರೂಬೆಂಗಳೂರು ಗ್ರಾಮಾಂತರ: ಪೆಟ್ರೋಲ್ ದರ: 102.98ಬೆಂಗಳೂರು ನಗರ: ಪೆಟ್ರೋಲ್ ದರ:102.86 ರೂಚಿಕ್ಕಬಳ್ಳಾಪುರ: ಪೆಟ್ರೋಲ್ ದರ: 102.86 ರೂಚಿತ್ರದುರ್ಗ: ಪೆಟ್ರೋಲ್ ದರ: 104.30 ರೂದಾವಣಗೆರೆ: ಪೆಟ್ರೋಲ್ ದರ: 104.18 ರೂಕೋಲಾರ: ಪೆಟ್ರೋಲ್ ದರ: 103.03 ರೂರಾಮನಗರ: ಪೆಟ್ರೋಲ್ ದರ: 103.18 ರೂಶಿವಮೊಗ್ಗ: ಪೆಟ್ರೋಲ್ ದರ: 104.25 ರೂತುಮಕೂರು: ಪೆಟ್ರೋಲ್ ದರ: 103.40 ರೂಬಳ್ಳಾರಿ: ಪೆಟ್ರೋಲ್ ದರ: 104.89 ರೂಬೀದರ್: ಪೆಟ್ರೋಲ್ ದರ: 103.47 ರೂಕಲಬುರಗಿ: ಪೆಟ್ರೋಲ್ ದರ: 102.95 ರೂಕೊಪ್ಪಳ: ಪೆಟ್ರೋಲ್ ದರ: 104.09 ರೂರಾಯಚೂರು: ಪೆಟ್ರೋಲ್ ದರ: 103.75 ರೂವಿಜಯನಗರ: ಪೆಟ್ರೋಲ್ ದರ: 105.01 ರೂಯಾದಗಿರಿ: ಪೆಟ್ರೋಲ್ ದರ: 104.03 ರೂಚಾಮರಾಜನಗರ: ಪೆಟ್ರೋಲ್ ದರ: 103 ರೂಚಿಕ್ಕಮಗಳೂರು: ಪೆಟ್ರೋಲ್ ದರ: 104.17 ರೂದಕ್ಷಿಣ ಕನ್ನಡ: ಪೆಟ್ರೋಲ್ ದರ: 102.38 ರೂಹಾಸನ: ಪೆಟ್ರೋಲ್ ದರ: 102.58 ರೂಕೊಡಗು: ಪೆಟ್ರೋಲ್ ದರ: 104.32 ರೂಮಂಡ್ಯ: ಪೆಟ್ರೋಲ್ ದರ: 102.70 ರೂಮೈಸೂರು : ಪೆಟ್ರೋಲ್ ದರ: 102.41 ರೂಉಡುಪಿ: ಪೆಟ್ರೋಲ್ ದರ: 102.43 ರೂ2024ರ ಹಣಕಾಸು ವರ್ಷದಲ್ಲಿ ಭಾರತದ ಟಾಪ್‌ 10 ಲಾಭದಾಯಕ ಕಂಪನಿಗಳಿವು!