ಜನ ನಿರೀಕ್ಷೆಯಂತೆ ಕೈ ಹಿಡಿಲಿಲ್ಲ, ಆದ್ರೂ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಪ್ರಯತ್ನ ಮಾಡ್ತೀವಿ: ಪ್ರಿಯಾಂಕ್ ಖರ್ಗೆ ಜೆಡಿಎಸ್ ಬಿಜೆಪಿ ಮೈತ್ರಿಯಿಂದಾಗಿ ನಮಗೆ ಹಿನ್ನಡೆ ಆಗಿರಬಹುದು ಅಂತ ಮೇಲ್ನೋಟಕ್ಕೆ ಅನ್ನಿಸುತ್ತೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ನಮ್ಮ ಸರ್ಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸಿದ್ದೇವೆ, ಕಲ್ಯಾಣ ಕರ್ನಾಟಕದ ( ) ಅಭಿವೃದ್ಧಿ ನೀಲಿನಕ್ಷೆ ರೂಪಿಸಿದ್ದೇವೆ, ನಾವು ಅಭಿವೃದ್ಧಿಗೆ ಆದ್ಯತೆ ಕೊಟ್ಟಿದ್ದೇವೆ ಎಂದು ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ( ) ಹೇಳಿಕೆ ನೀಡಿದ್ದಾರೆ. ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ( ) ಕಾಂಗ್ರೆಸ್ ಗೆಲುವಿಗೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿ, ನಾವು ಜಾತಿ, ದೇವರು, ಧರ್ಮದ ಹೆಸರಿನಲ್ಲಿ ಚುನಾವಣೆ ಮಾಡಿಲ್ಲ. ಅಭಿವೃದ್ಧಿ ಯೋಜನೆಗಳನ್ನು ನೋಡಿ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಐದಕ್ಕೆ ಐದು ಸ್ಥಾನ ಗೆದ್ದಿರುವುದು ಸಂತೋಷ ತಂದಿದೆ ಎಂದು ಹೇಳಿದ್ದಾರೆ.ರಾಜ್ಯದಲ್ಲಿ ಇನ್ನಷ್ಟು ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು ಆದರೆ ಆಗಿಲ್ಲ, ಏಕೆಂದು ಸಮಾಲೋಚನೆ ಮಾಡುತ್ತೇವೆ, ಹೋದ ಬಾರಿಯಂತೆ ನಾಲ್ಕು ಲಕ್ಷ, ಮೂರು ಲಕ್ಷ ಅಂತರದಿಂದ ಬಿಜೆಪಿಯವರು() ಗೆಲ್ಲಲು ಸಾಧ್ಯವಾಗಿಲ್ಲ, ಜೆಡಿಎಸ್ ಬಿಜೆಪಿ ಮೈತ್ರಿಯಿಂದಾಗಿ ನಮಗೆ ಹಿನ್ನಡೆ ಆಗಿರಬಹುದು ಅಂತ ಮೇಲ್ನೋಟಕ್ಕೆ ಅನ್ನಿಸುತ್ತೆ, ಆದರೆ ಜೆಡಿಎಸ್ ನವರು ಒಂದು ಸ್ಥಾನ ಕಳೆದುಕೊಂಡಿದ್ದಾರೆ, ಬಿಜೆಪಿಯವರು ಹಲವಾರು ಸ್ಥಾನ ಕಳೆದುಕೊಂಡಿದ್ದಾರೆ ಎಂದು ವಿವರಿಸಿದರು.ಬೆಂಗಳೂರು ಗ್ರಾಮಾಂತರದಲ್ಲಿ ಡಿ ಕೆ ಸುರೇಶ್ ( ) ಸೋಲು ಅಘಾತ ತಂದಿದೆ, ಕಳೆದ ಬಾರಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟಾರ್ಗೆಟ್ ಮಾಡಿದಂತೆ ಈ ಬಾರಿ ಬಿಜೆಪಿಯವರು ಡಿ ಕೆ ಸುರೇಶ್ ಅವರನ್ನು ಟಾರ್ಗೆಟ್ ಮಾಡಿದ್ರು, ಖರ್ಗೆ ಅವರನ್ನು ಕಳೆದುಕೊಂಡು ಕಲಬುರಗಿ ಅಭಿವೃದ್ಧಿ ಕಾಣದಂತೆ ಆಯಿತು. ಅದೇ ರೀತಿ ಬೆಂಗಳೂರು ಗ್ರಾಮಾಂತರ ಜನರೂ ಅನುಭವಿಸ್ತಾರೆ ಎಂದು ಬೇಸರ ಹೊರಹಾಕಿದರು.ದೇಶದಲ್ಲಿ 295 ಸ್ಥಾನ ಗೆಲ್ಲುವ ನಿರೀಕ್ಷೆ ಹುಸಿಯಾಗಿರುವ ಬಗ್ಗೆ ಖರ್ಗೆ ಪ್ರತಿಕ್ರಿಯೆ ನೀಡಿ,ಜನ ನಮ್ಮ ನಿರೀಕ್ಷೆಯಂತೆ ಕೈ ಹಿಡಿಲಿಕ್ಕಿಲ್ಲ. ಆದ್ರೆ, ಬಿಜೆಪಿಯವರಿಗೂ ಜನ ಕೈ ಹಿಡಿದಿಲ್ಲ, ಅವರು ಚಾರಸೋ ಪಾರ್ ಅಂತಿದ್ರು, ಕೇಂದ್ರದಲ್ಲಿ ಅಧಿಕಾರ ಹಿಡಿಯಲು ನಾವು ಖಂಡಿತ ಪ್ರಯತ್ನ ಮಾಡ್ತಿವಿ, ನಾವು ಚುನಾವಣೆ ನಡೆಸುವುದೇ ಅಧಿಕಾರಕ್ಕೆ ಬರುವುದಕ್ಕೋಸ್ಕರ, ಅಧಿಕಾರ ಪಡೆಯುವುದು ಜ‌ನ ಸೇವೆ ಮಾಡಲು ಸಂವಿಧಾನ ಉಳಿಸಲು.ನಮ್ಮ ಹಳೆಯ ಸ್ನೇಹಿತರ ಭೇಟಿ ಮಾಡ್ತಿವಿ, ಅವರೂ ನಮ್ಮ ಜೊತೆ ಬರಬಹುದು ಬಿಜೆಪಿಯವರೂ ನಮ್ಮ ಜೊತೆ ಬರಬಹುದುಕಾದು ನೋಡೋಣ ಏನಾಗುತ್ತದೆ ಎಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಬಗ್ಗೆ ಮಾತನಾಡಿದ್ದಾರೆ.ಇದನ್ನೂ ವೀಕ್ಷಿಸಿ:ಶ್ರೀರಾಮುಲು ನಾವು ಜೊತೆಗಿದ್ದೆವು ಅವರ ಸೋಲಿಗೆ ಅನುಕಂಪವಿದೆ: ಸಚಿವ ನಾಗೇಂದ್ರ ನಮ್ಮ ಸರ್ಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸಿದ್ದೇವೆ, ಕಲ್ಯಾಣ ಕರ್ನಾಟಕದ ( ) ಅಭಿವೃದ್ಧಿ ನೀಲಿನಕ್ಷೆ ರೂಪಿಸಿದ್ದೇವೆ, ನಾವು ಅಭಿವೃದ್ಧಿಗೆ ಆದ್ಯತೆ ಕೊಟ್ಟಿದ್ದೇವೆ ಎಂದು ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ( ) ಹೇಳಿಕೆ ನೀಡಿದ್ದಾರೆ. ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ( ) ಕಾಂಗ್ರೆಸ್ ಗೆಲುವಿಗೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿ, ನಾವು ಜಾತಿ, ದೇವರು, ಧರ್ಮದ ಹೆಸರಿನಲ್ಲಿ ಚುನಾವಣೆ ಮಾಡಿಲ್ಲ. ಅಭಿವೃದ್ಧಿ ಯೋಜನೆಗಳನ್ನು ನೋಡಿ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಐದಕ್ಕೆ ಐದು ಸ್ಥಾನ ಗೆದ್ದಿರುವುದು ಸಂತೋಷ ತಂದಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಇನ್ನಷ್ಟು ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು ಆದರೆ ಆಗಿಲ್ಲ, ಏಕೆಂದು ಸಮಾಲೋಚನೆ ಮಾಡುತ್ತೇವೆ, ಹೋದ ಬಾರಿಯಂತೆ ನಾಲ್ಕು ಲಕ್ಷ, ಮೂರು ಲಕ್ಷ ಅಂತರದಿಂದ ಬಿಜೆಪಿಯವರು() ಗೆಲ್ಲಲು ಸಾಧ್ಯವಾಗಿಲ್ಲ, ಜೆಡಿಎಸ್ ಬಿಜೆಪಿ ಮೈತ್ರಿಯಿಂದಾಗಿ ನಮಗೆ ಹಿನ್ನಡೆ ಆಗಿರಬಹುದು ಅಂತ ಮೇಲ್ನೋಟಕ್ಕೆ ಅನ್ನಿಸುತ್ತೆ, ಆದರೆ ಜೆಡಿಎಸ್ ನವರು ಒಂದು ಸ್ಥಾನ ಕಳೆದುಕೊಂಡಿದ್ದಾರೆ, ಬಿಜೆಪಿಯವರು ಹಲವಾರು ಸ್ಥಾನ ಕಳೆದುಕೊಂಡಿದ್ದಾರೆ ಎಂದು ವಿವರಿಸಿದರು. ಬೆಂಗಳೂರು ಗ್ರಾಮಾಂತರದಲ್ಲಿ ಡಿ ಕೆ ಸುರೇಶ್ ( ) ಸೋಲು ಅಘಾತ ತಂದಿದೆ, ಕಳೆದ ಬಾರಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟಾರ್ಗೆಟ್ ಮಾಡಿದಂತೆ ಈ ಬಾರಿ ಬಿಜೆಪಿಯವರು ಡಿ ಕೆ ಸುರೇಶ್ ಅವರನ್ನು ಟಾರ್ಗೆಟ್ ಮಾಡಿದ್ರು, ಖರ್ಗೆ ಅವರನ್ನು ಕಳೆದುಕೊಂಡು ಕಲಬುರಗಿ ಅಭಿವೃದ್ಧಿ ಕಾಣದಂತೆ ಆಯಿತು. ಅದೇ ರೀತಿ ಬೆಂಗಳೂರು ಗ್ರಾಮಾಂತರ ಜನರೂ ಅನುಭವಿಸ್ತಾರೆ ಎಂದು ಬೇಸರ ಹೊರಹಾಕಿದರು. ದೇಶದಲ್ಲಿ 295 ಸ್ಥಾನ ಗೆಲ್ಲುವ ನಿರೀಕ್ಷೆ ಹುಸಿಯಾಗಿರುವ ಬಗ್ಗೆ ಖರ್ಗೆ ಪ್ರತಿಕ್ರಿಯೆ ನೀಡಿ,ಜನ ನಮ್ಮ ನಿರೀಕ್ಷೆಯಂತೆ ಕೈ ಹಿಡಿಲಿಕ್ಕಿಲ್ಲ. ಆದ್ರೆ, ಬಿಜೆಪಿಯವರಿಗೂ ಜನ ಕೈ ಹಿಡಿದಿಲ್ಲ, ಅವರು ಚಾರಸೋ ಪಾರ್ ಅಂತಿದ್ರು, ಕೇಂದ್ರದಲ್ಲಿ ಅಧಿಕಾರ ಹಿಡಿಯಲು ನಾವು ಖಂಡಿತ ಪ್ರಯತ್ನ ಮಾಡ್ತಿವಿ, ನಾವು ಚುನಾವಣೆ ನಡೆಸುವುದೇ ಅಧಿಕಾರಕ್ಕೆ ಬರುವುದಕ್ಕೋಸ್ಕರ, ಅಧಿಕಾರ ಪಡೆಯುವುದು ಜ‌ನ ಸೇವೆ ಮಾಡಲು ಸಂವಿಧಾನ ಉಳಿಸಲು.ನಮ್ಮ ಹಳೆಯ ಸ್ನೇಹಿತರ ಭೇಟಿ ಮಾಡ್ತಿವಿ, ಅವರೂ ನಮ್ಮ ಜೊತೆ ಬರಬಹುದು ಬಿಜೆಪಿಯವರೂ ನಮ್ಮ ಜೊತೆ ಬರಬಹುದುಕಾದು ನೋಡೋಣ ಏನಾಗುತ್ತದೆ ಎಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ವೀಕ್ಷಿಸಿ:ಶ್ರೀರಾಮುಲು ನಾವು ಜೊತೆಗಿದ್ದೆವು ಅವರ ಸೋಲಿಗೆ ಅನುಕಂಪವಿದೆ: ಸಚಿವ ನಾಗೇಂದ್ರ