ಚುನಾವಣೆಗೂ ಮುನ್ನ ಗೃಹ ಲಕ್ಷ್ಮಿ ಹಣ ಜಮೆ..! ಹಲವು ಫಲಾನುಭವಿಗಳಿಗೆ ಈ ತಿಂಗಳ ಆರಂಭದಲ್ಲಿ 2 ಸಾವಿರ ರು. ಪಾವತಿಯಾಗಿತ್ತು. ಏ.24 ರಂದು ಪುನಃ 2 ಸಾವಿರ ರು. ವರ್ಗಾವಣೆ ಆಗಿದ್ದರಿಂದ '10 ದಿವಸ ಮೊದಲೇ ಮೇ ತಿಂಗಳ ಹಣ ಪಾವತಿಯಾಗಿದೆ. ಚುನಾವಣೆಯಲ್ಲಿ ಮಹಿಳೆಯರ ಮತ ಪಡೆಯಲು ಹೀಗೆ ಮಾಡಲಾಗಿದೆ' ಎಂಬ ಸಂದೇಶಗಳು ಹರಿದಾಡಿದ್ದವು. ಆದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದನ್ನು ಸ್ಪಷ್ಟವಾಗಿ ನಿರಾಕರಿಸಿದೆ. ಬೆಂಗಳೂರು(ಏ.25):ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಿಳಾ ಮತದಾರರನ್ನು 'ಸೆಳೆಯಲು' ಗೃಹ ಲಕ್ಷ್ಮಿ ಯೋಜನೆಯ ಮೇ ತಿಂಗಳ 2 ಸಾವಿರ ರು. ಮುಂಗಡವಾಗಿ ವರ್ಗಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಇದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಗಳು ನಿರಾಕರಿಸಿದ್ದು, ಮಾರ್ಚ್ ತಿಂಗಳ ಬಾಕಿಯನ್ನು ಪಾವತಿಸಲಾಗಿದೆ ಎಂದು ಸ್ಪಷ್ಟಪಡಿಸಿವೆ. ಲೋಕಸಭೆ ಚುನಾವಣೆ 2024: ಗೃಹಲಕ್ಷ್ಮಿ ಹಣ ಜಯಪ್ರಕಾಶ್ ಹೆಗಡೆಗೆ ದೇಣಿಗೆ ನೀಡಿದ ಮಹಿಳೆ..! ಹಲವು ಫಲಾನುಭವಿಗಳಿಗೆ ಈ ತಿಂಗಳ ಆರಂಭದಲ್ಲಿ 2 ಸಾವಿರ ರು. ಪಾವತಿಯಾಗಿತ್ತು. ಏ.24 ರಂದು ಪುನಃ 2 ಸಾವಿರ ರು. ವರ್ಗಾವಣೆ ಆಗಿದ್ದರಿಂದ '10 ದಿವಸ ಮೊದಲೇ ಮೇ ತಿಂಗಳ ಹಣ ಪಾವತಿಯಾಗಿದೆ. ಚುನಾವಣೆಯಲ್ಲಿ ಮಹಿಳೆಯರ ಮತ ಪಡೆಯಲು ಹೀಗೆ ಮಾಡಲಾಗಿದೆ' ಎಂಬ ಸಂದೇಶಗಳು ಹರಿದಾಡಿದ್ದವು. ಆದರೆ ಇಲಾಖೆಯು ಇದನ್ನು ಸ್ಪಷ್ಟವಾಗಿ ನಿರಾಕರಿಸಿದೆ.