: ಅಜ್ಜಿಯನ್ನ ಕೊಲ್ಲಲು ಕೇವಲ 60 ಸಾವಿರ ಮಾತ್ರ ಕಾರಣನಾ? ಆಕೆಯನ್ನ ಮುಗಿಸಲು ಆತ ಹಾಕಿದ ಸ್ಕೆಚ್ ಎಂಥದ್ದು? ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನಪೇಟೆ ಸಮೀಪದ ಹುಂಚ ಗ್ರಾಮದ ಮುತ್ತಿನಕೆರೆಯಲ್ಲಿ ಅಪರಿಚಿತ ವೃದ್ಧೆಯ ಶವ ಪತ್ತೆಯಾಗಿದೆ. ಅವಳು ಒಂಟಿ ವೃದ್ಧೆ, ಇದ್ದೊಬ್ಬ ಮಗಳು ಸತ್ತು ಹೋದ ಮೇಲೆ ಮೊಮ್ಮಕ್ಕಳ ಜವಬ್ದಾರಿಯನ್ನ ಆಕೆಯೇ ಹೊತ್ತಿದ್ದಳು. ಕಷ್ಟಪಟ್ಟು ದುಡಿದು ಸಂಪಾದಿಸುತ್ತಿದ್ದಳು. ಇನ್ನೂ ಬೇಜಾನು ದುಡ್ಡು ಸಂಪಾದಿಸುವ ಕನಸು ಕಂಡಿದ್ದ ಆಕೆ ಕೆಲವರಿಗೆ ಬಡ್ಡಿಗೆ ದುಡ್ಡನ್ನೂ ಕೊಟ್ಟಿದ್ಲು. ಹೀಗೆ ಇಳಿ ವಯಸ್ಸಿನಲ್ಲಿ ಸಖತ್ ಆ್ಯಕ್ಟೀವಾಗಿದ್ದ ಆಜ್ಜಿ( ) ಆವತ್ತೊಂದೊಂದು ದಿನ ನಾಪತ್ತೆಯಾಗಿಬಿಟ್ಟಿದ್ದಳು. ಎಲ್ಲೇ ಹುಡುಕಾಡಿದ್ರೂ ಸಹ ಆಕೆ ಸಿಗೋದಿಲ್ಲ. ಆದ್ರೆ ಕೊನೆಯಲ್ಲಿ ಅವಳ ಮೃತದೇಹ() ಕೆರೆಯಲ್ಲಿ ಸಿಗುತ್ತೆ. ಅವಳನ್ನ ಯಾರೋ ಕೊಂದು ಕೆರೆಯಲ್ಲಿ ಬಿಸಾಕಿ ಹೋಗಿದ್ರು. ಇನ್ನೂ ಇದೇ ಕೇಸ್ ತನಿಖೆ ನಡೆಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಕೊಲೆಗಾರರ() ಹೆಡೆಮುರಿ ಕಟ್ಟಿದ್ರು. 60 ಸಾವಿರ ಹಣ ಪಡೆದಿದ್ದ ಮಯೂರನೇ ಅಜ್ಜಿಯನ್ನ ಕೊಂದು ಮುಗಿಸಿದ್ದ. ಜಯಮ್ಮ ಅಷ್ಟು ಸುಲಭವಾಗಿ ಯಾರನ್ನೂ ನಂಬುತ್ತಿರಲಿಲ್ಲ. ಈ ಕಾರಣಕ್ಕೆ ಆಕೆ ಎಲ್ಲೇ ಹೋದ್ರೂ ತನ್ನ ಒಡವೆ ಹಣವನ್ನೆಲ್ಲಾ ಗಂಟು ಕಟ್ಟಿಕೊಂಡು ತಗೆದುಕೊಂಡು ಹೋಗ್ತಿದ್ಲು. ಆದ್ರೆ ತುಂಬಾ ಹತ್ತಿರವಿದ್ದವರಿಗೆ ಮಾತ್ರ ಬಡ್ಡಿಗೆ ಹಣ ಕೊಡ್ತಿದ್ದಳು.ಅದರಲ್ಲಿ ಒಬ್ಬನೇ ಈ ಮಯೂರ. ಮೂರು ವರ್ಷದ ಹಿಂದೆ ಇದೇ ಜಯಮ್ಮ ಆತನಿಗೆ 60 ಸಾವಿರ ಹಣ ಬಡ್ಡಿಗೆ ಕೊಟ್ಟಿದ್ಲು. ಮಯೂರ ಕೂಡ ಸರಿಯಾಗಿ ಬಡ್ಡಿ ಹಣವನ್ನ ಕೊಟ್ಟುಕೊಂಡು ಹೋಗ್ತಿದ್ದ. ಅದ್ರೆ ಕಳೆದ ಮೂರು ತಿಂಗಳಿನಿಂದ ಬಡ್ಡಿ ಕೊಡೋದನ್ನ ನಿಲ್ಲಿಸಿದ್ದ. ಜಯಮ್ಮ ನೋಡುವಷ್ಟು ನೋಡಿ ಅಸಲು ಹಣವನ್ನೇ ಕೇಳಿಬಿಟ್ಟಳು. ಯಾವಾಗ ಜಯಮ್ಮ ಪೂರ್ತಿ ಹಣ ಕೇಳಿದ್ಲೋ ಬರಿಗೈಲ್ಲಿದ್ದ ಮೈಯೂರನಿಗೆ ದಿಕ್ಕೇ ತೋಚದಂತಾಗಿಬಿಡ್ತು. ಹಣ ಕೊಡೋ ಬದಲು ಅವಳನ್ನೇ ಮುಗಿಸೋ ನಿರ್ಧಾರ ಮಾಡಿದ್ದಾನೆ.ಇದನ್ನೂ ವೀಕ್ಷಿಸಿ: : ದೇಶದಲ್ಲಿ ಆರ್ಥಿಕ ದಿವಾಳಿಯತ್ತ ಕೇರಳ ಹೆಜ್ಜೆ: ಕೇಂದ್ರ ಕೊಟ್ಟ ಸಾಲ ದುರುಪಯೋಗ ಮಾಡಿಕೊಂಡಿತಾ ? ಅವಳು ಒಂಟಿ ವೃದ್ಧೆ, ಇದ್ದೊಬ್ಬ ಮಗಳು ಸತ್ತು ಹೋದ ಮೇಲೆ ಮೊಮ್ಮಕ್ಕಳ ಜವಬ್ದಾರಿಯನ್ನ ಆಕೆಯೇ ಹೊತ್ತಿದ್ದಳು. ಕಷ್ಟಪಟ್ಟು ದುಡಿದು ಸಂಪಾದಿಸುತ್ತಿದ್ದಳು. ಇನ್ನೂ ಬೇಜಾನು ದುಡ್ಡು ಸಂಪಾದಿಸುವ ಕನಸು ಕಂಡಿದ್ದ ಆಕೆ ಕೆಲವರಿಗೆ ಬಡ್ಡಿಗೆ ದುಡ್ಡನ್ನೂ ಕೊಟ್ಟಿದ್ಲು. ಹೀಗೆ ಇಳಿ ವಯಸ್ಸಿನಲ್ಲಿ ಸಖತ್ ಆ್ಯಕ್ಟೀವಾಗಿದ್ದ ಆಜ್ಜಿ( ) ಆವತ್ತೊಂದೊಂದು ದಿನ ನಾಪತ್ತೆಯಾಗಿಬಿಟ್ಟಿದ್ದಳು. ಎಲ್ಲೇ ಹುಡುಕಾಡಿದ್ರೂ ಸಹ ಆಕೆ ಸಿಗೋದಿಲ್ಲ. ಆದ್ರೆ ಕೊನೆಯಲ್ಲಿ ಅವಳ ಮೃತದೇಹ() ಕೆರೆಯಲ್ಲಿ ಸಿಗುತ್ತೆ. ಅವಳನ್ನ ಯಾರೋ ಕೊಂದು ಕೆರೆಯಲ್ಲಿ ಬಿಸಾಕಿ ಹೋಗಿದ್ರು. ಇನ್ನೂ ಇದೇ ಕೇಸ್ ತನಿಖೆ ನಡೆಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಕೊಲೆಗಾರರ() ಹೆಡೆಮುರಿ ಕಟ್ಟಿದ್ರು. 60 ಸಾವಿರ ಹಣ ಪಡೆದಿದ್ದ ಮಯೂರನೇ ಅಜ್ಜಿಯನ್ನ ಕೊಂದು ಮುಗಿಸಿದ್ದ. ಜಯಮ್ಮ ಅಷ್ಟು ಸುಲಭವಾಗಿ ಯಾರನ್ನೂ ನಂಬುತ್ತಿರಲಿಲ್ಲ. ಈ ಕಾರಣಕ್ಕೆ ಆಕೆ ಎಲ್ಲೇ ಹೋದ್ರೂ ತನ್ನ ಒಡವೆ ಹಣವನ್ನೆಲ್ಲಾ ಗಂಟು ಕಟ್ಟಿಕೊಂಡು ತಗೆದುಕೊಂಡು ಹೋಗ್ತಿದ್ಲು. ಆದ್ರೆ ತುಂಬಾ ಹತ್ತಿರವಿದ್ದವರಿಗೆ ಮಾತ್ರ ಬಡ್ಡಿಗೆ ಹಣ ಕೊಡ್ತಿದ್ದಳು.ಅದರಲ್ಲಿ ಒಬ್ಬನೇ ಈ ಮಯೂರ. ಮೂರು ವರ್ಷದ ಹಿಂದೆ ಇದೇ ಜಯಮ್ಮ ಆತನಿಗೆ 60 ಸಾವಿರ ಹಣ ಬಡ್ಡಿಗೆ ಕೊಟ್ಟಿದ್ಲು. ಮಯೂರ ಕೂಡ ಸರಿಯಾಗಿ ಬಡ್ಡಿ ಹಣವನ್ನ ಕೊಟ್ಟುಕೊಂಡು ಹೋಗ್ತಿದ್ದ. ಅದ್ರೆ ಕಳೆದ ಮೂರು ತಿಂಗಳಿನಿಂದ ಬಡ್ಡಿ ಕೊಡೋದನ್ನ ನಿಲ್ಲಿಸಿದ್ದ. ಜಯಮ್ಮ ನೋಡುವಷ್ಟು ನೋಡಿ ಅಸಲು ಹಣವನ್ನೇ ಕೇಳಿಬಿಟ್ಟಳು. ಯಾವಾಗ ಜಯಮ್ಮ ಪೂರ್ತಿ ಹಣ ಕೇಳಿದ್ಲೋ ಬರಿಗೈಲ್ಲಿದ್ದ ಮೈಯೂರನಿಗೆ ದಿಕ್ಕೇ ತೋಚದಂತಾಗಿಬಿಡ್ತು. ಹಣ ಕೊಡೋ ಬದಲು ಅವಳನ್ನೇ ಮುಗಿಸೋ ನಿರ್ಧಾರ ಮಾಡಿದ್ದಾನೆ. ಇದನ್ನೂ ವೀಕ್ಷಿಸಿ: : ದೇಶದಲ್ಲಿ ಆರ್ಥಿಕ ದಿವಾಳಿಯತ್ತ ಕೇರಳ ಹೆಜ್ಜೆ: ಕೇಂದ್ರ ಕೊಟ್ಟ ಸಾಲ ದುರುಪಯೋಗ ಮಾಡಿಕೊಂಡಿತಾ ?