ರಾಜ್ಯದ ಈವರೆಗಿನ ಕೊಳವೆಬಾವಿ ದುರಂತದಲ್ಲಿ ವಿಜಯಪುರವೇ ಟಾಪ್, ಬದುಕಿ ಬಂದಿದ್ದು ಒಬ್ಬಾಕೆ ಮಾತ್ರ! ರಾಜ್ಯದಲ್ಲಿ ಕೊಳವೆಬಾವಿ ದುರಂತ ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಕರ್ನಾಟಕದಲ್ಲಿ ಒಟ್ಟು 8 ಕೊಳವೆಬಾವಿ ದುರಂತಗಳು ನಡೆದಿದೆ. ವಿಪರ್ಯಾಸವೆಂದರೆ ವಿಜಯಪುರದಲ್ಲೇ ಹೆಚ್ಚು. ವಿಜಯಪುರ (ಏ.4):ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಬುಧವಾರ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು ಸಾತ್ವಿಕ್ ಮುಜಗೊಂಡ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಗುರುವಾರ ಬೆಳಗ್ಗೆ 10 ಗಂಟೆಯ ಹೊತ್ತಿಗೆ ಮಗುವನ್ನು ಉಳಿಸುವ ಕಾರ್ಯಾಚರಣೆ 16 ಗಂಟೆ ಪೂರೈಸಿದೆ. 16 ಗಂಟೆಗಳಿಂದ ಮಗು ಅನ್ನ ನೀರು ಇಲ್ಲದೆ 16 ಅಡಿ ಆಳದಲ್ಲಿ ಮಗು ನರಳಾಡುತ್ತಿದೆ. ಇದರ ಜೊತೆಗೆ ಮಗುವಿನ ಚಲನವಲನಗಳ ಬಗ್ಗೆ ಕ್ಯಾಮಾರದಲ್ಲಿ ಗಮನಿಸಲಾಗುತ್ತಿದ್ದು, ಮಗು ಕಾಲು ಅಲ್ಲಾಡಿಸುತ್ತಿರುವುದು ಕ್ಯಾಮರಾದಲ್ಲಿ ದಾಖಲಾಗಿದೆ. ಮಗುವನ್ನು ಹೊರ ತೆಗೆದ ತಕ್ಷಣ ಪ್ರಥಮ ಚಿಕಿತ್ಸೆ ನೀಡಲು, ವೈದ್ಯರ ತಂಡ, ಆಂಬುಲೆನ್ಸ್‌ಗಳು ಸ್ಥಳದಲ್ಲಿ ಜಮಾಯಿಸಿದೆ. ಕೊಳವೆಬಾವಿಯಲ್ಲಿ ಸಿಲುಕಿರುವ ಮಗು ರಕ್ಷಣೆಗೆ ಕೇವಲ ಅರ್ಧ ಅಡಿ ಬಾಕಿ, ಕಲ್ಲು ಬಂಡೆಗಳೇ ಅಡ್ಡಿ! ರಾಜ್ಯದಲ್ಲಿ ಕೊಳವೆಬಾವಿ ದುರಂತ ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಕರ್ನಾಟಕದಲ್ಲಿ ಒಟ್ಟು 8 ಕೊಳವೆಬಾವಿ ದುರಂತಗಳು ನಡೆದಿದೆ. 2000 ನೇ ಇಸವಿಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ರಾಯಚೂರು, ವಿಜಯಪುರ ಹಾಗೂ ಬಾಗಲಕೋಟೆ , ದಾವಣಗೆರೆ, ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 8 ಪ್ರಕರಣಗಳು ನಡೆದಿದೆ. ಆದರೆ ಬದುಕಿ ಬಂದಿದ್ದು ಮಾತ್ರ ಕೇವಲ ಒಂದು ಘಟನೆ. ಇಲ್ಲಿ ರಾಜ್ಯದಲ್ಲಿ ನಡೆದ ಕೊಳವೆಬಾವಿ ದುರಂತದ ಪಟ್ಟಿ ನೀಡಲಾಗಿದೆ. ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು, ರಕ್ಷಣಾ ಕಾರ್ಯಾಚರಣೆ ಆರಂಭ! ರೈತರು ಕೃಷಿ ನೀರಿಗಾಗಿ ಕೊಳವೆಬಾವಿ ಕೊರೆಸುವುದು ಸಾಮಾನ್ಯವಾಗಿದೆ. ಆದರೆ ನೀರು ಸಿಗದೇ ಇದ್ದಾಗ ಅದನ್ನು ಮುಚ್ಚುವುದು ಅಷ್ಟೇ ಮುಖ್ಯವಾಗಿದೆ. ಕೆಲ ಕಡೆಗಳಲ್ಲಿ ನೀರು ಬರದಾದಾಗ ನೊಂದ ರೈತರು ಮುಚ್ಚುವ ಗೋಜಿಗೆ ಹೋಗುವುದಿಲ್ಲ. ಹೀಗಾಗಿಯೇ ಇಂತಹ ದುರಂತಗಳು ನಡೆಯುತ್ತಿವೆ. ಈ ರೀತಿಯ ಘಟನೆಗಳು ನಡೆದಿರುವ ಬಗ್ಗೆ ಗೊತ್ತಿದ್ದರೂ ಅವುಗಳನ್ನು ಮುಚ್ಚಲು ಮನಸ್ಸು ಮಾಡುವುದಿಲ್ಲ ಎಂಬುದೇ ಬೇಸರದ ಸಂಗತಿಯಾಗಿದೆ.