ಲೋಕಸಭಾ ಚುನಾವಣೆ 2024: ಕರ್ನಾಟಕದ ಬಿಜೆಪಿ- ಕಾಂಗ್ರೆಸ್- ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ... ಲೋಕಸಭಾ ಚುನಾವಣೆ 2024 ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ಕರ್ನಾಟಕದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ... ಈವರೆಗೆ ಜೆಡಿಎಸ್‌ ತನ್ನ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ.. ಬೆಂಗಳೂರು ಮಾ(29):ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಾವೇರಿದ್ದು, ಈಗಾಗಲೇ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸ್ಪರ್ಧೆ ಮಾಡುವ 25 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇನ್ನು ಕಾಂಗ್ರೆಸ್‌ ಈವರೆಗೆ 24 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, 4 ಕ್ಷೇತ್ರಗಳ ಪಟ್ಟಿಯನ್ನು ಬಾಕಿ ಉಳಿಸಿಕೊಂಡಿದೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ 3 ಕ್ಷೇತ್ರಗಳನ್ನು ಪಡೆದುಕೊಂಡಿದ್ದು, ಈವರೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ದೇಶದ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ- ಕಾಂಗ್ರೆಸ್‌ ದೇಶದ ಲೋಕಸಭೆಯಲ್ಲಿ ಅಧಿಕಾರ ಹಿಡಿಯಲು ಭಾರಿ ಕಸರತ್ತು ನಡೆಸುತ್ತಿವೆ. ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಧಿಕಾರ ಕಿತ್ತುಕೊಳ್ಳಲು ಕಾಂಗ್ರೆಸ್‌ 'ಇಂಡಿಯಾ ಮೈತ್ರಿಕೂಟ' ಕಟ್ಟಿಕೊಂಡು ಕಾಳಗಕ್ಕಿಳಿದಿದೆ. ಈವರೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಬಹುತೇಕ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿವೆ. ಅವುಗಳ ಪಟ್ಟಿ ಇಲ್ಲಿದೆ ನೋಡಿ... : ಸದಾ ಬಿಜೆಪಿಯಲ್ಲಿ ಟಿಕೆಟ್ ಗೊಂದಲ ಯಾಕೆ?: ಪ್ರಶಾಂತ್‌ ನಾತು ಕರ್ನಾಟಕ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ: ಬಿಜೆಪಿ ಮೈತ್ರಿ ಪಕ್ಷ ಜೆಡಿಎಸ್ (ಸಂಭಾವ್ಯ) ಅಭ್ಯರ್ಥಿಗಳು ದೆಹಲಿ ಹೈಕೋರ್ಟ್‌ ಅರ್ಜಿ ತಿರಸ್ಕರಿಸಿದ ಬೆನ್ನಲ್ಲಿಯೇ ಕಾಂಗ್ರೆಸ್‌ಗೆ 1700 ಕೋಟಿ ರೂಪಾಯಿ ಐಟಿ ನೋಟಿಸ್‌! ಕಾಂಗ್ರೆಸ್ ಈವರೆಗೆ ಘೋಷಣೆ ಮಾಡಿರುವ ರಾಜ್ಯದ 24 ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು: 1. ಬಿಜಾಪುರ-ರಾಜು ಅಲಗೋರ್‌2. ಹಾವೇರಿ- ಅನಂದ್‌ಸ್ವಾಮಿ ಗಡ್ಡೇವರ ಮಠ3. ತುಮಕೂರು- ಎಸ್‌.ಪಿ. ಮುದ್ದಹನುಮೇಗೌಡ4. ಮಂಡ್ಯ- ವೆಂಕಟರಾಮೇಗೌಡ (ಸ್ಟಾರ್‌ ಚಂದ್ರು)5. ಬೆಂಗಳೂರು ಗ್ರಾಮಾಂತರ- ಡಿ.ಕೆ. ಸುರೇಶ್‌6. ಶಿವಮೊಗ್ಗ- ಗೀತಾ ಶಿವರಾಜ್‌ಕುಮಾರ್‌7. ಹಾಸನ - ಶ್ರೇಯಸ್‌ ಪಟೇಲ್‌8. ಬೆಳಗಾವಿ - ಮೃಣಾಲ್ ಹೆಬ್ಬಾಳಕರ್9. ಬಾಗಲಕೋಟೆ- ಸಂಯುಕ್ತ ಪಾಟೀಲ್10. ಕಲಬುರಗಿ - ಡಾ. ರಾಧಾಕೃಷ್ಣ ದೊಡ್ಡಮನಿ11. ರಾಯಚೂರು- ಕುಮಾರ್ ನಾಯ್ಕ್12. ಬೀದರ್ - ಸಾಗರ್ ಖಂಡ್ರೆ13. ಕೊಪ್ಪಳ - ರಾಜಶೇಖರ್ ಹಿಟ್ನಾಳ್14. ಧಾರವಾಡ - ವಿನೋದ್ ಅಸೂಟಿ15. ದಾವಣಗೆರೆ - ಪ್ರಭಾವತಿ ಮಲ್ಲಿಕಾರ್ಜುನ್16. ಉಡುಪಿ-ಚಿಕ್ಕಮಗಳೂರು- ಜಯಪ್ರಕಾಶ್ ಹೆಗ್ಡೆ17. ದಕ್ಷಿಣ ಕನ್ನಡ - ಪದ್ಮರಾಜ್18. ಮೈಸೂರು-ಕೊಡಗು - ಎಂ. ಲಕ್ಷ್ಮಣ್19. ಬೆಂಗಳೂರು ಉತ್ತರ - ಪ್ರೊ.‌ರಾಜೀವ್ ಗೌಡ20. ಬೆಂಗಳೂರು ಕೇಂದ್ರ - ಮನ್ಸೂರ್ ಖಾನ್21. ಬೆಂಗಳೂರು ದಕ್ಷಿಣ - ಸೌಮ್ಯ ರೆಡ್ಡಿ22. ಉತ್ತರ ಕನ್ನಡ - ಅಂಜಲಿ‌ ನಿಂಬಾಳ್ಕರ್23. ಚಿತ್ರದುರ್ಗ - ಬಿಎನ್ ಚಂದ್ರಪ್ಪ24. ಚಿಕ್ಕೋಡಿ- ಪ್ರಿಯಾಂಕ ಜಾರಕಿಹೊಳಿ ಬಾಕಿ ಇರುವ ಕ್ಷೇತ್ರಗಳು25. ಚಿಕ್ಕಬಳ್ಳಾಪುರ-26. ಕೋಲಾರ-27. ಚಾಮರಾಜನಗರ-28. ಬಳ್ಳಾರಿ-