ಕಾಂಗ್ರೆಸ್‌ ಸರ್ಕಾರದ ಆಡಳಿತದಿಂದ ಜನರು ಹತಾಶ: ಕರ್ನಾಟಕದ ಮನಸ್ಥಿತಿಯನ್ನು ನಾನು ಕಂಡೆ, ಪ್ರಧಾನಿ ಮೋದಿ ಶಿವಮೊಗ್ಗದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಕರ್ನಾಟಕದ ಮನಸ್ಥಿತಿಯನ್ನು ಕಾಣಬಹುದಾಗಿದೆ. ಕಾಂಗ್ರೆಸ್‌ನ ಕಳಪೆ ಆಡಳಿತದಿಂದ ಜನರು ಈಗಾಗಲೇ ಹತಾಶರಾಗಿದ್ದಾರೆ: ಪ್ರಧಾನಿ ನರೇಂದ್ರ ಮೋದಿ ನವದೆಹಲಿ(ಮಾ.19):ಸೋಮವಾರ ಕರ್ನಾಟಕದ ಶಿವಮೊಗ್ಗದಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಇಲ್ಲಿ ನಾನು ಕರ್ನಾಟಕದ ಮನಸ್ಥಿತಿಯನ್ನು ಕಂಡೆ’ ಎಂದು ಹೇಳಿದ್ದಾರೆ ಹಾಗೂ ಸಮಾವೇಶದ ಫೋಟೋಗಳನ್ನು ಟ್ವೀಟ್‌ ಮಾಡಿದ್ದಾರೆ ‘ಭವ್ಯವಾದ ಶಿವಮೊಗ್ಗ! ಸಾರ್ವಜನಿಕ ಸಭೆಗೆ ತೆರಳುವಾಗ ನನ್ನನ್ನು ಆಶೀರ್ವದಿಸಲು ಆಗಮಿಸಿದ ಅಪಾರ ಸಂಖ್ಯೆಯ ಯುವಜನರು ಮತ್ತು ಮಹಿಳೆಯರಿಗೆ ಕೃತಜ್ಞತೆಗಳು ಎಂದು ಪ್ರಧಾನಿ ನರೇಂದ್ರ ಮೋದಿ ಬರೆದುಕೊಂಡಿದ್ದಾರೆ. 2024: ಈ ಚುನಾವಣೆ ಶಕ್ತಿ ಸಂಹಾರಕ, ಆರಾಧಕರ ನಡುವಿನ ಯುದ್ಧ, ಮೋದಿ ಶಿವಮೊಗ್ಗದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಕರ್ನಾಟಕದ ಮನಸ್ಥಿತಿಯನ್ನು ಕಾಣಬಹುದಾಗಿದೆ. ಕಾಂಗ್ರೆಸ್‌ನ ಕಳಪೆ ಆಡಳಿತದಿಂದ ಜನರು ಈಗಾಗಲೇ ಹತಾಶರಾಗಿದ್ದಾರೆ’ ಎಂದು ಅವರು ಟ್ವೀಟರ್‌ನಲ್ಲಿ ಹೇಳಿದ್ದಾರೆ.