: ದೇಶದಲ್ಲೇ ಮೊದಲ ಬಾರಿಗೆ ಸಾರ್ವಜನಿಕರಿಗಾಗಿ ವೈಫೈ-7 ಪ್ರಾರಂಭ: ಭಾರತ್ ಏರ್‌ ಫೈ ನೂತನ ಸಂಪರ್ಕ ಸೇವೆ ದೇಶದಲ್ಲೇ ಮೊದಲ ಬಾರಿಗೆ ಸಾರ್ವಜನಿಕರಿಗಾಗಿ ವೈಫೈ-7 ಸೇವೆಯನ್ನು ಕುಮಟಾದ ಯಾಣದಲ್ಲಿ ಪ್ರಾರಂಭ ಮಾಡಲಾಗಿದೆ. ಉತ್ತರಕನ್ನಡ:ಪ್ರವಾಸೋದ್ಯಮ ಉತ್ತೇಜಿಸಲು ಉತ್ತರಕನ್ನಡ( ) ಜಿಲ್ಲೆಯಲ್ಲಿ ವೈಫೈ -7 ಸೇವೆ(--7 ) ಪ್ರಾರಂಭ ಮಾಡಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಸಾರ್ವಜನಿಕರಿಗಾಗಿ ವೈಫೈ-7 ಸೇವೆಯನ್ನು ಕುಮಟಾದ ಯಾಣದಲ್ಲಿ ಪ್ರಾರಂಭ ಮಾಡಲಾಗಿದೆ. ಇನ್ಮುಂದೆ ದಟ್ಟ ಕಾಡಿನ ಒಳಗಿರುವ ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಹೈ ಸ್ಪೀಟ್ ಇಂಟರ್‌ನೆಟ್() ಸೇವೆ ದೊರೆಯಲಿದೆ. ಬಿಎಸ್‌ಎನ್‌ಎಲ್ ಹಾಗೂ ಜಿಎನ್‌ಎ ಕಂಪೆನಿ ಸಹಯೋಗದಲ್ಲಿ ಭಾರತ್ ಏರ್‌ ಫೈ ನೂತನ ಸಂಪರ್ಕ ಸೇವೆ ಆರಂಭಿಸಿದೆ. ಜಪಾನೀಸ್ ತಂತ್ರಜ್ಞಾನವನ್ನು ಬಳಸಿಕೊಂಡು ಜನರಿಗಾಗಿ ವೈಫೈ ಸೇವೆ ಒದಗಿಸಲಾಗುತ್ತಿದೆ. ಸ್ವಂತ ಮುತುವರ್ಜಿ ವಹಿಸಿಕೊಂಡು ದೇಶದಲ್ಲೇ ಮೊದಲ ಬಾರಿಗೆ ಯಾಣದಲ್ಲಿ ವೈಫೈ -7 ಸೇವೆಯನ್ನು ಸಂಸದ ಅನಂತ ಕುಮಾರ್ ಹೆಗಡೆ ಕಾರ್ಯರೂಪಕ್ಕೆ ತರಿಸಿದ್ದಾರೆ. ವೈಫೈ-7 ಭಾರತ್ ಏರ್ ಫೈ ಸೇವೆಗೆ ಸಂಸದ ಅನಂತ ಕುಮಾರ್ ಹೆಗಡೆ( ) ಚಾಲನೆ ನೀಡಿದರು. ಶ್ರೀ ಗಂಗಾ, ಚಂಡಿಕಾ, ಭೈರವೇಶ್ವರ ದೇವರ ದರ್ಶನ, ಪ್ರಪಂಚದ ಅದ್ಭುತ ಯಾಣ ಗುಹೆ, ಪ್ರಕೃತಿ ಸೌಂದರ್ಯ ಕ್ಷಣಮಾತ್ರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಸಾಧ್ಯವಾಗಲಿದೆ. ಕ್ಯೂಆರ್ ಕೋಡ್ ಮೂಲಕ ಪ್ಯಾಕೇಜ್ ಖರೀದಿಸಿ ವೈಫೈ ಸೇವೆ ಬಳಸಲು ವ್ಯವಸ್ಥೆ ಮಾಡಲಾಗಿದೆ.35 ನಿಮಿಷ, 65 ನಿಮಿಷ ಹಾಗೂ ಒಂದು ಪೂರ್ಣ ದಿನದ ವೈಫೈ ಸೇವೆಯನ್ನು ವಿವಿಧ ದರದಲ್ಲಿ ಕೇವಲ 100ರೂ. ಒಳಗೆ ಪಡೆಯಲು ಅವಕಾಶ ನೀಡಲಾಗಿದೆ. ಪ್ರವಾಸಿಗರಿಗೆ ಕ್ಷೇತ್ರದಿಂದ ಒಂದು ಕಿ.ಮೀ. ರೇಂಜ್ ವ್ಯಾಪ್ತಿಯವರೆಗೆ ಉತ್ತಮ ವೈಫೈ ಸೇವೆ ದೊರೆಯಲಿದೆ. ದಟ್ಟ ಕಾಡಿನಿಂದ ಆವರಿಸಿರುವ ಯಾಣದಲ್ಲಿ ಈ ಹಿಂದೆ ಕಿ.ಮೀ.ಗಟ್ಟಲೇ ಇಂಟರ್‌ನೆಟ್ ದೊರೆಯುತ್ತಿರಲಿಲ್ಲ. ಉತ್ತಮ ಕ್ಷಣಗಳನ್ನು ಶೇರ್ ಮಾಡಲು, ಯಾವುದೇ ಸಮಸ್ಯೆಗಳಾದ್ರೂ ಯಾರನ್ನೂ ಸಂಪರ್ಕಿಸಲಾಗ್ತಿರ್ಲಿಲ್ಲ. ಆದ್ರೆ, ನೂತನ ಹೈ ಸ್ಪೀಡ್ ವೈಫೈನೊಂದಿಗೆ ಕ್ಷಣ ಮಾತ್ರದಲ್ಲಿ ಎಲ್ಲಾ ಕೆಲಸಗಳು ಮಾಡಲು ಸಾಧ್ಯವಾಗಲಿದೆ. ಸದ್ಯಕ್ಕೆ ವೈಫೈ-6 ನೀಡಿ 2-3 ತಿಂಗಳಲ್ಲಿ ವೈಫೈ-7 ಸೇವೆಯೂ ಜನರು ಪಡೆಯಲು ವ್ಯವಸ್ಥೆ ಮಾಡಲಾಗಿದೆ.ಇದನ್ನೂ ವೀಕ್ಷಿಸಿ:ನನಗೆ ಲೋಕಸಭೆ ಟಿಕೆಟ್ ನೀಡದಿದ್ದರೆ ನೋವಾಗುತ್ತೆ, ಹೊಸ ಪ್ರಯೋಗ ಮಾಡಬೇಡಿ: ಡಿ.ವಿ.ಸದಾನಂದಗೌಡ ಉತ್ತರಕನ್ನಡ:ಪ್ರವಾಸೋದ್ಯಮ ಉತ್ತೇಜಿಸಲು ಉತ್ತರಕನ್ನಡ( ) ಜಿಲ್ಲೆಯಲ್ಲಿ ವೈಫೈ -7 ಸೇವೆ(--7 ) ಪ್ರಾರಂಭ ಮಾಡಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಸಾರ್ವಜನಿಕರಿಗಾಗಿ ವೈಫೈ-7 ಸೇವೆಯನ್ನು ಕುಮಟಾದ ಯಾಣದಲ್ಲಿ ಪ್ರಾರಂಭ ಮಾಡಲಾಗಿದೆ. ಇನ್ಮುಂದೆ ದಟ್ಟ ಕಾಡಿನ ಒಳಗಿರುವ ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಹೈ ಸ್ಪೀಟ್ ಇಂಟರ್‌ನೆಟ್() ಸೇವೆ ದೊರೆಯಲಿದೆ. ಬಿಎಸ್‌ಎನ್‌ಎಲ್ ಹಾಗೂ ಜಿಎನ್‌ಎ ಕಂಪೆನಿ ಸಹಯೋಗದಲ್ಲಿ ಭಾರತ್ ಏರ್‌ ಫೈ ನೂತನ ಸಂಪರ್ಕ ಸೇವೆ ಆರಂಭಿಸಿದೆ. ಜಪಾನೀಸ್ ತಂತ್ರಜ್ಞಾನವನ್ನು ಬಳಸಿಕೊಂಡು ಜನರಿಗಾಗಿ ವೈಫೈ ಸೇವೆ ಒದಗಿಸಲಾಗುತ್ತಿದೆ. ಸ್ವಂತ ಮುತುವರ್ಜಿ ವಹಿಸಿಕೊಂಡು ದೇಶದಲ್ಲೇ ಮೊದಲ ಬಾರಿಗೆ ಯಾಣದಲ್ಲಿ ವೈಫೈ -7 ಸೇವೆಯನ್ನು ಸಂಸದ ಅನಂತ ಕುಮಾರ್ ಹೆಗಡೆ ಕಾರ್ಯರೂಪಕ್ಕೆ ತರಿಸಿದ್ದಾರೆ. ವೈಫೈ-7 ಭಾರತ್ ಏರ್ ಫೈ ಸೇವೆಗೆ ಸಂಸದ ಅನಂತ ಕುಮಾರ್ ಹೆಗಡೆ( ) ಚಾಲನೆ ನೀಡಿದರು. ಶ್ರೀ ಗಂಗಾ, ಚಂಡಿಕಾ, ಭೈರವೇಶ್ವರ ದೇವರ ದರ್ಶನ, ಪ್ರಪಂಚದ ಅದ್ಭುತ ಯಾಣ ಗುಹೆ, ಪ್ರಕೃತಿ ಸೌಂದರ್ಯ ಕ್ಷಣಮಾತ್ರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಸಾಧ್ಯವಾಗಲಿದೆ. ಕ್ಯೂಆರ್ ಕೋಡ್ ಮೂಲಕ ಪ್ಯಾಕೇಜ್ ಖರೀದಿಸಿ ವೈಫೈ ಸೇವೆ ಬಳಸಲು ವ್ಯವಸ್ಥೆ ಮಾಡಲಾಗಿದೆ. 35 ನಿಮಿಷ, 65 ನಿಮಿಷ ಹಾಗೂ ಒಂದು ಪೂರ್ಣ ದಿನದ ವೈಫೈ ಸೇವೆಯನ್ನು ವಿವಿಧ ದರದಲ್ಲಿ ಕೇವಲ 100ರೂ. ಒಳಗೆ ಪಡೆಯಲು ಅವಕಾಶ ನೀಡಲಾಗಿದೆ. ಪ್ರವಾಸಿಗರಿಗೆ ಕ್ಷೇತ್ರದಿಂದ ಒಂದು ಕಿ.ಮೀ. ರೇಂಜ್ ವ್ಯಾಪ್ತಿಯವರೆಗೆ ಉತ್ತಮ ವೈಫೈ ಸೇವೆ ದೊರೆಯಲಿದೆ. ದಟ್ಟ ಕಾಡಿನಿಂದ ಆವರಿಸಿರುವ ಯಾಣದಲ್ಲಿ ಈ ಹಿಂದೆ ಕಿ.ಮೀ.ಗಟ್ಟಲೇ ಇಂಟರ್‌ನೆಟ್ ದೊರೆಯುತ್ತಿರಲಿಲ್ಲ. ಉತ್ತಮ ಕ್ಷಣಗಳನ್ನು ಶೇರ್ ಮಾಡಲು, ಯಾವುದೇ ಸಮಸ್ಯೆಗಳಾದ್ರೂ ಯಾರನ್ನೂ ಸಂಪರ್ಕಿಸಲಾಗ್ತಿರ್ಲಿಲ್ಲ. ಆದ್ರೆ, ನೂತನ ಹೈ ಸ್ಪೀಡ್ ವೈಫೈನೊಂದಿಗೆ ಕ್ಷಣ ಮಾತ್ರದಲ್ಲಿ ಎಲ್ಲಾ ಕೆಲಸಗಳು ಮಾಡಲು ಸಾಧ್ಯವಾಗಲಿದೆ. ಸದ್ಯಕ್ಕೆ ವೈಫೈ-6 ನೀಡಿ 2-3 ತಿಂಗಳಲ್ಲಿ ವೈಫೈ-7 ಸೇವೆಯೂ ಜನರು ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಇದನ್ನೂ ವೀಕ್ಷಿಸಿ:ನನಗೆ ಲೋಕಸಭೆ ಟಿಕೆಟ್ ನೀಡದಿದ್ದರೆ ನೋವಾಗುತ್ತೆ, ಹೊಸ ಪ್ರಯೋಗ ಮಾಡಬೇಡಿ: ಡಿ.ವಿ.ಸದಾನಂದಗೌಡ