ಬೆಂಗ್ಳೂರಿನ ಜಿಗಣಿಯಲ್ಲಿ ಚಿರತೆ ಓಡಾಟ: ಮನೆಯಿಂದ ಹೊರಬಾರದೆ ಜನರ ಪೀಕಲಾಟ..! ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಕ್ಯಾಲಸನಹಳ್ಳಿ ಗ್ರಾಮದಲ್ಲಿ. ಜಿಗಣಿ ಸಮೀಪದ ಕ್ಯಾಲಸನಹಳ್ಳಿಯಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ. ಖಾಸಗಿ ಲೇಔಟ್‌ನಲ್ಲಿ ಚಿರತೆ ಓಡಾಡಿದೆ. ನಸುಕಿನ ಜಾವ 3 ಗಂಟೆಯ ಸುಮಾರಿಗೆ ಚಿರತೆ ಓಡಾಡಿದೆ. ನಾಯಿಗಳು ಬೊಗಳೋ ಶಬ್ಧ ಕೇಳಿ ಸಿಸಿಟಿವಿ ಪರಿಶೀಲನೆ ವೇಳೆ ಚಿರತೆ ಓಡಾಟ ದೃಶ್ಯ ಕಂಡುಬಂದಿದೆ. ಬೆಂಗಳೂರು(ಸೆ.01):ಚಿರತೆಯೊಂದು ಕಾಡಿನಿಂದ ನಾಡಿಗೆ ಬಂದಿದೆ. ಹೌದು, ಗ್ರಾಮದ ಖಾಸಗಿ ಬಡಾವಣೆಯಲ್ಲಿ ಚಿರತೆ ಬಿಂದಾಸ್ ಆಗಿ ಓಡಾಟ ನಡೆಸಿದೆ. ಸಿಸಿಟಿವಿಯಲ್ಲಿ ಚಿರತೆ ಓಡಾಟದ ದೃಶ್ಯ ಸೆರೆಯಾಗಿದೆ. ಚಿರತೆಯ ಬಿಂದಾಸ್‌ ಓಡಾಟ ಕಂಡು ಜನರು ಬೆಚ್ಚಿಬಿದ್ದಿದ್ದಾರೆ. ಈ ಘಟನೆ ನಡೆದಿರೋದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಕ್ಯಾಲಸನಹಳ್ಳಿ ಗ್ರಾಮದಲ್ಲಿ. ಜಿಗಣಿ ಸಮೀಪದ ಕ್ಯಾಲಸನಹಳ್ಳಿಯಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ. ಚಾಮರಾಜನಗರದಲ್ಲಿ ಚಿರತೆ ದಾಳಿಗೆ ಹಸು ಬಲಿ: ಅರಣ್ಯಾಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ ಖಾಸಗಿ ಲೇಔಟ್‌ನಲ್ಲಿ ಚಿರತೆ ಓಡಾಡಿದೆ. ನಸುಕಿನ ಜಾವ 3 ಗಂಟೆಯ ಸುಮಾರಿಗೆ ಚಿರತೆ ಓಡಾಡಿದೆ. ನಾಯಿಗಳು ಬೊಗಳೋ ಶಬ್ಧ ಕೇಳಿ ಸಿಸಿಟಿವಿ ಪರಿಶೀಲನೆ ವೇಳೆ ಚಿರತೆ ಓಡಾಟ ದೃಶ್ಯ ಕಂಡುಬಂದಿದೆ. ಚಿರತೆ ಭಯದಲ್ಲಿರುವ ಗ್ರಾಮಸ್ಥರು ಮನೆಯಿಂದ ಹೊರಬಾರದೆ ಆತಂಕದಲ್ಲಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳ ದೌಡಾಯಿಸಿದ್ದಾರೆ.