ಚನ್ನಪಟ್ಟಣ ಟಿಕೆಟ್ ಬಗ್ಗೆ ಕೇಳಿದ ಕಾರ್ಯಕರ್ತರ ವಿರುದ್ಧ ಎಚ್‌ಡಿಕೆ ಗರಂ! ಕುಮಾರಸ್ವಾಮಿ ಭಾಷಣ ಆರಂಭಿಸುತ್ತಿದ್ದಂತೆ ಕೆಲ ಬಿಜೆಪಿ ಕಾರ್ಯಕರ್ತರು ಉಪಚುನಾವಣೆ ಟಿಕೆಟ್ ಕುರಿತು ಕೂಗು ಹಾಕಿದರು. ಈ ವೇಳೆ ನಾನಿಲ್ಲಿ ಟಿಕೆಟ್ ವಿಚಾರ ಮಾತನಾಡಲು ಬಂದಿಲ್ಲ ಎಂದು ಭಾಷಣ ಮುಂದುವರಿಸಿದರು. ಚನ್ನಪಟ್ಟಣ(ಆ.06):ಚನ್ನಪಟ್ಟಣ ಉಪಚುನಾವಣೆ ಟಿಕೆಟ್‌ಗೆ ಸಂಬಂಧಿಸಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಯೋಗೇಶ್ವರ್‌ಬೆಂಬಲಿಗರ ಮೇಲೆ ಗರಂ ಆದ ಪ್ರಸಂಗ ಮೈಸೂರು ಚಲೋ ಪಾದಯಾತ್ರೆಯಲ್ಲಿ ನಡೆಯಿತು. ಕುಮಾರಸ್ವಾಮಿ ಭಾಷಣ ಆರಂಭಿಸುತ್ತಿದ್ದಂತೆ ಕೆಲ ಬಿಜೆಪಿ ಕಾರ್ಯಕರ್ತರು ಉಪಚುನಾವಣೆ ಟಿಕೆಟ್ ಕುರಿತು ಕೂಗು ಹಾಕಿದರು. ಈ ವೇಳೆ ನಾನಿಲ್ಲಿ ಟಿಕೆಟ್ ವಿಚಾರ ಮಾತನಾಡಲು ಬಂದಿಲ್ಲ ಎಂದು ಭಾಷಣ ಮುಂದುವರಿಸಿದರು. ಕುಮಾರಸ್ವಾಮಿ ರಕ್ತದ ಕಣ ಕಣದಲ್ಲೂ ದ್ವೇಷ ತುಂಬಿದೆ: ಸಚಿವ ಚಲುವರಾಯಸ್ವಾಮಿ ಕಿಡಿ ಕೆಲ ಸಮಯದ ನಂತರ ಯೋಗೇಶ್ವ‌ರ್ ಬೆಂಬಲಿಗರು ಟಿಕೆಟ್ ವಿಚಾರಕ್ಕೆ ಮತ್ತೆ ಕೂಗು ಹಾಕಿದಾಗ ತಾಳ್ಮೆ ಕಳೆದುಕೊಂಡ ಕುಮಾರಸ್ವಾಮಿ, ಟಿಕೆಟ್ ವಿಚಾರವನ್ನು ಹಾದಿಬೀದಿಯಲ್ಲಿ ತೀರ್ಮಾನ ಮಾಡಲು ಆಗಲ್ಲ ಎಂದು ಗರಂ ಆದರು.