ಕೇರಳ ಗುಡ್ಡ ಕುಸಿತ ದುರಂತ ಪ್ರಕರಣ; ಸಂಕಷ್ಟಕ್ಕೆ ಸಿಲುಕಿದ ಕರ್ನಾಟಕದ ಝಾನ್ಸಿರಾಣಿ ಕುಟುಂಬ! ಕೇರಳ ಗುಡ್ಡ ಕುಸಿತ ದುರಂತ ಪ್ರಕರಣದಲ್ಲಿ ಕರ್ನಾಟಕದ ಝಾನ್ಸಿರಾಣಿ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಗುಡ್ಡ ಕುಸಿತದ ಬಳಿಕ ಅನಿಲ್ ತಾಯಿ ಲೀಲಾವತಿ(55) ಪುತ್ರ ನಿಹಾಲ್(2.5). ನಾಪತ್ತೆಯಾಗಿದ್ದಾರೆ. ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. : ಕೇರಳದ ವಯನಾಡ್ ಜಿಲ್ಲೆಯಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಮಣ್ಣಿನಲ್ಲಿ ಗ್ರಾಮಗಳೇ ಹೂತುಹೋಗಿವೆ. ಸಾವು ನೋವಿನ ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಿದೆ. ಮಕ್ಕಳು, ವಯಸ್ಕರ ಮೃತದೇಹಗಳು ನದಿಯಲ್ಲಿ ತೇಲುತ್ತಿರುವ ಭೀಕರ ದೃಶ್ಯ ಕಂಡು ದೇಶವೇ ಬೆಚ್ಚಿಬಿದ್ದಿದೆ. ಹಿಂದೆಂದೂ ಈ ರೀತಿಯ ಭೂಕುಸಿತ ಸಂಭವಿಸಿರಲಿಲ್ಲ. ಈ ದುರಂತದಲ್ಲಿ ಕರ್ನಾಟಕದ ಕುಟುಂಬವೊಂದು ನಾಪತ್ತೆಯಾಗಿದೆ. : ಚಿತ್ರಗಳಲ್ಲಿ ದೇವರನಾಡಿನ ಭೀಕರ ಭೂಕುಸಿತ! ಹೌದು ಕೇರಳ ಗುಡ್ಡ ಕುಸಿತ ದುರಂತ ಪ್ರಕರಣದಲ್ಲಿ ಕರ್ನಾಟಕದ ಝಾನ್ಸಿರಾಣಿ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ಝಾನ್ಸಿ, ಮೈಸೂರಿನ ಸರಗೂರಿನ ಅನಿಲ್ ಕುಮಾರ್ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು. : ಸಾವಿನ ಸಂಖ್ಯೆ 115ಕ್ಕೆ ಏರಿಕೆ, ಶವಗಳಿಂದ ಆಸ್ಪತ್ರೆಗಳೇ ಭರ್ತಿ! ಮದುವೆ ಬಳಿಕ ಇಬ್ಬರೂ ಕೇರಳದ ಮುಂಡಕೈಯಲ್ಲಿ ನೆಲೆಸಿದ್ದರು. ಅನಿಲ್, ಪತ್ನಿ ಝಾನ್ಸಿಯೊಂದಿಗೆ ಪುತ್ರ ನಿಹಾಲ್ ಹಾಗೂ ತಂದೆ-ತಾಯಿ ನೆಲೆಸಿದ್ದರು. ಆದರೆ ಗುಡ್ಡ ಕುಸಿತದ ಬಳಿಕ ನಾಪತ್ತೆಯಾಗಿರುವ ಅನಿಲ್ ತಾಯಿ ಲೀಲಾವತಿ(55) ಪುತ್ರ ನಿಹಾಲ್(2.5). ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮತ್ತೊಂದೆಡೆ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅನಿಲ್ ಹಾಗೂ ಪತ್ನಿ ಝಾನ್ಸಿ, ತಂದೆ ದೇವರಾಜು, ಮೂವರೂ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸದ್ಯ ಮೂವರಿಗೆ ಕೇರಳದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದುರಂತ ಬಳಿಕ ಕುಟುಂಬಸ್ಥರನ್ನು ಕಾಣಲು ಕೇರಳಕ್ಕೆ ತೆರಳಿದ ಝಾನ್ಸಿರಾಣಿ ಕುಟುಂಬಸ್ಥರು.