ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಜೈಷ್‌ ಉಗ್ರರ ಆ್ಯಪ್‌! * ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಷ್‌-ಎ-ಮೊಹಮ್ಮದ್‌ * ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಜೈಷ್‌ ಉಗ್ರರ ಆ್ಯಪ್‌ * ಇದ​ರಲ್ಲಿ ಮೌಲಾನಾ ಅಜರ್‌ ಭಾಷಣ, ಸಾಹಿತ್ಯ ಲಭ್ಯ ನವದೆಹಲಿ(ಅ.13): ಪಾಕಿಸ್ತಾನ() ಮೂಲದ ಭಯೋತ್ಪಾದಕ ಸಂಘಟನೆ ಜೈಷ್‌-ಎ-ಮೊಹಮ್ಮದ್‌()ಗೆ ಸಂಬಂಧಿಸಿದ ಮೊಬೈಲ್‌ ಆ್ಯಪ್‌( ) ಒಂದು ಗೂಗಲ್‌ಪ್ಲೇ( ) ಸ್ಟೋರ್‌ನಲ್ಲಿ ಇನ್ನೂ ಇದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಇಸ್ಲಾಮಿಕ್‌() ಬೋಧನೆಗೆ ಸಂಬಂಧಿಸಿದ ಜೆಇಎಂ ಸಂಘಟನೆಗೆ ಸೇರಿದ ‘ಅಚ್ಛೀ ಬಾತೇ’ ( ) ಎಂಬ ಮೊಬೈಲ್‌ ಆ್ಯಪ್‌ ವಿಶ್ವಾದ್ಯಂತ ಲಭ್ಯವಿರುವ ಆ್ಯಂಡ್ರಾಯಿಡ್‌ ಫೋನ್‌ಗಳಲ್ಲಿ ಲಭ್ಯವಿದೆ. ಆದರೆ ಈ ಆ್ಯಪ್‌ ಬಹಿರಂಗವಾಗಿ ಉಗ್ರ ಸಂಘಟನೆಯೊಂದಿಗೆ ಗುರುತಿಸಿಕೊಂಡಿಲ್ಲ ಎಂದು ತಿಳಿದು ಬಂದಿದೆ. ಆದರೆ ಜೆಇಎಂ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌( ) ಮತ್ತು ಅವನ ಆಪ್ತರಿಗೆ ಸಂಬಂಧಿಸಿದ ಪುಸ್ತಕಗಳು, ಸಾಹಿತ್ಯ ಮತ್ತು ಆಡಿಯೋ ಸಂದೇಶಗಳಿಗೆ ಸಂಪರ್ಕ ಕಲ್ಪಿಸುವ ಲಿಂಕ್‌ಗಳನ್ನು ಈ ಆ್ಯಪ್‌ ಒಳಗೊಂಡಿದೆ. ಈ ಆ್ಯಪ್‌ ಅನ್ನು ಒಮ್ಮೆ ಡೌನ್‌ಲೋಡ್‌ ಮಾಡಿಕೊಂಡರೆ ಈ ಆ್ಯಪ್‌ ಬಳಕೆದಾರನ ಜಿಪಿಎಸ್‌ ಲೋಕೇಷನ್‌( ), ನೆಟ್‌ವರ್ಕ್(), ಸ್ಟೋರೇಜ್‌(), ವಿಡಿಯೋ ಮತ್ತು ಆಡಿಯೋ ಹಾಗೂ ಮೊಬೈಲ್‌ನಲ್ಲಿರುವ ಇನ್ನಿತರ ಫೈಲ್‌ಗಳನ್ನು ಈ ಆ್ಯಪ್‌ ಪ್ರವೇಶಿಸಲಿದೆ. 2020ರ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಲಾದ ಈ ಆ್ಯಪ್‌ ಅನ್ನು ಈವರೆಗೆ 5 ಸಾವಿರಕ್ಕೂ ಹೆಚ್ಚು ಮಂದಿ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಉಚಿತ ಶಿಕ್ಷಣ ಆ್ಯಪ್‌ ಆಗಿರುವ ಇದು ಪಾಕಿಸ್ತಾನದ ಇಸ್ಲಾಮಿಕ್‌ ಬೋಧಕರ ಪುಸ್ತಕಗಳು, ಸಂದೇಶಗಳು ಮತ್ತು ಕೋಟ್‌ಗಳ ಲಿಂಕ್‌ಗಳನ್ನು ಒಳಗೊಂಡಿದೆ. ಅಲ್ಲದೆ ಈ ಆ್ಯಪ್‌ ಅಭಿವೃದ್ಧಿಪಡಿಸಿದವರು ಬ್ಲಾಕ್‌ ಪೇಜ್‌ವೊಂದನ್ನು ರಚಿಸಿದ್ದು, ಇದರಲ್ಲಿ ಮಸೂದ್‌ ಅಜರ್‌ನ ಅಂಕಿತನಾಮ ‘ಸಾದಿ’ ಹೆಸರಿನಲ್ಲಿ ರಚಿಸಲಾಗಿರುವ ಬರಹಗಳಿವೆ.