RCBಗೆ ಎಲಿಮಿನೇಟರ್ ಸವಾಲು, ಬಿಗ್‌ಬಿ ತಪ್ಪು ಸರಿ ಮಾಡಿದ ಮಗಳು; ಅ.11ರ ಟಾಪ್ 10 ಸುದ್ದಿ! 2021ರ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕೆಕೆಆರ್ ವಿರುದ್ಧ ಹೋರಾಟ ನಡೆಸುತ್ತಿದೆ. ಇತ್ತ ಪಂಜಾಬ್ ಕಾಂಗ್ರೆಸ್‌ ಒಳಗಿನ ಮುನಿಸು ಇನ್ನು ಮುಗಿದಿಲ್ಲ. ಪ್ರಧಾನಿ ಮೋದಿ ಭಾರತೀಯ ಬಾಹ್ಯಾಕಾಶ ಸಂಘ ಉದ್ಘಾಟಿಸಿದ್ದಾರೆ. ಅಮಿತಾಬ್ ಬಚ್ಚನ್ ಬರ್ತ್‌ಡೇ ಪೋಸ್ಟ್ ತಪ್ಪು ಸರಿ ಮಾಡಿದ ಮಗಳು, ತೈಲ ಸುಂಕ ಇಳಿಸಲುು ಕರ್ನಾಟಕ ಚಿಂತನೆ ಸೇರಿದಂತೆ ಅಕ್ಟೋಬರ್ 11ರ ಟಾಪ್ 10 ಸುದ್ದಿ ವಿವರ ಇಲ್ಲಿವೆ. ಕಾಂಗ್ರೆಸ್ ಗಣ್ಯರು ಪಂಜಾಬ್ ಸಿಎಂ ಪುತ್ರನ ವಿವಾಹದಲ್ಲಿ ಭಾಗಿ, ನವಜೋತ್ ಸಿಂಗ್ ಸಿಧು ಗೈರು! ಪಂಜಾಬ್() ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನಿ( ) ಪುತ್ರ ನವಜಿತ್ ಸಿಂಗ್ ಸರಳವಾಗಿ ವೈವಾಹಿಕ() ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ(ಅ.11) ಮೊಹಾಲಿಯ ಗುರುದ್ವಾರದಲ್ಲಿ ನಡೆದ ಸರಳ ವಿವಾಹ ಕಾರ್ಯಕ್ರಮದಲ್ಲಿ ನವಜಿತ್ ಸಿಂಗ್ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. 21ನೇ ಶತಮಾನದಲ್ಲಿ ವಿಶ್ವವನ್ನು ಒಗ್ಗೂಡಿಸುವಲ್ಲಿ ಸ್ಪೇಸ್‌ ಪಾತ್ರ ಬಹಳ ಮಹತ್ವದ್ದು! ಪ್ರಧಾನಿ ಮೋದಿ( ) ಭಾರತೀಯ ಬಾಹ್ಯಾಕಾಶ ಸಂಘವನ್ನು ( )ಗೆ ಸೋಮವಾರ ಉದ್ಘಾಟನೆ ಮಾಡಿದ್ದಾರೆ. ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ 130 ಕೋಟಿ ಭಾರತೀಯರಿಗೆ ನಮ್ಮ ಬಾಹ್ಯಾಕಾಶ ಕ್ಷೇತ್ರವು ಪ್ರಗತಿಯ ಮಾರ್ಗವಾಗಿದೆ ಎಂದಿದ್ದಾರೆ. ಸಿದ್ದುಗೇಕೆ ಈಗ ಸೋನಿಯಾ ರಾಜಮರ್ಯಾದೆ? ಹೀಗಿದೆ ನೋಡಿ ಕಾಂಗ್ರೆಸ್‌ ಲೆಕ್ಕಾಚಾರ! ಒಂದು ಕಡೆ ಗುಲಾಂ ನಬಿ( ), ಕಪಿಲ್‌ ಸಿಬಲ್‌( ); ಇನ್ನೊಂದು ಕಡೆ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ರಂಥ( ) ನಾಯಕರು ನೇರವಾಗಿ ರಾಹುಲ್‌( ) ಮತ್ತು ಪ್ರಿಯಾಂಕಾ ಗಾಂಧಿ( )​ ವಿರುದ್ಧ ಆಂತರಿಕ ಯುದ್ಧ ಹೂಡಿರುವಾಗ ಕಾಂಗ್ರೆಸ್‌() ಬಳಿ ಇರುವ ಮಾಸ್‌ ನಾಯಕರು ಅಂದರೆ ಇಬ್ಬರು. 2021: ಹೀಗಿತ್ತು ನೋಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್‌ ಜರ್ನಿ..! 14ನೇ ಆವೃತ್ತಿಯ ಐಪಿಎಲ್‌ ( 2021) ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ( ) ನೇತೃತ್ವದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ( ) ತಂಡವು ಪ್ಲೇ ಆಫ್‌ ( ) ಪ್ರವೇಶಿಸಿದ ಮೂರನೇ ತಂಡ ಎನ್ನುವ ಗೌರವಕ್ಕೆ ಭಾಜನವಾಗಿದೆ. ರಶ್ಮಿಕಾ ದಕ್ಷಿಣದ ಶ್ರೀಮಂತ ನಟಿ? ಟಾಪ್ ಸಿಟಿಗಳಲ್ಲಿ ಆಸ್ತಿ ಖರೀದಿ ಮೂಲತಃ ಸ್ಯಾಂಡಲ್‌ವುಡ್‌ () ಚೆಲುವೆ ರಶ್ಮಿಕಾ ಮಂದಣ್ಣ ( ) ದಕ್ಷಿಣದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಕನ್ನಡದ ಮೂಲಕ ಸಿನಿ ಜರ್ನಿ ಶುರು ಮಾಡಿದ ನಂತರ ತೆಲಗು ಚಿತ್ರರಂಗಕ್ಕೆ ಕಾಲಿಟ್ಟರು. ಅಮಿತಾಭ್ ಬರ್ತ್‌ಡೇ ಪೋಸ್ಟ್‌ನಲ್ಲಿ ತಪ್ಪು: ಸರಿ ಮಾಡಿದ ಮಗಳು ವೈನ್‌ಗೆ ಯಾವ ರೀತಿ ವರ್ಷವಾದಂತೆ ರುಚಿ ಹೆಚ್ಚುತ್ತದೋ ಅದೇ ರೀತಿಯಾಗಿದೆ ಅಮಿತಾಭ್ ಬಚ್ಚನ್( ) ಕಥೆ. ಅಮಿತಾಭ್ ಬಚ್ಚನ್ ಅವರು ವಯಸ್ಸಾದಂತೆ ಮತ್ತಷ್ಟು ಹ್ಯಾಂಡ್ಸಂ, ಗ್ರೇಸ್‌ಫುಲ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಬರ್ತ್‌ಡೇ() ದಿನ ಚಂದದ ಫೋಟೋ ಶೇರ್ ಮಾಡಿದ ನಟ ಮತ್ತೊಂದು ವರ್ಷವನ್ನು ಪ್ರೀತಿಯಿಂದ ಅಪ್ಪಿಕೊಳ್ಳಲು ಸಿದ್ಧರಾಗಿದ್ದಾರೆ. 80ರ ಕಡೆಗೆ ನಡಿಗೆ ಎಂದು ಅಮಿತಾಭ್ ಬಚ್ಚನ್ ಕ್ಯಾಪ್ಶನ್ ಕೊಟ್ಟು ಫೋಟೋ ಶೇರ್ ಮಾಡಿದ್ದಾರೆ. ಮೊದಲ ಬಾರಿ ಸುಂಕ ಇಳಿಕೆ ಬಗ್ಗೆ ಸಿಎಂ ಮಾತು: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಇಳಿಕೆ? ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ನೋಡಿಕೊಂಡು ಪೆಟ್ರೋಲ್() ಡೀಸೆಲ್() ಮೇಲಿನ ಮೇಲಿನ ಸುಂಕ ಇಳಿಕೆ ಮಾಡುವ ಕುರಿತು ನಿರ್ಧಾರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ( ) ಹೇಳಿದ್ದಾರೆ. ಟಾಟಾ ಪಂಚ್ ಕಾರು ಹೇಗಿದೆ? ಏಷ್ಯಾನೆಟ್ ಸುವರ್ಣನ್ಯೂಸ್ ಟೆಸ್ಟ್ ಡ್ರೈವ್ ! ಟಾಟಾ ಮೋಟಾರ್ಸ್ ಮೈಕ್ರೋ ಕಾರನ್ನು ಪರಿಚಯಿಸಿದೆ. ಟಾಟಾ ಪಂಚ್ ಕಾರು ಬಹುದೊಡ್ಡ ಸಂಚಲನ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ. ನೂತನ ಕಾರಿನ ಪರ್ಫಾಮೆನ್ಸ್, ಫೀಚರ್ಸ್, ವಿಶೇಷತೆ, ಡ್ರೈವಿಂಗ್ ಅನುಭವ, ಪ್ರಯಾಣದ ಕುರಿತು ಪರೀಕ್ಷಿಸಲು ಏಷ್ಯಾನೆಟ್ ಸುವರ್ಣನ್ಯೂಸ್.ಕಾಂ ತಂಡ ಮುಂಬೈನ() ಮೂರು ವಿವಿಧ ರಸ್ತೆಗಳಲ್ಲಿ ಟಾಟಾ ಪಂಚ್ ಕಾರಿನ ಸಾಮರ್ಥ್ಯ, ಡ್ರೈವಿಂಗ್ ಕಂಫರ್ಟ್ ಸೇರಿದಂತೆ ಕಾರಿನ ಕಂಪ್ಲೀಟ್ ಫೀಚರ್ಸ್ ಪರೀಕ್ಷೆ ನಡೆಸಿತು. ರಾಜ್ಯ ರಾಜಕಾರಣದತ್ತ ರಾಘವೇಂದ್ರ ಚಿತ್ತ, ತಂದೆ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರಾ? ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ( ) ಪುತ್ರ ಬಿವೈ ರಾಘವೇಂದ್ರ ( ) ಅವರು ರಾಜ್ಯ ರಾಜಕಾರಣಕ್ಕೆ ಆಗಮಿಸಲುವ ಇಂಗಿತ ವ್ಯಕ್ತಪಡಿಸಿದ್ದಾರೆ.