ಟೀಂ ಇಂಡಿಯಾಗೆ ದ್ರಾವಿಡ್ ಮಾರ್ಗದರ್ಶನ, ರಂಗೇರಿದೆ ಉಪಸಮರ ಕದನ; ಅ.16ರ ಟಾಪ್ 10 ಸುದ್ದಿ! 100 ಕೋಟಿ ಲಸಿಕೆಗೆ ದಾಖಲೆಗೆ ದೇಶ ಕಾಯುತ್ತಿದೆ. ಇತ್ತ ಕೇಂದ್ರ ಸರ್ಕಾರ ವಿಶೇಷ ಸಿದ್ಧತೆಯನ್ನು ಮಾಡಿಕೊಂಡಿದೆ. ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣೆ ಕಣ ರಂಗೇರುತ್ತಿದೆ. ಕನ್ನಡಿಗ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗಲು ಸಮ್ಮತಿ ಸೂಚಿಸಿದ್ದಾರೆ. ರಚಿತಾ ರಾಮ್ ಹೊಸ ಚಿತ್ರ ಶುರು, ಕಾಂಗ್ರೆಸ್ ನೂತನ ಸಾರಥಿ ಸೇರಿದಂತೆ ಅಕ್ಟೋಬರ್ 16ರ ಟಾಪ್ 10 ಸುದ್ದಿ ವಿವರ ಇಲ್ಲಿವೆ. ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದುರಂತ, ಐವರು ಭಕ್ತರು ಸಾವು! ದೇಶಾದ್ಯಂತ ದಸರಾ, ನವರಾತ್ರಿ() ಸಂಭ್ರಮ ಕಳೆಗಟ್ಟಿತ್ತು. ಆದರೀಗ ಈ ಹಬ್ಬದ ವಾತಾವರಣದ ಮಧ್ಯೆ ರಾಜಸ್ಥಾನದ() ಧೋಲ್‌ಪುರದಲ್ಲಿ ಪಾರ್ವತಿ ನದಿಯಲ್ಲಿ( ) ದುರ್ಗಾ ಮೂರ್ತಿ ವಿಸರ್ಜನೆಯ ವೇಳೆ ಆಗ್ರಾ() ಮೂಲದ ಐವರು ಮುಳುಗಿ ಸಾವನ್ನಪ್ಪಿದ್ದಾರೆ. ಕಾಂಗ್ರೆಸ್‌ ನೂತನ ಸಾರಥಿ ಯಾರು? ಸಭೆಯಲ್ಲಿ ಮಹತ್ವದ ನಿರ್ಧಾರ! ಪಕ್ಷದ ಸದಸ್ಯತ್ವ ಅಭಿಯಾನ ಮತ್ತು ಉನ್ನತ ಮಟ್ಟದ ಸಾಂಸ್ಥಿಕ ಚುನಾವಣೆಗಳಿಗೆ ತಳಮಟ್ಟದ ಕಾರ್ಯಕ್ರಮವನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌() ಕಾರ್ಯಕಾರಿ ಸಮಿತಿಯ ಸಭೆ( ) ಆಯೋಜಿಸಲಾಗಿದೆ. 100 ಕೋಟಿ ಲಸಿಕೆ ಸಂಭ್ರಮಕ್ಕೆ ಸಿದ್ಧತೆ: ವಿಮಾನ, ಹಡಗು, ರೈಲಲ್ಲಿ ಘೋಷಣೆ! ದೇಶದಲ್ಲಿ 100 ಕೋಟಿ ಕೋವಿಡ್‌ ಲಸಿಕೆ( 19 ) ವಿತರಿಸಿದ ಸಂದರ್ಭವನ್ನು ಭರ್ಜರಿ ಸಂಭ್ರಮದೊಂದಿಗೆ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅ.18 ಅಥವಾ ಅ.19ರಂದು ಸೃಷ್ಟಿಯಾಗಲಿರುವ 100 ಕೋಟಿ ಲಸಿಕೆ() ವಿತರಣೆಯ ದಾಖಲೆಯ ಸುದ್ದಿಯನ್ನು ವಿಮಾನ, ಹಡಗು, ಮೆಟ್ರೋ ರೈಲು ಮತ್ತು ರೈಲು ನಿಲ್ದಾಣಗಳಲ್ಲಿ ಘೋಷಣೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ ಇಂದಿನಿಂದ ಉಪಸಮರ ಕಣಕ್ಕೆ ರಂಗು: ಭರ್ಜರಿ ವಾಕ್ಸಮರ ಸಂಭವ! ದಸರಾ ಹಬ್ಬದ( ) ಬೆನ್ನಲ್ಲೇ ಶನಿವಾರದಿಂದ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ( ) ಪ್ರಚಾರ ರಂಗು ಪಡೆದುಕೊಳ್ಳಲಿದೆ. : ಟೀಂ ಇಂಡಿಯಾ ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್‌ ಆಯ್ಕೆ..! ಬೆಂಗಳೂರು: 'ದ ವಾಲ್‌' ಖ್ಯಾತಿಯ ದಿಗ್ಗಜ ಕ್ರಿಕೆಟಿಗ, ಕನ್ನಡಿಗ ರಾಹುಲ್‌ ದ್ರಾವಿಡ್‌ ( ) ಟೀಂ ಇಂಡಿಯಾ ಕೋಚ್ ( ) ಆಗಲು ಸಮ್ಮತಿ ಸೂಚಿಸಿದ್ದಾರೆ. ಸಿನಿಮಾಗೆ ಅಡ್ಡಿ ಮಾಡಿದ್ಯಾರು ? ಮೊದಲ ದಿನವೇ ಸಿನಿಮಾಗೆ ಅಡ್ಡಿ ಮಾಡಿದ್ಯಾಕೆ ? ಅ.14ರಂದು ಸಿನಿಮಾ ರಿಲೀಸ್ ಆಗಬೇಕಿತ್ತು. ರಿಲೀಸ್‌ಗೆ ಡೇಟ್ ಫಿಕ್ಸ್ ಆಗಿತ್ತು. ಆದರೆ ಆ ಮೂವರು ಕಿಚ್ಚನ ಸಿನಿಮಾಗೆ ಕಿಚ್ಚು ಹಚ್ಚಿದ್ರಾ ? ಕಿಚ್ಚ ಸುದೀಪ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ 20ನೇ ವಾರ್ಷಿಕೋತ್ಸವಕ್ಕೆ ನೋಕಿಯಾ 6310 ಫೋನು ಮರು ಬಿಡುಗಡೆ! 2001ರಲ್ಲಿ ಬಿಡುಗಡೆಯಾಗಿ ಜನಮನ್ನಣೆ ಗಳಿಸಿದ್ದ, ಐಕಾನಿಗ್ ಮೊಬೈಲ್ ಫೋನ್ ನೋಕಿಯಾ 6319 ( 6310) ಮತ್ತೆ ಮರು ಬಿಡುಗಡೆಯಾಗಿದೆ. 20ನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಕಂಪನಿಯು ಈ ಫೋನನ್ನು ರಿಲಾಂಚ್ ಮಾಡಿದೆ. ಭಾರತವು ಸೇರಿದಂತೆ ಜಗತ್ತಿನಾದ್ಯಂತ ಈ ಫೋನ್‌ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಆಮಿಷ ಒಡ್ಡಿ ಪ್ರತಿಭಟನೆಗೆ ಕರೆಯಿಸಿ ಕೊಲೆ, ರೈತ ಹೋರಾಟದ ಅಸಲಿ ಕತೆ ಹೇಳಿದ ಲಕ್ಬೀರ್ ಸಿಂಗ್ ಕುಟುಂಬ! ಕೇಂದ್ರ ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ ಸ್ಥಳದ ಪಕ್ಕದಲ್ಲೇ ದಲಿತ ಕಾರ್ಮಿಕ ಲಕ್ಬೀರ್ ಸಿಂಗ್( ) ಹತ್ಯೆ ಇದೀಗ ಭಾರಿ ಸದ್ದು ಮಾಡತ್ತಿದೆ. ಕೈ ಕಾಲು ಕತ್ತರಿಸು ಬರ್ಬರವಾಗಿ ಲಕ್ಬೀರ್ ಸಿಂಗ್‌ನ್ನು ಹತ್ಯೆ ಮಾಡಲಾಗಿದೆ. ರೈತ ಪ್ರತಿಭಟನಾ ಸ್ಥಳಕ್ಕೆ ಆಮಿಷ ಒಡ್ಡಿ ಲಕ್ಬೀರ್ ಸಿಂಗ್‌ನ್ನು ಕರೆಸಲಾಗಿತ್ತು. ಇದೀಗ ಬರ್ಬರವಾಗಿ ಕೊಲೆ( ) ಮಾಡಲಾಗಿದೆ ಎಂದು ಲಕ್ಬೀರ್ ಕುಟುಂಬಸ್ಥರು ಆರೋಪಿಸಿದ್ದಾರೆ.