ಹೊಚ್ಚ ಹೊಸ x360 ನೋಟ್‌ಬುಕ್ ಬಿಡುಗಡೆ! ನವದೆಹಲಿ(ಆ.25) ನೋಟ್‌ಬುಕ್ ಸರಣಿಯನ್ನು ಬಲಿಷ್ಠಗೊಳಿಸಲು, ಇಂದು ಹೊಚ್ಚ ಹೊಸ x360 14, ಲ್ಯಾಪ್‌ಟಾಪ್ ಅನಾವರಣಗೊಳಿಸಿದೆ. ಅದು ಅಡಾಪ್ಟಿವ್ ಹಾಗೂ ಸ್ಮಾರ್ಟ್ ಆಗಿದ್ದು, ಇಂಟಲಿಜೆಂಟ್ ಫೀಚರ್ಸ್ ಒಳಗೊಂಡಿದೆ. ಇದು 3:2 ವಿಂಡೋಸ್ ಕನ್ವರ್ಟಿಬಲ್ ಸೌಲಭ್ಯ ಹಾಗೂ 90.33% ಸ್ಕ್ರೀನ್ ಟು ಬಾಡಿ ಅನುಪಾತವನ್ನು ಹೊಂದಿದೆ. ಅಡಾಪ್ಟಿವ್ ಇಂಟಲಿಜೆನ್ಸ್ ಇದರ ವಿಶೇಷವಾಗಿದೆ. ಭಾರತದ ಅತ್ಯಂತ ಜನಪ್ರಿಯ ಪ್ರೀಮಿಯಂ ನೋಟ್‌ಬುಕ್‌ಗಳಲ್ಲಿ ಒಂದಾಗಿದೆ ಮತ್ತು ಅದರ ಸೊಗಸಾದ ವಿನ್ಯಾಸ ಮತ್ತು ಕಾರ್ಯಕ್ಷಮತೆಗಾಗಿ ಹಲವಾರು ಉದ್ಯಮ ಪ್ರಶಂಸೆಗಳನ್ನು ಗೆದ್ದಿದೆ. ವಿದ್ಯಾರ್ಥಿಗಳಿಗೆ ಎಚ್‌ಪಿ ಕ್ರೋಮ್‌ಬುಕ್ ಲ್ಯಾಪ್‌ಟ್ಯಾಪ್; 21,999 ರೂ.ನಿಂದ ಬೆಲೆ ಆರಂಭ ಇಂದಿನ ದಿನಗಳಲ್ಲಿ ಪಿಸಿಗಳು ಕೆಲಸ, ಕಲಿಕೆ ಮತ್ತು ಮನರಂಜನೆಯ ಅಗತ್ಯ ಅಂಶವಾಗಿ ಮಾರ್ಪಟ್ಟಿವೆ. x360 14 ಬಳಕೆದಾರರ ಹಲವು ಬಗೆಯ ಅಗತ್ಯಗಳಿಗೆ ಹೊಂದಿಕೊಂಡು ಅದ್ಭುತವಾಗಿ ಕೆಲಸ ಮಾಡುತ್ತದೆ. ಕನ್ವರ್ಟಿಬಲ್ 2-ಇನ್ -1 ಲ್ಯಾಪ್‌ಟಾಪ್ 13.5-ಇಂಚಿನ ಫಾರ್ಮ್ ಫ್ಯಾಕ್ಟರ್‌ನ ಚಲನಶೀಲತೆಯೊಂದಿಗೆ ಮೊದಲ ಬಾರಿಗೆ 15-ಇಂಚಿನ ಅನುಕೂಲ ನೀಡುತ್ತಿದೆ. ಹೆಚ್ಚಿನ ಉತ್ಪಾದಕತೆ ಮತ್ತು ದಕ್ಷತೆಗಾಗಿ ಬ್ರೌಸಿಂಗ್, ಓದುವಿಕೆ ಮತ್ತು ಸಂಪಾದನೆಗಾಗಿ ಪರಿಪೂರ್ಣವಾಗಿರುವ, ವೀವಿಂಗ್ ಸ್ಪೇಸ್ ಲಂಬವಾಗಿ 20% ಹೆಚ್ಚು ಇರುವಂತೆ ಪರಿವರ್ತಿಸುತ್ತದೆ. ವೈವಿಧ್ಯಮಯ ಮೂರು ಬಣ್ಣಗಳಲ್ಲಿ - ನೈಟ್‌ಫಾಲ್ ಬ್ಲ್ಯಾಕ್ ವಿತ್ ಕಾಪರ್ ಲ್ಯೂಕ್ಸ್ ಆಕ್ಸೆಂಟ್ಸ್, ಹಾಗೂ ಪಾಸಿಡನ್ ಬ್ಲ್ಯೂ ವಿತ್ ಪೇಲ್ ಬ್ರಾಸ್ ಆಕ್ಸೆಂಟ್‌ನಲ್ಲಿ ಲಭ್ಯವಿರುವ x360 ಹೊಸ - ಆಧಾರಿತ ಆಡಿಯೋ ಸಾಮರ್ಥ್ಯಗಳು ಉತ್ಪಾದಕತೆ ಮತ್ತು ಕಾರ್ಯಕ್ಷಮತೆಯಂತಹ ಇಂಟಲಿಜೆಂಟ್ ವೈಶಿಷ್ಟ್ಯಗಳಿಂದ ಸಕ್ರಿಯಗೊಳಿಸಿದ ಪ್ರಗತಿಶೀಲ ವಿನ್ಯಾಸ ಮತ್ತು ಕಾರ್ಯಕ್ಷಮತೆಯನ್ನು ನೀಡುತ್ತದೆ. ಹೊಚ್ಚ ಹೊಸ ಲ್ಯಾಪ್‌ಟಾಪ್ ತೆಳುವಾಗಿದೆ ಹಾಗೂ ಹಗುರವಾಗಿದೆ, ಸೊಗಸಾಗಿದೆ ಮತ್ತು ಸುಂದರವಾಗಿದೆ - ತಿರುಗಿ ನೋಡುವಂತೆ ಮಾಡಬಲ್ಲ ಜೆಮ್-ಕಟ್ ಹಾಗೂ ಡ್ಯೂಯಲ್ ಚೇಂಬರ್ ವಿನ್ಯಾಸವನ್ನು ಪ್ರಿಸಿಶನ್ ಅಲ್ಯೂಮೀನಿಯಂ ಯಂತ್ರೋಪಕರಣದಿಂದ ಸಾಧಿಸಲಾಗಿದೆ. ಈ ಲ್ಯಾಪ್‌ಟಾಪ್ ಕೇವಲ 1.36 ಕೆ.ಜಿ. ಭಾರವಿದ್ದು, 17 ಗಂಟೆಗಳ ವರೆಗಿನ ಬ್ಯಾಟರಿ ಬಾಳಿಕೆ ನೀಡುತ್ತದೆ. ಬೆರಗುಗೊಳಿಸುವ, ಬಹುಮುಖ ಮತ್ತು ಅಲ್ಟ್ರಾ-ಮೊಬೈಲ್ ವಿನ್ಯಾಸವನ್ನು ಬಯಸುವ ಬಳಕೆದಾರರಿಗೆ ಸೂಕ್ತವಾದ ಸಂಗಾತಿಯಾಗಿದ್ದು, ವೈಯಕ್ತಿಕ ಶೈಲಿಗೆ ಪೂರಕವಾಗಿದೆ.