ಗೂಗಲ್‌ನಿಂದ ಹೊಸ ಐಟಿ ನಿಯಮ ಪಾಲನೆ : 59 ಸಾವಿರ ಲಿಂಕ್‌ಗೆ ಕೊಕ್‌ ನವದೆಹಲಿ (ಜು.03): ಕೇಂದ್ರ ಸರ್ಕಾರ ಸಾಮಾಜಿಕ ಜಾಲತಾಣಗಳಿಗೆ ಹೊಸದಾಗಿ ಜಾರಿ ಮಾಡಿದ್ದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅನ್ವಯ, ಅಮೆರಿಕ ಮೂಲದ ಗೂಗಲ್‌ ಮತ್ತು ಬೆಂಗಳೂರು ಮೂಲದ ಕೂ ತಮ್ಮ ಮೊದಲ ಪಾಲನಾ ವರದಿಯನ್ನು ಪ್ರಕಟಿಸಿವೆ. ಅಂದರೆ ತಮ್ಮ ತಾಣಗಳಲ್ಲಿ ಪ್ರಕಟವಾದ ಆಕ್ಷೇಪಾರ್ಹ ಸಂಗತಿ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ಅವು ವರದಿ ಪ್ರಕಟಿಸಿವೆ. ಸಾಮಾಜಿಕ ಜಾಲತಾಣಗಳ ಪೈಕಿ ಹೀಗೆ ವರದಿಯನ್ನು ಪ್ರಕಟಿಸಿದ ಮೊದಲ ಸಂಸ್ಥೆಗಳೆಂಬ ಹಿರಿಮೆಗೆ ಇವೆರಡೂ ಪಾತ್ರವಾಗಿದೆ. ಡಿಜಿಟಲ್ ಇಂಡಿಯಾ ವಾರ್ಷಿಕೋತ್ಸವ; Paytmನಿಂದ 50 ಕೋಟಿ ರೂ ಕ್ಯಾಶ್ ಬ್ಯಾಕ್ ಆಫರ್! . ವರದಿ ಅನ್ವಯ, ಗೂಗಲ್‌ಗೆ ಏಪ್ರಿಲ್‌ನಲ್ಲಿ ಒಟ್ಟು 27716 ದೂರು ಸಲ್ಲಿಕೆಯಾಗಿದ್ದು, ಅದರನ್ವಯ ಅದು 59530 ಲಿಂಕ್‌ಗಳನ್ನು ತನ್ನ ವಿವಿಧ ಉತ್ಪನ್ನಗಳಿಂದ ತೆಗೆದುಹಾಕಿದೆ. ಇನ್ನು ಕೂ ಸಂಸ್ಥೆಗೆ 5502 ದೂರು ಸಲ್ಲಿಕೆಯಾಗಿದ್ದು ಈ ಪೈಕಿ 1253 ದೂರಿನ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಈ ವರದಿಯಲ್ಲಿ ಸರ್ಕಾರದ ಸೂಚನೆ ಅನ್ವಯ ಕೈಗೊಂಡ ಕ್ರಮಗಳ ಬಗ್ಗೆ ಪ್ರಸ್ತಾಪಿಸಿಲ್ಲ. ಇನ್ನು ಅಮೆರಿಕ ಮೂಲದ ಫೇಸ್‌ಬುಕ್‌ ಕೂಡಾ ಸದ್ಯದಲ್ಲೇ ವರದಿ ಪ್ರಕಟಿಸುವ ಸಾಧ್ಯತೆ ಇದೆ. ಅದರೆ ಭಾರತ ಸರ್ಕಾರದೊಂದಿಗೆ ಸಂಘರ್ಷಕ್ಕೆ ಇಳಿದಿರುವ ಅಮೆರಿಕ ಮೂಲದ ಟ್ವೀಟರ್‌ ತನ್ನ ವರದಿಯನ್ನು ಪ್ರಕಟಿಸುವ ಸಂಬಂಧ ಯಾವುದೇ ಗಡುವನ್ನು ಹಾಕಿಕೊಂಡಿಲ್ಲ.