PhonePeಯಿಂದ ಭಾರತದ ಮೊದಲ ಆಟೋ ಟಾಪ್ ಅಪ್ ವ್ಯಾಲೆಟ್ ಬಿಡುಗಡೆ! ನವದೆಹಲಿ(ಜೂ.22) :ಭಾರತದ ಅತಿ ದೊಡ್ಡ ಡಿಜಿಟಲ್‌ ಪೇಮೆಂಟ್‌ ಕಂಪನಿಯಾಗಿರುವ ತನ್ನ ಗ್ರಾಹಕರಿಗೆ -ಮ್ಯಾಂಡೇಟ್‌ ಅನ್ನು ಬಳಸಿಕೊಂಡು ವ್ಯಾಲೆಟ್ ಆಟೋ ಟಾಪ್-ಅಪ್ ಫೀಚರ್‌ ಅನ್ನು ಬಿಡುಗಡೆ ಮಾಡಿದೆ. ಈ ಫೀಚರ್‌ ಗ್ರಾಹಕರಿಗೆ ಒಮ್ಮೆ ಇ-ಮ್ಯಾಂಡೇಟ್ ಹೊಂದಿಸಲು ಅನುವು ಮಾಡಿಕೊಡುತ್ತದೆ. ಅದರ ನಂತರ ಸ್ವಯಂಚಾಲಿತವಾಗಿ ವ್ಯಾಲೆಟ್‌ ಬ್ಯಾಲೆನ್ಸ್‌ ಕನಿಷ್ಠ ಮಟ್ಟಕ್ಕಿಂತ ಕಡಿಮೆಯಾದಾಗ ಸ್ವಯಂಚಾಲಿತವಾಗಿ ಮೇಲಕ್ಕೇರಿಸುತ್ತದೆ. ಐಟಿ ರಿಟರ್ನ್ಸ್‌ಗೆ ಹೊಸ ಪೋರ್ಟಲ್: ತೆರಿಗೆದಾರರಿಗಿಲ್ಲ ಹೊರೆ: ಈ ಎಲ್ಲಾ ಆಯ್ಕೆ ಇರುತ್ತೆ! ಗ್ರಾಹಕರು ಪ್ರತಿ ಬಾರಿ ತಮ್ಮ ಬ್ಯಾಲೆನ್ಸ್‌ ಅನ್ನು ವ್ಯಾಲೆಟ್‌ಗೆ ಹಾಕುತ್ತಾ ಇರಬೇಕೆಂದಿಲ್ಲ, ಆದರೆ ವ್ಯಾಲೆಟ್ ಬಳಸಿ ಅನೇಕ ಪಾವತಿಗಳನ್ನು ಮಾಡಬಹುದು. ಇದು ವ್ಯಾಲೆಟ್ ಗ್ರಾಹಕರಿಗೆ ಸಾಕಷ್ಟು ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ, ಜೊತೆಗೆ ಹೆಚ್ಚಿನ ವಹಿವಾಟಿನ ಯಶಸ್ಸಿನ ಪ್ರಮಾಣವನ್ನು (~ 99.99%) ಖಾತ್ರಿಗೊಳಿಸುತ್ತದೆ. ಇ-ಮ್ಯಾಂಡೇಟ್‌ ಅನ್ನು ಒಮ್ಮೆ ಹೊಂದಿಸಿದ ನಂತರ, ಬಳಕೆದಾರರು ಯಾವುದೇ ಪಿನ್ ಅನ್ನು ನಮೂದಿಸುವ ಅಗತ್ಯವಿಲ್ಲ ಅಥವಾ ಪ್ರತಿ ಬಾರಿ ತಮ್ಮ ವ್ಯಾಲೆಟ್‌ ಲೋಡ್ ಮಾಡಲು ಅಥವಾ ಪಾವತಿ ಮಾಡಲು ಬಯಸಿದಾಗ ಒಟಿಪಿಗಾಗಿ ಕಾಯಬೇಕಾಗಿಲ್ಲ. ಆಟೋ ಟಾಪ್‌ ಅಪ್‌ ಉಪಯೋಗಿಸುವುದರ ಪ್ರಯೋಜನಗಳು:ಬ್ಯಾಲೆನ್ಸ್‌ ಕನಿಷ್ಠ ಮಟ್ಟಕ್ಕಿಂತ ಕಡಿಮೆ ಆದಾಗ ವ್ಯಾಲೆಟ್‌ ಸ್ವಯಂಚಾಲಿತವಾಗಿ ಆಟೋ ಟಾಪ್‌ ಅಪ್‌ ಆಗುತ್ತದೆ.ಹೆಚ್ಚಿನ ವಹಿವಾಟಿನ ಯಶಸ್ಸಿನ ಪ್ರಮಾಣದಿಂದ ಪ್ರತಿ ಬಾರಿಯೂ ಬ್ಯಾಲೆನ್ಸ್‌ ಶೂನ್ಯಕ್ಕೆ ಇಳಿದಾಗ ಬಳಕೆದಾರರು ತಮ್ಮ ವ್ಯಾಲೆಟ್‌ ಲೋಡ್ ಮಾಡಬೇಕಾಗಿಲ್ಲ. ಇ-ಮ್ಯಾಂಡೇಟ್‌ಗಳು ಗೆ ಒಂದು ದೊಡ್ಡ ಹೆಜ್ಜೆಯಾಗಿದೆ. ದೊಡ್ಡ ಪ್ರಮಾಣದ ಪಾವತಿಗಳನ್ನು ಮಾಡುವ ಮುಂದಿನ ಹಂತಕ್ಕೆ ವ್ಯವಹಾರಗಳು ಸಾಗಲು ಇದು ಸಹಾಯ ಮಾಡುತ್ತದೆ, ಅದು ಹೆಚ್ಚಿನ ಸಂಖ್ಯೆಯ ಗ್ರಾಹಕ ಸನ್ನಿವೇಶಗಳಿಗೆ ಬಾಗಿಲು ತೆರೆಯುತ್ತದೆ. ಗ್ರಾಹಕರಿಗೆ ವ್ಯಾಲೆಟ್ ಆಟೋ ಟಾಪ್-ಅಪ್ ಆರಂಭದೊಂದಿಗೆ ನಾವು ಈ ವೈಶಿಷ್ಟ್ಯವನ್ನು ಎಲ್ಲಾ ರೀತಿಯಿಂದಲೂ ಪರೀಕ್ಷಿಸುತ್ತಿದ್ದೇವೆ ಮತ್ತು ಮುಂಬರುವ ವಾರಗಳಲ್ಲಿ ಇದನ್ನು ವ್ಯಾಪಾರಿಗಳು, ಪಾವತಿ ಸಂಗ್ರಾಹಕರು ಹಾಗೂ ಇತರ ಅಪ್ಲಿಕೇಶನ್‌ಗಳಿಗೆ ಲಭ್ಯವಾಗುವಂತೆ ಕೆಲಸ ಮಾಡುತ್ತಿದ್ದೇವೆ. ಡಿಜಿಟಲ್ ಪಾವತಿ ವ್ಯವಸ್ಥೆಗೆ ಇ-ಮ್ಯಾಂಡೇಟ್ ಮಹತ್ವದ್ದಾಗಿದೆ. ಏಕೆಂದರೆ ಇದು ಗ್ರಾಹಕರಿಗೆ ನಿರಂತರ ನಿಯಮಿತ ಪಾವತಿ ಅನುಭವವನ್ನು ಒದಗಿಸುವ ಆರ್‌ಬಿಐ ದೃಷ್ಟಿಯನ್ನು ಮುಂದಕ್ಕೆ ಸಾಗಿಸುತ್ತದೆ. ವೇತನ ಪಡೆಯೋರಿಗೊಂದು ಗುಡ್‌ ನ್ಯೂಸ್, ನೂತನ ಬ್ಯಾಂಕಿಂಗ್ ವ್ಯವಸ್ಥೆ ಜಾರಿ! ಗ್ರಾಹಕರು ಕೆಲವು ಸರಳ ಹಂತಗಳಲ್ಲಿ ವ್ಯಾಲೆಟ್ ಆಟೋ ಟಾಪ್-ಅಪ್ ಅನ್ನು ಸಕ್ರಿಯಗೊಳಿಸಬಹುದು. ಅವರು ಮಾಡಬೇಕಾಗಿರುವುದು ಅಪ್ಲಿಕೇಶನ್ ಮುಖಪುಟದಲ್ಲಿ ವ್ಯಾಲೆಟ್ ವಿಭಾಗದಲ್ಲಿರುವ ‘ಟಾಪ್-ಅಪ್’ ಐಕಾನ್ ಕ್ಲಿಕ್ ಮಾಡಿ. ನಂತರ ಗ್ರಾಹಕರು ತಮ್ಮ ಆಯ್ಕೆಯ ಮೊತ್ತವನ್ನು ಟಾಪ್‌ ಅಪ್‌ ನಲ್ಲಿ ನಮೂದಿಸಬೇಕಾಗುತ್ತದೆ. ಆಟೋ ಟಾಪ್-ಅಪ್ ಅನ್ನು ಸಕ್ರಿಯಗೊಳಿಸಲು ಗ್ರಾಹಕರಿಗೆ ಪಾಪ್-ಅಪ್ ಅನ್ನು ಸ್ವಯಂಚಾಲಿತವಾಗಿ ತೋರಿಸಲಾಗುತ್ತದೆ. ಗ್ರಾಹಕರು 1,000 ರಿಂದ 5,000 ರೂಗಳವರೆಗಿನ ಆಟೋ ಟಾಪ್-ಅಪ್ ಮೊತ್ತವನ್ನು ನಮೂದಿಸಬೇಕು ಮತ್ತು ಸ್ಕ್ರೀನ್‌ ಕೆಳಭಾಗದಲ್ಲಿರುವ ‘ಟಾಪ್-ಅಪ್ & ಸೆಟ್ ಆಟೋ ಟಾಪ್-ಅಪ್’ ವ್ಯಾಲೆಟ್ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ಪಿನ್ ನಮೂದಿಸಿ. ಗ್ರಾಹಕರ ಬ್ಯಾಂಕಿನಿಂದ ದೃಢೀಕರಣ ಯಶಸ್ವಿಯಾದ ಬಳಿಕ, ವ್ಯಾಲೆಟ್ ಆಯ್ಕೆಮಾಡಿದ ಮೊತ್ತಕ್ಕೆ ತಕ್ಷಣ ಮರುಚಾರ್ಜ್ ಆಗುತ್ತದೆ ಮತ್ತು ಸ್ವಯಂ-ಟಾಪ್ ಅಪ್ ಮ್ಯಾಂಡೇಟ್‌ ಅನ್ನು ರಚಿಸಲಾಗುತ್ತದೆ.