2 ವರ್ಷ ಖಾಲಿ ಇಲ್ಲ ಸೀಟ್, ಅಲುಗಾಡುತ್ತಿದೆ ಬಂಗಾಳ ವಿಕೆಟ್; ಜೂ.11ರ ಟಾಪ್ 10 ಸುದ್ದಿ! ನಾಯಕತ್ವ ಬದಲಾವಣೆ ಚರ್ಚೆಗೆ ಇದೀಗ ಸಿಎಂ ಬಿಸ್‌ವೈ ತಿರುಗೇಟು ನೀಡಿದ್ದಾರೆ. 2 ವರ್ಷ ನಾನೆ ಸಿಎಂ ಎಂದಿದ್ದಾರೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ-ಡಿಕೆಶಿ ಗೌಪ್ಯ ಚರ್ಚೆ ನಡೆಸಿದ್ದಾರೆ. ಬಂಗಾಳ ಬಿಜೆಪಿಯಲ್ಲಿ ತಳಮಳ ಶುರುವಾಗಿದೆ. ಭಾರತದ ಕ್ರಿಪ್ಟೋ ಕರೆನ್ಸಿ ಸಂಸ್ಥೆಗೆ ಇಡಿ ನೊಟೀಸ್ ನೀಡಿದೆ. ಜಾಕ್ವಲಿನ್ ಆಸ್ತಿ ವಿವರ, ಲಂಕಾ ಪ್ರವಾಸಕ್ಕೆ ಮೂವರು ಕನ್ನಡಿಗರು ಸೇರಿದಂತೆ ಜೂನ್ 11ರ ಟಾಪ್ 10 ಸುದ್ದಿ ವಿವರ ಇಲ್ಲಿವೆ. ಭಾರತದ ಅತೀ ದೊಡ್ಡ ಕ್ರಿಪ್ಟೋ ಕರೆನ್ಸಿ ವಿನಿಮಯ WazirXಗೆ ಇಡಿ ಶೋಕಾಸ್ ನೋಟಿಸ್... ದೇಶಿ ವಿನಿಮಯ ನಿರ್ವಹಣಾ ಕಾಯ್ದೆ 1999() ಉಲ್ಲಂಘಿಸಿದ ಭಾರತದ ಅತೀ ದೊಡ್ಡ ಕ್ರಿಪ್ಟೋ ಕರೆನ್ಸಿ ವಿನಿಮಯ WazirXಗೆ ಸಂಕಷ್ಟ ಎದುರಾಗಿದೆ. ನಿಯಮ ಉಲ್ಲಂಘಿಸಿದ / ಝನ್ಮಾಯಿ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್() ಹಾಗೂ ಕಂಪನಿ ನಿರ್ದೇಶಕರಾದ ನಿಶ್ಚಲ್ ಶೆಟ್ಟಿ ಮತ್ತು ಸಮೀರ್ ಹುಮಾನ್ ಮಾತ್ರೆಗೆ ಜಾರಿ ನಿರ್ದೇಶನಾಲಯ() ಶೋಕಾಸ್ ನೋಟಿಸ್ ನೀಡಿದೆ. ಸಿದ್ದರಾಮಯ್ಯ-ಡಿಕೆಶಿ ಗೌಪ್ಯ ಚರ್ಚೆ : ಚುನಾವಣೆಗೆ ನಾವು ಸಿದ್ದವೆಂದ ನಾಯಕರು... ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಇಂದು ಆಗಮಿಸಿ ಅರ್ಧಗಂಟೆಗೂ ಹೆಚ್ಚು ಕಾಲ ಗೌಪ್ಯ ಚರ್ಚೆ ನಡೆಸಿದ್ದಾರೆ. ಅಲ್ಲದೇ ಚರ್ಚೆಯ ವಿಚಾರ ತಿಳಿಸಲು ಸಾಧ್ಯವಿಲ್ಲವೆಂದು ಡಿಕೆಶಿ ಹೇಳಿದರು. ಲಂಕಾ ಸರಣಿಗೆ ಟೀಂ ಇಂಡಿಯಾ ಪ್ರಕಟ; ಪಡಿಕ್ಕಲ್‌ ಸೇರಿ ಮೂವರು ಕನ್ನಡಿಗರಿಗೆ ಸ್ಥಾನ... ಶ್ರೀಲಂಕಾ ವಿರುದ್ದ ಜುಲೈನಲ್ಲಿ ನಡೆಯಲಿರುವ ಸೀಮಿತ ಓವರ್‌ಗಳ ಏಕದಿನ ಸರಣಿಗೆ ಭಾರತ ಕ್ರಿಕೆಟ್‌ ತಂಡವನ್ನು ಪ್ರಕಟಿಸಲಾಗಿದ್ದು, ಅನುಭವಿ ಬ್ಯಾಟ್ಸ್‌ಮನ್‌ ಶಿಖರ್ ಧವನ್‌ಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ. ಇನ್ನು ನಿರೀಕ್ಷೆಯಂತೆಯೇ ದೇವದತ್ ಪಡಿಕ್ಕಲ್‌ ಸೇರಿದಂತೆ ಮೂವರು ಕನ್ನಡಿಗರು ಲಂಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿ ಮುಂದಿನ 2 ವರ್ಷ ನಾನೇ ಸಿಎಂ , ನಾಯಕತ್ವ ಗೊಂದಲಕ್ಕೆ ತೆರೆ ಎಳೆದ ಬಿಎಸ್‌ವೈ ... ನಾಯಕತ್ವ ಗೊಂದಲಕ್ಕೆ ಸಿಎಂ ತೆರೆ ಎಳೆದಿದ್ದಾರೆ. ರಾಜ್ಯದಲ್ಲಿ ಮುಂದಿನ 2 ವರ್ಷ ನಾನೇ ಸಿಎಂ ಎಂದಿದ್ದಾರೆ. ಅರುಣ್ ಸಿಂಗ್ ಹೇಳಿಕೆಯಿಂದ ನನಗೆ 100 ರಷ್ಟು ಬಲ ಬಂದಿದೆ. ಕೇಂದ್ರದ ನಾಯಕರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಎಲ್ಲರ ಸಹಕಾರದಿಂದ ಅಭಿವೃದ್ಧಿಯತ್ತ ಗಮನ ಹರಿಸುತ್ತೇನೆ ಮೋದಿ, ಅಮಿತ್ ಶಾ ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಎಂದು ಬಿಎಸ್‌ವೈ ವಿಶ್ವಾಸದ ನುಡಿಗಳನ್ನಾಡಿದ್ಧಾರೆ. ಬಾಲಿವುಡ್‌ನ ಶ್ರೀಲಂಕನ್ ಚೆಲುವೆ ಜಾಕ್ವೆಲಿನ್ ನೆಟ್ ವರ್ತ್ ವಿವರ!... ಪ್ರಸ್ತುತ ಬಾಲಿವುಡ್‌ನ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು ಜಾಕ್ವೆಲಿನ್ ಫರ್ನಾಂಡೀಸ್. ಹಾಗೇ ಇವರು ಶ್ರೀಮಂತ ಸೆಲೆಬ್ರೆಟಿಗಳ ಪಟ್ಟಿಯಲ್ಲಿಯೂ ಇದ್ದಾರೆ. ಹಲವು ಪ್ರಾಜೆಕ್ಟ್‌ಗಳನ್ನು ಪಡೆದಿರುವ ಜಾಕ್ವೆಲಿನ್‌ ಬ್ಯುಸಿಯಾಗಿರೋ ನಟಿ. ಇವರ ನೆಟ್‌ವರ್ತ್‌ ಕೇಳಿದರೆ ಖಂಡಿತ ಆಶ್ಚರ್ಯವಾಗುತ್ತದೆ. ಶ್ರೀಲಂಕಾದ ಈ ಚೆಲುವೆ ಎಷ್ಟು ಶ್ರೀಮಂತರು ಎಂಬ ಮಾಹಿತಿಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. 5 ಲಕ್ಷ ಜನಕ್ಕೆ ‘ಚೀನಿ ಆ್ಯಪ್‌’ 300 ಕೋಟಿ ದೋಖಾ! ಜನರೇ ಹುಷಾರ್‌... ಪಟಾಫಟ್‌ ಸಾಲ ನೀಡಿ ಅದಕ್ಕೆ ದುಬಾರಿ ಬಡ್ಡಿ ವಿಧಿಸಿ ಭಾರತೀಯರನ್ನು ವಂಚಿಸುತ್ತಿದ್ದ ಚೀನೀಯರು, ಇದೀಗ ಹಣ ದ್ವಿಗುಣದ ಆಮಿಷ ಒಡ್ಡಿ 5 ಲಕ್ಷಕ್ಕೂ ಹೆಚ್ಚು ಭಾರತೀಯರಿಗೆ 300 ಕೋಟಿ ರು.ಗೂ ಹೆಚ್ಚಿನ ವಂಚನೆ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ದೆಹಲಿ, ಗುರುಗ್ರಾಮ, ಡೆಹ್ರಾಡೂನ್‌ ಸೇರಿದಂತೆ ಹಲವು ಕಡೆ ದಾಳಿ ನಡೆಸಿ 12 ಜನರನ್ನು ಬಂಧಿಸಲಾಗಿದೆ. ಇದೀಗ ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ ಜನಸ್ನೇಹಿ ಅವತಾರದಲ್ಲಿ, ಹೊಸತೇನಿದೆ?... ಆದಾಯ ತೆರಿಗೆಯನ್ನು ಇ-ಫೈಲಿಂಗ್‌ ಮೂಲಕ ಸಲ್ಲಿಸುವ ವಿಧಾನ ಪ್ರಾರಂಭವಾದ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆಗೆ ಇರುವ ವೆಬ್‌ಸೈಟ್‌ನಲ್ಲಿ ಕ್ರಾಂತಿಕಾರಕ ಸುಧಾರಣೆಗಳನ್ನು ತಂದಿದೆ. ವೆಬ್‌ಸೈಟ್‌ ಹೆಸರೇ ಬದಲಾಗಿದ್ದು, ಹಲವು ವಿಶೇಷತೆಗಳನ್ನು ಹೊಸ ಜಾಲತಾಣ ಹೊಂದಿದೆ. ನೂತನ ವೆಬ್‌ಸೈಟ್‌ ಸೋಮವಾರ ಲೋಕಾರ್ಪಣೆಯಾಗಿದೆ. ಹೊಸ ವೆಬ್‌ಸೈಟ್‌ನಿಂದ ತೆರಿಗೆದಾರರಿಗೆ ಅನುಕೂಲವಿದ್ದು, ಯಾವುದೇ ಸಮಸ್ಯೆ ಇಲ್ಲದೆ ತೆರಿಗೆ ವಿವರ ತುಂಬಬಹುದಾಗಿದೆ. ಬಂಗಾಳ ಬಿಜೆಪಿಯಲ್ಲಿ ತಳಮಳ; ಭವನದಲ್ಲಿ ಮುಕುಲ್ ರಾಯ್- ಮಮತಾ ಭೇಟಿ!... ಪ್ರಭಾವಿ ನಾಯಕ ಮುಕುಲ್ ರಾಯ್ ಮತ್ತೆ ತೃಣಮೂಲಕ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ ದಟ್ಟವಾಗುತ್ತಿದೆ. ಕಾರಣ ಟಿಎಂಸಿ ನಾಯಕಿ, ಸಿಎಂ ಮಮತಾ ಬ್ಯಾನರ್ಜಿ ಭೇಟಿಯಾಗಲು ರಾಯ್, ಟಿಎಂಸಿ ಭವನಕ್ಕೆ ಹಾಜರಾಗಿದ್ದಾರೆ. ರೋಹಿಣಿ ಸಿಂಧೂರಿ ಪಾತ್ರದಲ್ಲಿ ಬಿಗ್ ಬಾಸ್ ಅಕ್ಷತಾ ಪಾಂಡವಪುರ!... ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಜೀವನಾಧಾರಿತ ಚಿತ್ರವೊಂದನ್ನು ಸ್ಯಾಂಡಲ್‌ವುಡ್‌ನಲ್ಲಿ ನಿರ್ಮಿಸಲಾಗುತ್ತಿದೆ. ರೋಹಿಣಿ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಕುತೂಹಲ ಜನರಿಗಿತ್ತು. ಇದೀಗ ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿ ಅಕ್ಷತಾ ಪಾಂಡವಪುರ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.