5 ಹಂತದಲ್ಲಿ ಅನ್‌ಲಾಕ್ ಪ್ಲಾನ್, ಚಾರ್ಲಿ ವೀಕ್ಷಣೆ 5 ಮಿಲಿಯನ್; ಜೂ.10ರ ಟಾಪ್ 10 ಸುದ್ದಿ! ಕರ್ನಾಟದಲ್ಲಿ ಜೂನ್ 14ರ ಬಳಿಕ 5 ಹಂತದಲ್ಲಿ ಅನ್‌ಲಾಕ್ ಪ್ಲಾನ್ ಮಾಡುವ ಸಾಧ್ಯತೆ. ಮಕ್ಕಳ ಕೋವಿಡ್ ಚಿಕಿತ್ಸೆ ಹಾಗೂ ಆರೈಕೆಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಬಿಎಸ್ ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಹಕಮಾಂಡ್ ಸ್ಪಷ್ಟನೆ ನೀಡಿದೆ. 777 ಚಾರ್ಲಿ ಟೀಸರ್ ನಾಲ್ಕೇ ದಿನದಲ್ಲಿ 5 ಮಿಲಿಯನ್ ವೀಕ್ಷಣೆ, ರಾಹುಲ್‌ಗೆ ಇರಾನಿ ಕಿವಿ ಮಾತು ಸೇರಿದಂತೆ ಜೂನ್ 10ರ ಟಾಪ್ 10 ಸುದ್ದಿ ವಿವರ ಇಲ್ಲಿವೆ. 5 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್, ಸ್ಟೀರಾಯ್ಡ್ಸ್ ಬೇಡ; ಕೋವಿಡ್ ಮಾರ್ಗಸೂಚಿ ಪ್ರಕಟಿಸಿದ !... ಕೊರೋನಾ ವೈರಸ್ ಮಕ್ಕಳಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕೊರೋನಾದಿಂದ ಮಕ್ಕಳನ್ನು ರಕ್ಷಿಸಲು ಪೋಷಕರು ಮುಂಜಾಗ್ರತೆ ವಹಿಸುತ್ತಿದ್ದಾರೆ. ಇದರ ನಡುವೆ ಕೊರೋನಾ ವೈರಸ್ ತಗುಲಿದ ಮಕ್ಕಳ ಆರೈಕೆ ಹಾಗೂ ಚಿಕಿತ್ಸೆಗೆ ಡೈರೆಕ್ಟರ್ ಜನರಲ್ ಆಫ್ ಹೆಲ್ತ್ ಸರ್ವೀಸ್() ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿ ಪ್ರಕಾರ 18 ವರ್ಷದೊಳಗಿನ ಮಕ್ಕಳ ಕೊರೋನಾ ಚಿಕಿತ್ಸೆಗೆ ರೆಮ್ಡಿಸಿವಿರ್ ಬಳಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಗೊಂದಲ ಹುಟ್ಟಿಸೋದು ಬಿಡಿ, ಲಸಿಕೆ ಹಾಕಿಸ್ಕೊಳ್ಳಿ: ರಾಹುಲ್‌ಗೆ ಸ್ಮೃತಿ ಇರಾನಿ ಕಿವಿಮಾತು!... ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಲಸಿಕೆ ಅಭಿಯಾನದ ವಿಚಾರವಾಗಿ ಮತ್ತೊಮ್ಮೆ ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ. ಆದರೆ ಈ ಬಾರಿ ಅಮೇಠಿಯ ಸಂಸದೆ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಹುಲ್‌ಗೆ ತಿರುಗೇಟು ನೀಡಿದ್ದಾರೆ. ಭಯ, ಗೊಂದಲ ಸೃಷ್ಟಿಸೋದನ್ನು ಬಿಟ್ಟು ಲಸಿಕೆ ಹಾಕಿಸ್ಕೊಳ್ಳಿ ಎಂದು ಕಿವಿಮಾತು ಹೇಳಿದ್ದಾರೆ. ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ : ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟನೆ... ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಅವರನ್ನು ಬದಲಾಯಿಸುವುದಿಲ್ಲವೆಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಬಹುಮಹಡಿ ಕಟ್ಟಡ ಕುಸಿತ, 8 ಮಕ್ಕಳು ಸೇರಿ 11 ಸಾವು!... ಮುಂಬೈನ ಮಲಾಡ್​​ನಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿದ್ದು, ಈ ದುರಂತದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಬುಧವಾರ ಸುಮಾರು 9 ಮಂದಿ ಸಾವನ್ನಪ್ಪಿದ್ದು, ಇಂದು, ಗುರುವಾರ ಸಾವಿನ ಸಂಖ್ಯೆ 11ಕ್ಕೇರಿದೆ. ಸಿಎಂ ಮಹತ್ವದ ಸಭೆ: 5 ಹಂತದಲ್ಲಿ ರಾಜ್ಯ ಅನ್‌ಲಾಕ್‌ ಸಾಧ್ಯತೆ!... ರಾಜ್ಯದಲ್ಲಿ ಕೊರೋನಾ ಅಬ್ಬರ ಇಳಿಮುಖ ಆಗುತ್ತಿದ್ದಂತೆ ಲಾಕ್‌ಡೌನ್‌ ಸಡಿಲಿಸಲು ಸಿದ್ಧತೆ ಆರಂಭವಾಗಿದೆ. ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಇರುವ ಜಿಲ್ಲೆಗಳನ್ನು ಪರಿಗಣಿಸಿ 4-5 ಹಂತಗಳಲ್ಲಿ ಜಿಲ್ಲಾವಾರು ಅನ್‌ಲಾಕ್‌ ಮಾಡಲು ಚಿಂತನೆ ನಡೆದಿದೆ. ಐಪಿಎಲ್ 2021 ಭಾಗ-2 ದಿನಾಂಕ ಖಚಿತಪಡಿಸಿದ ರಾಜೀವ್ ಶುಕ್ಲಾ... ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಇನ್ನುಳಿದ ಪಂದ್ಯಗಳು ಮುಂಬರುವ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 15ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಖಚಿತಪಡಿಸಿದೆ. ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ '777 ಚಾರ್ಲಿ' ಟೀಸರ್; 4 ದಿನದಲ್ಲಿ 5 ಮಿಲಿಯನ್!... ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದಂದು ಬಿಡುಗಡೆಯಾದ 777 ಚಾರ್ಲಿ ಸಿನಿಮಾ ಕೇವಲ ನಾಲ್ಕು ದಿನಗಳಲ್ಲಿ 5 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಬಹು ದಿನಗಳ ನಂತರ ರಕ್ಷಿತ್‌ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅದರಲ್ಲೂ ಪುಟ್ಟ ಹುಡುಗಿ ಶಾರ್ವರಿ ಎಲ್ಲರ ಗಮನ ಸೆಳೆದಿದ್ದಾಳೆ. ನಟಿ ಕಂಗನಾ ರಣಾವತ್ ಬಳಿ ತೆರಿಗೆ ಕಟ್ಟಲು ಹಣವಿಲ್ಲ!... ಖಾಸಗಿ ಸಂದರ್ಶವೊಂದರಲ್ಲಿ ನಟ ವಿವೇಕ್ ಒಬಿರಾಯ್ ನೀಡಿದ ಹೇಳಿಕೆ ವೈರಲ್ ಆಗುತ್ತಿದೆ. ಸಲ್ಮಾನ್ ಖಾನ್ ವಿರುದ್ಧ ಮಾತನಾಡಲು ಕಮಲ್‌ಗೆ ಮತ್ತೊಂದು ಅವಕಾಶ ಸಿಕ್ಕಿದೆ. : ಆಲ್ಫಬೆಟ್‌ CEOಗೆ ಶುಭಾಶಯಗಳ ಮಹಾಪೂರ!... ವಿಶ್ವದ ನಂಬರ್ ವನ್ ಸರ್ಚ್ ಇಂಜಿನ್ Googleನ ಸುಂದರ್ ಪಿಚೈ ಇಂದು,ಜೂನ್ 10ರಂದು ತಮ್ಮ 49ನೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿರುವ ಇಂದಿನ ಕಾಲದಲ್ಲಿ ಸುಂದರ್ ಪಿಚೈ ಅಂದ್ರೆ ಯಾರು ಎಂದು ತಿಳಿಯದ ವ್ಯಕ್ತಿ ಯಾರೂ ಬಹುಶಃ ಇರಲಿಲಕ್ಕಿಲ್ಲ.ತಮ್ಮ ಪರಿಶ್ರಮದಿಂದ ಯಶಸ್ಸಿನ ಮೆಟ್ಟಿಲೇರ ಬಯಸುವ ಪ್ರತಿಯೊಬ್ಬ ಯುವಕ/ಯುವತಿಗೂ ಸುಂದರ್ ಪಿಚೈ ಪ್ರೇರಣೆಯಾಗಿದ್ದಾರೆ. ಹಾಸನದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ : ಒಂಟಿ ಸಲಗ ಸೆರೆ... ಆಲೂರು ,ಸಕಲೇಶಪುರ ಭಾಗದಲ್ಲಿ ಜನರ ಬಲಿ ಪಡೆದಿದ್ದ ಒಂಟಿ ಸಲಗ ಕೊನೆಗೂ ಸೆರೆಯಾಗಿದೆ. ಇಂದು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಕಾಡಾನೆ ಸೆರೆ ಹಿಡಿಯಲಾಗಿದೆ.