ಟ್ವಿಟರ್‌ನಿಂದ ಬ್ಲೂಟಿಕ್ ಕಸರತ್ತು, ಬಿಜೆಪಿಗರ ದಿನಸಿಗೆ ಕುತ್ತು; ಜೂ.5ರ ಟಾಪ್ 10 ಸುದ್ದಿ! ಸಿಎಂ ಯಡಿಯೂರಪ್ಪ ರಾಜ್ಯದಲ್ಲಿ ಷರತ್ತುಬದ್ದ ಅನ್‌ಲಾಕ್ ಸುಳಿವು ನೀಡಿದ್ದಾರೆ. ಕೇಂದ್ರಕ್ಕೆ ತಿರುಗೇಟು ನೀಡಲು ಟ್ವಿಟರ್ ಇದೀಗ ಹೊಸ ಕಸರತ್ತು ಆರಂಭಿಸಿದೆ. ಬಂಗಾಳದಲ್ಲಿ ಬಿಜೆಪಿಗರಿಗೆ ದಿನಸಿ, ನೀರು, ಲಸಿಕೆ ರದ್ದು ಮಾಡಲಾಗಿದೆ. ವಿಶ್ವಗೆಲ್ಲಲು ಚೀನಾದಿಂದ ಜೈವಿಕ ಅಸ್ತ್ರ ಪ್ರಯೋಗ, ರಾಜಕೀಯ ಸೇರ್ತಾರಾ ಸೂನು ಸೂದ್ ಸೇರಿದಂತೆ ಜೂನ್ 5ರ ಟಾಪ್ 10 ಸುದ್ದಿ ವಿವರ ಇಲ್ಲಿವೆ. ಅನ್‌ಲಾಕ್‌ ಸುಳಿವು ನೀಡಿದ ಸಿಎಂ ಯಡಿಯೂರಪ್ಪ, ಷರತ್ತುಗಳು ಅನ್ವಯ!... 'ಪಾಸಿಟಿವಿಟಿ ದರ ಶೇ. 5 ಕ್ಕೆ ತಗ್ಗಿದರೆ ಅನ್‌ಲಾಕ್ ಮಾಡುತ್ತೇವೆ. ಲಾಕ್‌ಡೌನ್ ಸಡಿಲಿಕೆ ಬಗ್ಗೆ ಅಧಿಕಾರಿಗಳು, ಸಚಿವರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ' ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಉಪರಾಷ್ಟ್ರಪತಿ ಬಳಿಕ ಮುಖ್ಯಸ್ಥರ ಬ್ಲೂ ಬ್ಯಾಡ್ಜ್ ರದ್ದು ಮಾಡಿ ಪೇಚಿಗೆ ಸಿಲುಕಿದ ಟ್ವಿಟರ್!... ವೆರಿಫೈಡ್ ಖಾತೆಯ ಬ್ಲೂ ಬ್ಯಾಡ್ಜ್ ರದ್ದು ಮಾಡುತ್ತಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಬಳಿಕ ಇದೀಗ ಮುಖ್ಯಸ್ಥ ಮೋಹನ್ ಭಾಗವತ್ ಟ್ವಿಟರ್ ಖಾತೆಯ ಬ್ಲೂ ಬ್ಯಾಡ್ಜ್ ತೆಗೆದು ಹಾಕಿದೆ. ಕಣ್ಣಾಮುಚ್ಚಾಲೆ ಆಟದ ಹಿಂದೆ ಚೀನಾ ಕೈವಾಡ; ಅಮೆರಿಕ ಅಧಿಕಾರಿ!... ಕೊರೋನಾ ಹಿಂದೆ ಚೀನಾ ಕೈವಾಡ ಅನ್ನೋ ಮಾತುಗಳು ಬಲವಾಗತೊಡಗಿದೆ. ಇದೀಗ ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹಗಾರ() ಬಹಿರಂಗ ಪಡಿಸಿದ ಕೆಲ ಮಾಹಿತಿಗಳು ಚೀನಾ ಮೇಲೆ ಬೆರಳು ತೋರಿಸುತ್ತಿದೆ. ಭಾರತಕ್ಕೆ ಲಸಿಕೆ, ಬೈಡೆನ್ ನಿರ್ಧಾರಕ್ಕೆ ಜೈ ಎಂದ ಅಮೆರಿಕದ ನಾಯಕರು! ... ಭಾರತಕ್ಕೆ ಅಮೆರಿಕದಲ್ಲಿ ಉತ್ಪಾದಿಸಲಾದ ಲಸಿಕೆ ನೀಡುವ ಅಧ್ಯಕ್ಷ ಬೈಡೆನ್ ನಿರ್ಧಾರಕ್ಕೆ ಅನೇಕ ನಾಯಕರು ಬೆಂಬಲ ಸೂಚಿಸಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ ಎಂದು ಅವರು ಕೊಂಡಾಡಿದ್ದಾರೆ. ಬಂಗಾಳದಲ್ಲಿ ಬಿಜೆಪಿಗರಿಗೆ ನೀರು, ದಿನಸಿ ಬಂದ್: ವ್ಯಾಕ್ಸಿನ್ ಕೂಡಾ ಸಿಗಲ್ಲ!... ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಬಳಿಕ ನಡೆದ ಹಿಂಸಾಚಾರ ಪ್ರಕರಣದ ಬಿಸಿ ಇನ್ನೂ ಆರಿಲ್ಲ, ಆಧರೆ ಅಷ್ಟರಲ್ಲಾಗಲೇ ಟಿಎಂಸಿ ಹೊರಡಿಸಿರುವ ಆದೇಶವೊಂದು ಎಲ್ಲರನ್ನೂ ಬೆಚ್ಚಿ ಬೀಳುವಂತೆ ಮಾಡಿದೆ. ಟಿಎಂಸಿ ಕೆಲ ಬಿಜೆಪಿಗರ ಲಿಸ್ಟ್ ಜಾರಿಗೊಳಿಸಿ, ಈ ಪಟ್ಟಿಯಲ್ಲಿರುವವರಿಗೆ ದಿನಸಿ ನೀಡಬಾರದೆಂದು ಅಂಗಡಿ ವ್ಯಾಪಾರಿಗಳಿಗೆ ಆದೇಶಿಸಿದೆ. ಸಾಲದೆಂಬಂತೆ ಚಹಾ ಮಾರಾಟಗಾರರಿಗೂ ಇವರಿಗೆ ಟೀ ವಿತರಿಸದಂತೆ ಸೂಚಿಸಿದೆ. ಮೌಖಿಕ ಆದೇಶದೊಂದಿಗೆ ಈ ಪಟ್ಟಿಯನ್ನು ಅಂಗಡಿ ವ್ಯಾಪಾರಿಗಳಿಗೆ ರವಾನಿಸಲಾಗಿದೆ. ಇಂಗ್ಲೆಂಡ್‌ನಲ್ಲಿ 3 ದಿನ ಭಾರತ ಕ್ರಿಕೆಟಿಗರ ಪರಸ್ಪರ ಭೇಟಿಗೆ ನಿಷೇಧ... ನ್ಯೂಜಿಲೆಂಡ್‌ ವಿರುದ್ಧ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಆಡಲು ಇಂಗ್ಲೆಂಡ್‌ಗೆ ಆಗಮಿಸಿರುವ ಭಾರತ ಕ್ರಿಕೆಟ್‌ ತಂಡವನ್ನು ಬಿಗಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ರಾಜಕೀಯಕ್ಕೆ ಬರ್ತಾರಾ ನಟ ಸೋನು ಸೂದ್?... ಕೊರೋನಾ ಸೋಂಕು ಭಾರತಕ್ಕೆ ತಗುಲಿದ ದಿನದಿಂದಲೂ ಬಾಲಿವುಡ್ ನಟ ಸೋನು ಸೂದ್‌ ನಿರಂತರವಾಗಿ ಜನರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸೋನು ಸಮಾಜ ಸೇವೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಆದರೆ ಕೆಲವರು ಇದು ರಾಜಕೀಯಕ್ಕೆ ಎಂಟ್ರಿ ಕೊಡಲು ಮಾಡುತ್ತಿರುವ ಟ್ರಿಕ್ ಎಂದು ಗಾಸಿಪ್ ಎಬ್ಬಿಸುತ್ತಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ನಟ ಸೋನು ಸ್ಪಷ್ಟನೆ ನೀಡಿದ್ದಾರೆ. ಪರಿಣಾಮ ನೆಟ್ಟಗಿರಲ್ಲ: ಟ್ವಿಟರ್‌ಗೆ ಕೇಂದ್ರದ ಕೊನೇ ವಾರ್ನಿಂಗ್!... ಟ್ವಿಟರ್‌ ಹಾಗೂ ಕೇಂದ್ರದ ನಡುವಿನ ವಿವಾದ ಕೊನೆಯಾಗುವ ಲಕ್ಷಣ ಕಾಣುತ್ತಿಲ್ಲ. ಕೇಂದ್ರ ಸರ್ಕಾರ ಮೈಕ್ರೋ ಬ್ಲಾಗಿಂಗ್ ಸೈಟ್‌ ಟ್ವಿಟರ್‌ಗೆ ಕೊನೇ ಎಚ್ಚರಿಕೆ ನೀಡಿದ್ದು, ಡಿಜಿಟಲ್ ನಿಯಮವನ್ನು ಕೂಡಲೇ ಜಾರಿಗೊಳಿಸಿ ಇಲ್ಲವಾದಲ್ಲಿ, ಪರಿಣಾಮ ನೆಟ್ಟಗಿರಲ್ಲ ಎಂದು ಖಡಕ್‌ ಆಗೇ ಹೇಳಿದೆ. ವೇತನ ಪಡೆಯೋರಿಗೊಂದು ಗುಡ್‌ ನ್ಯೂಸ್, ನೂತನ ಬ್ಯಾಂಕಿಂಗ್ ವ್ಯವಸ್ಥೆ ಜಾರಿ!... ಆ.1ರಿಂದ ಬ್ಯಾಂಕ್‌ಗೆ ರಜೆ ಇದ್ದರೂ ನಿಮ್ಮ ವೇತನ, ಪಿಂಚಣಿ ಪಾವತಿ ಆಗಲಿದೆ ಹಾಗೂ ಸಾಲದ ಮೇಲಿನ ಇಎಂಐ ಸೇರಿದಂತೆ ಮತ್ತಿತರ ವಹಿವಾಟುಗಳು ಹಾಗೂ ಎಸ್‌ಐಪಿ ಹೂಡಿಕೆಗಳು ಅದೇ ದಿನವೇ ವರ್ಗಾವಣೆ ಆಗಲಿವೆ. ನುಡಿದಂತೆ ನಡೆದ ಯಶ್; ಕಲಾವಿದರ ವೈಯಕ್ತಿಕ ಖಾತೆಗೆ ಹಣ ವರ್ಗಾವಣೆ!... ಕೊರೋನಾ ಲಾಕ್‌ಡೌನ್‌ನಿಂದ ಸಿನಿಮಾ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಕಲಾವಿದರು ಎಂದೂ ಕಷ್ಟ ನೋಡಬಾರದು ಅವರ ಪರ ನಾವಿದ್ದೀವಿ ಎಂದ ನಟ ಯಶ್ ಕಲಾವಿದರ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ 5,000 ಸಾವಿರ ರೂ. ವರ್ಗಾವಣೆ ಮಾಡಿಸಿದ್ದಾರೆ. ನುಡಿದಂತೆ ನಡೆದ ಯಶ್‌ಗೆ ಕಲಾವಿದರು ವಿಡಿಯೋ ಮೂಲಕ ಧನ್ಯವಾಗಳನ್ನು ತಿಳಿಸಿದ್ದಾರೆ