ಕೊರೋನಾದಿಂದ ಐಪಿಎಲ್ ಸ್ಥಗಿತ, ಲಾಕ್‌ಡೌನ್‌ನತ್ತ ಸಾಗುತ್ತಿದೆಯಾ ಭಾರತ? ಮೇ.4ರ ಟಾಪ್ 10 ಸುದ್ದಿ ವಿಶ್ವ ಇದುವರೆಗೆ ಎದುರಿಸದ ಅತ್ಯಂತ ಕಠಿಣ ಹಾಗೂ ಸವಾಲಿನ ಪರಿಸ್ಥಿತಿಯನ್ನು ಭಾರತ ಎದುರಿಸುತ್ತಿದೆ. ಅಷ್ಟರ ಮಟ್ಟಿಗೆ ಕೊರೋನಾ ದೇಶದಲ್ಲಿ ಭೀಕರತೆ ಸೃಷ್ಟಿಸಿದೆ. ಯಾರ ಸಂಪರ್ಕ ಇಲ್ಲದೆ ನಡೆಯುತ್ತಿದ್ದ ಐಪಿಎಲ್ ರದ್ದಾಗಿದೆ, ನಿಯಂತ್ರಣಕ್ಕೆ ಲಾಕ್‌ಡೌನ್ ಸಲಹೆ ನೀಡಿದ ಸುಪ್ರೀಂ ಕೋರ್ಟ್, ವಿಚ್ಛೇದನಕ್ಕೆ ಮುಂದಾದ ಬಿಲ್‌ ಗೇಟ್ಸ್ ದಂಪತಿ, ಭಾರತಕ್ಕೆ ಬಂದು ವಿದೇಶದ ನೆರವು ಸೇರಿದಂತೆ ಮೇ 4ರ ಟಾಪ್ 10 ಸುದ್ದಿ ವಿವರ ಇಲ್ಲಿವೆ. ವಿದೇಶದಿಂದ ಆಕ್ಸಿಜನ್ ಕಂಟೈನರ್ ಆಗಮನ; ತಕ್ಷಣವೇ ದೆಹಲಿ ಸೇರಿ ಉತ್ತರ ಭಾರತಕ್ಕೆ ರವಾನೆ!... ವಿದೇಶಗಳಿಂದ ಭಾರತಕ್ಕೆ ಆಗಮಿಸಿದ ಆಕ್ಸಿಜನ್ ಕಂಟೈನರ್, ವೈದ್ಯಕೀಯ ಸಲಕರಣೆಗಳನ್ನು ದೇಶದಲ್ಲಿನ ಅತೀ ಅಗತ್ಯ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ರವಾನೆ ಮಾಡಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ. ಹಿಂಸಾಚಾರದ ಬಗ್ಗೆ ಮಾತು: ನಟಿ ಕಂಗನಾ ಟ್ವಿಟರ್‌ ಖಾತೆ ಸ್ಥಗಿತ!... ಪಶ್ಚಿಮ ಬಂಗಾಳ ಫಲಿತಾಂಶದ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರ| ಹಿಂಸಾಚಾರದ ಬಗ್ಗೆ ವಿಡಿಯೋ ಪೋಸ್ಟ್ ಮಾಡಿದ ನಟಿ ಕಂಗನಾ| ವಿಡಿಯೋ ಪೋಸ್ಟ್‌ ಮಾಡಿದ ಬೆನ್ನಲ್ಲೇ ನಟಿ ಅಕೌಂಟ್‌ ನಿಷ್ಕ್ರಿಯ ಲಾಕ್‌ಡೌನ್‌ ಒಂದೇ ಪರಿಹಾರ, ಯೂ ಟರ್ನ್‌ ಹೊಡೆದ ರಾಗಾಗೆ ನೆಟ್ಟಿಗರ ಕ್ಲಾಸ್‌!... ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಕೊರೋನಾ| ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್ ಹೇರಿ ಎಂದ ರಾಹುಲ್ ಗಾಂಧಿ| ಒಂದೇ ವರ್ಷದಲ್ಲಿ ಯೂ ಟರ್ನ್ ಹೊಡೆದ ರಾಹುಲ್ ಗಾಂಧಿಗೆ ನೆಟ್ಟಿಗರ ಕ್ಲಾಸ್ ಜನರ ಹಿತದೃಷ್ಟಿಯಿಂದ ದೇಶವನ್ನು ಲಾಕ್‌ಡೌನ್ ಮಾಡಿ: ಸರ್ಕಾರಕ್ಕೆ ಸುಪ್ರೀಂ ಸೂಚನೆ!... ದೇಶಾದ್ಯಂತ ಕೊರೋನಾ ಆರ್ಭಟಿಸುತ್ತಿದೆ. ಸೋಂಕಿತರ ಹಾಗೂ ಸಾವಿನ ಸಂಖ್ಯೆ ಏರುತ್ತಲೇ ಇದೆ. ಹಾಗಿದ್ದರೆ ಇದೆಲ್ಲವನ್ನೂ ನಿಯಂತ್ರಿಸೋದು ಹೇಗೆ? ದೇಶಕ್ಕೆ ದೇಶವೇ ಮತ್ತೆ ಲಾಕ್‌ ಆಗುತ್ತಾ ಎಂಬ ಅನುಮಾನ ಮನೆ ಮಾಡಿದೆ. 27 ವರ್ಷದ ದಾಂಪತ್ಯ ಅಂತ್ಯ: ವಿಚ್ಛೇದನಕ್ಕೆ ಮುಂದಾದ ಬಿಲ್‌ ಗೇಟ್ಸ್ ದಂಪತಿ!... ವಿಚ್ಚೇದನಕ್ಕೆ ಮುಂದಾದ ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್ ಗೇಟ್ಸ್‌ ಮತ್ತು ಮೆಲಿಂಡಾ ಗೇಟ್ಸ್‌ ದಂಪತಿ| 27 ವರ್ಷದ ದಾಂಪತ್ಯ ಜೀವನಕ್ಕೆ ಪೂರ್ಣವಿರಾಮ| ಟ್ವಿಟರ್‌ನಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿದ ಬಿಲ್‌ ಗೇಟ್ಸ್‌ ಐಪಿಎಲ್ ರದ್ದು: ಈ ಸಲ ಕಪ್ ಕೊರೋನಾದ್ದು!... ಐಪಿಎಲ್‌ಗೂ ಬಡಿದ ಕೊರೋನಾ ಭೀತಿ| ಟೂರ್ನಿ ಅನಿರ್ದಿಷ್ಟವಧಿಗೆ ಮುಂದೂಡಿಕೆ| ಐಪಿಎಲ್‌ ಪಂದ್ಯಾವಳಿಯನ್ನು ರದ್ದುಗೊಳಿಸಿರುವ ಬಗ್ಗೆ ಮಾಹಿತಿ ನೀಡಿದ ಬಿಸಿಸಿಐ ಉಪಾಧ್ಯಕ್ಷ ಬೆಂಗ್ಳೂರಲ್ಲಿ ದುರಂತ ತಪ್ಪಿಸಿದ ಸೋನು ಸೂದ್..! ತುರ್ತು ಆಕ್ಸಿಜನ್ ಸಪ್ಲೈ... ಬಾಲಿವುಡ್ ನಟ ಸೋನು ಸೂದ್ ಬೆಂಗಳೂರಲ್ಲಿ ಆಕ್ಸಿಜನ್ ಸಪ್ಲೈ ಮಾಡೋ ಮೂಲಕ ಎದುರಾಗಲಿದ್ದ ದೊಡ್ಡ ಸಮಸ್ಯೆಯನ್ನು ಪರಿಹರಿಸಿದೆ. ಮಾಹಿತಿ ಸಿಕ್ಕ ಕೂಡಲೇ ಸೋನು ಸೂದ್ ಟ್ರಸ್ಟ್‌ನಿಂದ ತಕ್ಷಣ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ. ಕೊರೋನಾ ಸಂಕಷ್ಟ; ಭಾರತಕ್ಕೆ 37 ಕೋಟಿ ರೂ. ನೆರವು ಘೋಷಿಸಿದ ಸ್ಯಾಮ್ಸಂಗ್!... ಕೊರೋನಾ ವಿರುದ್ಧದ ಭಾರತದ ಹೋರಾಟಕ್ಕೆ ವಿಶ್ವದೆಲ್ಲೆಡೆಯಿಂದ ನೆರವು ಹರಿದು ಬರುತ್ತಿದೆ. ಈ ಮೂಲಕ ಭಾರತ ತನ್ನು ಹೋರಾಟವನ್ನು ತೀವ್ರಗೊಳಿಸಿದೆ. ಇದೀಗ ಸ್ಯಾಮ್ಸಂಗ್ ಭಾರತಕ್ಕೆ ಹಣಕಾಸು ಹಾಗೂ ವೈದ್ಯಕೀಯ ಸಲಕರಣೆ ನೆರವು ಘೋಷಿಸಿದೆ. ಪಶ್ಚಿಮ ಬಂಗಾಳ ಹಿಂಸಾಚಾರ: ಕಾನೂನು ಸುವ್ಯವಸ್ಥೆ ಬಗ್ಗೆ ಪಿಎಎಂ ಮೋದಿ ಕಳವಳ!... ಪಶ್ಚಿಮ ಬಂಗಾಳದಲ್ಲಿ ಗೆದ್ದು ಬೀಗಿದ ಮಮತಾ ಪಕ್ಷ| ಫಲಿತಾಂಶದ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರ| ಹದಗೆಟ್ಟ ಕಾನೂನು ಸುವ್ಯವಸ್ಥೆ ಬಗ್ಗೆ ಮೋದಿ ಕಳವಳ ಮ್ಯಾಟ್ರಿಮೋನಿ ಎಚ್ಚರ, ಈ ರೀತಿಯೂ ವಂಚನೆ ಮಾಡ್ತಾರೆ ಹುಷಾರ್!... ಮ್ಯಾಟ್ರಿಮೋನಿ ಸೈಟ್ ಪರಿಚಯ ಎಚ್ಚರ/ ವಿವಿಧ ಕಾರಣ ಹೇಳಿ ಹಣ ಕೇಳ್ತಾರೆ/ ಮಹಿಳೆಗೆ ಮಹಾ ಮೋಸ/ ಎರಡನೇ ಮದುವೆಯಾಗಬಯಸಿದ್ದರು