ಹೊಸ ಫೀಚರ್ಸ್, ಕೈಗೆಟುಕುವ ಬೆಲೆ; ಮೈಕ್ರೋಮ್ಯಾಕ್ಸ್ In1 ಮೊಬೈಲ್ ಬಿಡುಗಡೆ! ಚೀನಾ ಮೊಬೈಲ್‌ಗಳಿಗೆ ಸೆಡ್ಡು ಹೊಡೆಯಬಲ್ಲ, ಭಾರತದ, ಮೇಕ್ ಇನ್ ಇಂಡಿಯಾದ ಮೈಕ್ರೋಮ್ಯಾಕ್ಸ್ In1 ಮೊಬೈಲ್ ಬಿಡುಗಡೆಯಾಗಿದೆ. ಕಡಿಮೆ ದರದ ಈ ಮೊಬೈಲ್ ಕುರಿತ ಮಾಹಿತಿ ಇಲ್ಲಿದೆ. ನವದೆಹಲಿ(ಎ.06)ಕಿಸೆಗ ಭಾರವಾಗದ ಬಜೆಟ್ ಮೊಬೈಲ್ ಮೈಕ್ರೋಮ್ಯಾಕ್ಸ್ In1 ಹೊಸ ಫೀಚರ್‌ಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿಕೊಟ್ಟಿದೆ. 6.67 ಇಂಚುಗಳ ಹಾಗೂ ಪಂಚ್ ಹೋಲ್ ಡಿಸ್‌ಪ್ಲೇ , ಮೀಡಿಯಾ ಟೆಕ್ ಹೇಲಿಯೋ ಉ80 ಪ್ರೊಸೆಸರ್, 48 ಟ್ರಿಪ್ಪಲ್ ರಿಯರ್ ಕ್ಯಾಮರಾ ಇತ್ಯಾದಿ ಫೀಚರ್‌ಗಳನ್ನು ಎನ್‌ಜಾಯ್ ಮಾಡಬಹುದು. : 6,999 ಮತ್ತು 10,999 ರೂ.ಗೆ ಫೋನ್! 8 ಸೆಲ್ಫಿ ಕ್ಯಾಮರವಿದೆ. ಬಜೆಟ್ ಮೊಬೈಲ್ ಆದ್ರೂ 5000 ಬ್ಯಾಟರಿ ಇದೆ. ಎರಡು ದಿನ ಬ್ಯಾಟರಿ ಲ್‌ಫ್ ಬರುತ್ತೆ ಅಂತ ಕಂಪೆನಿ ಹೇಳಿದೆ. 4ಜಿಬಿ+ 65GB ಹಾಗೂ 6GB+128 ವೇರಿಯಂಟ್‌ಗಳು ಲಭ್ಯವಿದೆ. ಈ ಮೂಲಕ ದೇಶಿಯ ಮೈಕ್ರೋಮ್ಯಾಕ್ಸ್, ಇದೀಗ ಚೀನಾ ಬ್ರಾಂಡ್‌ಗಳಿಗೆ ತೀವ್ರ ಪೈಪೋಟಿ ನೀಡಿದೆ. ಆತ್ಮನಿರ್ಭರ್ ಭಾರತ: ಮೊಬೈಲ್ ಸೀರಿಸ್ ಬಿಡುಗಡೆ ಮಾಡುತ್ತಿದೆ ಮೈಕ್ರೋಮ್ಯಾಕ್ಸ್! ಎರಡು ವೇರಿಯೆಂಟ್ ಫೋನ್ ಲಭ್ಯವಿದೆ. ಇದರ ಬೆಲೆ ಈ ಕೆಳಗಿನಂತಿದೆ:10,499 ರೂ.(4GB+65GB)11,999ರು. (6GB+128 )