ಕೊರೋನಾಗೆ ಕಂಗಾಲಾದ ಕರ್ನಾಟಕ, ಸ್ಯಾಂಡಲ್‌ವುಡ್‌ಗೆ ಮತ್ತೆ ಸಂಕಟ; ಎ.3ರ ಟಾಪ್ 10 ಸುದ್ದಿ! ಕೊರೋನಾ ಹೆಚ್ಚಾಗುತ್ತಿರುವ ಕಾರಣ ಕರ್ನಾಟಕದಲ್ಲಿ ಕಠಿಣ ರೂಲ್ಸ್ ಜಾರಿ ಮಾಡಲಾಗಿದೆ. ಆದರೆ ಸಿಎಂ ಕೆಲ ನಿರ್ಬಧ ತೆರವುಗೊಳಿಸಬೇಕು ಎಂದು ನಟ ಪುನೀತ್ ರಾಜ್‌ಕುಮಾರ್ ಮನವಿ ಮಾಡಿದ್ದಾರೆ. ಪ್ರಧಾನಿಯಾದರೆ ರಾಹುಲ್ ಗಾಂಧಿ ಪ್ರತಿಕ್ರಿಯೆ ಏನು? ಹೊಸ ಲುಕ್‌ನಲ್ಲಿ ಕಾಣಿಸಿಕೊಂಡ ರಚಿತಾ ರಾಮ್ ಸೇರಿದಂತೆ ಎಪ್ರಿಲ್ 3ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ವಿವರ ಇಲ್ಲಿವೆ. ಗಡಿ ದಾಟಿ ಭಾರತಕ್ಕೆ ಬಂದ ಪಾಕ್‌ ಬಾಲಕ: ಊಟ, ತಿಂಡಿ ಕೊಟ್ಟು ಕಳುಹಿಸಿದ ಬಿಎಸ್‌ಎಫ್‌!... ಭಾರತ ಹಾಗೂ ಪಾಕಿಸ್ತಾನ ಗಡಿ ಭಾಗದಲ್ಲಿ ನಿಯೋಜಿಸಿರುವ ಬಿಎಸ್‌ಎಫ್‌ ಯೋಧರು ಮತ್ತೊಮ್ಮೆ ತಮ್ಮ ಮಾನವೀಯ ನಡೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಯೋಧರು ಪುಟ್ಟ ಬಾಲಕನೊಬ್ಬನನ್ನು ಪಾಕಿಸ್ತಾನಕ್ಕೆ ಮರಳಿ ಕಳುಹಿಸಿದ್ದಾರೆ. ಕೊರೋನಾ 2ನೇ ಅಲೆಯಿಂದ ಶೇ.77 ರಷ್ಟು ಮಂದಿ ಲಸಿಕೆ ಹಾಕಿಸಿಕೊಳ್ಳಲು ಸಿದ್ಧ; ಸಮೀಕ್ಷೆ ಬಹಿರಂಗ!... ದೇಶದಲ್ಲೀಗ ಕೊರೋನಾ 2ನೇ ಅಲೆ ಬೀಸುತ್ತಿದೆ ಅನ್ನೋ ಮಾತು ಬಲಗೊಳ್ಳುತ್ತಿದೆ. ಕಾರಣ ಪ್ರತಿ ದಿನ ದಾಖಲೆಯ ಪ್ರಮಾಣದಲ್ಲಿ ಕೊರೋನಾ ಹೆಚ್ಚಾಗುತ್ತಿದೆ. ಕೊರೋನಾ ಲಸಿಕೆ ಅಭಿಯಾನ ಆರಂಭವಾದಾಗ ಸರಾಸರಿ 39% ಮಂದಿ ಲಸಿಕೆ ಹಾಕಿಸಿಕೊಳ್ಳಲು ಸಿದ್ಧರಿದ್ದರು. ಆದರೆ 2ನೇ ಅಲೆ ಆರಂಭಗೊಂಡ ಬಳಿಕ ಈ ಸಂಖ್ಯೆ 77ಕ್ಕೇರಿದೆ ಕೊರೋನಾ ಅಟ್ಟಹಾಸ: ಲಾಕ್‌ಡೌನ್ ಹೇರಿಕೆ ಬಗ್ಗೆ ಸಿಎಂ ಮಾತು!... ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರು ಹಾಗೂ ಈ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆಡ. ಹೀಗಿರುವಾಗ ರಾಜ್ಯದಲ್ಲಿ ಮುಂದಿನ 15-20 ದಿನಗಳಲ್ಲಿ ಆರೋಗ್ಯ ಮೂಲಸೌಕರ್ಯಗಳ ಕೊರತೆ ಎದುರಾಗುವುದನ್ನು ಗಮನದಲ್ಲಿಟ್ಟುಕೊಂಡ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಇನ್ನೆರಡು ದಿನದಲ್ಲಿ ಮಹಾರಾಷ್ಟ್ರಾದ್ಯಂತ ಲಾಕ್‌ಡೌನ್ ಘೋಷಿಸುವ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದ್ದಾರೆ. ನೀವು ಪ್ರಧಾನಿಯಾಗಿದ್ದರೆ ಏನು ಮಾಡ್ತಿದ್ರಿ? ಹೀಗಿತ್ತು ರಾಹುಲ್ ಗಾಂಧಿ ಉತ್ತರ!... ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಾನು ಪ್ರಧಾನ ಮಂತ್ರಿಯಾಗಿದ್ದರೆ ಅಭಿವೃದ್ಧಿ ಕಡೆ ಗಮನ ನೀಡುವ ಬದಲು ಉದ್ಯೋಗಾವಕಾಶ ಹೆಚ್ಚಿಸುವತ್ತ ಗಮನ ಹರಿಸುತ್ತಿದ್ದೆ ಎಂದಿದ್ದಾರೆ. ರೊನಾಲ್ಡೋ ಬಿಸಾಡಿದ್ದ ಆರ್ಮ್‌ಬ್ಯಾಂಡ್‌ 55 ಲಕ್ಷ ರುಪಾಯಿಗೆ ಹರಾಜು!... ಪೋರ್ಚುಗಲ್‌ ನಾಯಕ ಕ್ರಿಸ್ಟಿಯಾನೋ ರೊನಾಲ್ಡೋ, ಸಿಟ್ಟಿನಲ್ಲಿ ಎಸೆದ ಆರ್ಮ್‌ಬ್ಯಾಂಡ್‌ ಬರೋಬ್ಬರಿ 55 ಲಕ್ಷ ರುಪಾಯಿ ಹರಾಜಾಗಿದೆ. ಮಿನಿ ಡ್ರೆಸ್‌ನಲ್ಲಿ ಡಿಂಪಲ್ ಕ್ವೀನ್..! ಒಂದ್ ಬ್ರೇಕ್ ಡ್ಯಾನ್ಸ್ ಬಿಡಿ ಎಂದ ಫ್ಯಾನ್‌... ನಟಿ ರಚಿತಾ ರಾಮ್ ಶಾರ್ಟ್ ಮಿನಿ ಡ್ರೆಸ್‌ನಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಹ್ಯಾಟ್ ಧರಿಸಿ, ಕೂದಲು ಫ್ರೀ ಬಿಟ್ಟು, ಗಾಗಲ್ಸ್ ಧರಿಸಿ ಸ್ಟೈಲಾಗಿ ಪೋಸ್ ಕೊಟ್ಟಿದ್ದಾರೆ. ಸೀರೆ, ಕುರ್ತಾ, ಸಲ್ವಾರ್‌ನಲ್ಲೇ ಕಾಣಿಸ್ಕೊಳ್ಳೋ ನಟಿ ಈಗ ಮಾಡರ್ನ್ ಲುಕ್‌ನಲ್ಲಿ ಕಾಣಿಸಿದ್ದಾರೆ. ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ ಜಿಯೋ!... ಭಾರತೀಯ ಟೆಲಿಕಾಂ ತೀವ್ರ ಪೈಪೋಟಿ ಎದುರಿಸುತ್ತಿದೆ. ಹೀಗಾಗಿ ಜಿಯೋ ತನ್ನ ಚಂದಾದಾರಿಕೆ ಹೆಚ್ಚಿಸಲು ಹೊಸ ಯೋಜನೆ ಜಾರಿಗೆ ತರುತ್ತಿದೆ. ಜಿಯೋ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ. ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಭರ್ತಿ: ನಿರ್ಧಾರ ಹಿಂಪಡೆಯಲು ಸಿಎಂಗೆ ಪುನೀತ್ ರಾಜ್‌ಕುಮಾರ್ ಮನವಿ!... ಚಿತ್ರಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಎನ್ನುವಷ್ಟರಲ್ಲಿ ಶೇ.50 ಸೀಟಿಂಗ್ ಮಾಡಬೇಕೆಂದು ತಂದಿರುವ ಹೊಸ ಮಾರ್ಗ ಸೂಚಿ ಬಗ್ಗೆ ನಟ ಪುನೀತ್ ರಾಜ್‌ಕುಮಾರ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ನೈಟ್ ಕರ್ಫ್ಯೂ, ವೀಕೆಂಡ್ ಲಾಕ್‍ಡೌನ್ ಆಗುತ್ತಾ? ಸಚಿವ ಸುಧಾಕರ್​ ಕೊಟ್ಟ ಸ್ಪಷ್ಟನೆ ಇದು!... ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಜೋರಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು, ವೀಕೆಂಡ್ ಲಾಕ್ ಡೌನ್ ಬಗ್ಗೆ ಸಚಿವರು ಸ್ಪಷ್ಟನೆ ಕೊಟ್ಟಿದ್ದಾರೆ. ಬಾಂದ್ರಾದಲ್ಲಿ ಚಮಕ್ ಚೆಲುವೆ: ರಶ್ಮಿಕಾ ಜೊತೆಗಿರೋದ್ಯಾರು ?... ನಟಿ ರಶ್ಮಿಕಾ ಮಂದಣ್ಣ ಮುಂಬೈನಲ್ಲಿದ್ದಾರೆ. ನಟಿ ಇತ್ತೀಚೆಗಷ್ಟೇ ಬಾಂದ್ರಾದಲ್ಲಿ ಪಾಪ್ಪರಾಜಿಗಳಿಗೆ ಮುದ್ದು ಮುದ್ದಾಗಿ ಪೋಸ್ ಕೊಟ್ಟಿದ್ದಾರೆ. ಆದರೆ ಜೊತೆಗಿರೋದು ಯಾರು ಅನ್ನೋದೆ ಪ್ರಶ್ನೆ