ಒಂದು ಪೈಸೆ ತೆರಿಗೆ ಹಾಕದ ಬಜೆಟ್, ಮಹಿಳಾ ದಿನಾಚರಣೆಗೆ ಮೋದಿ ಗಿಫ್ಟ್; ಮಾ.8ರ ಟಾಪ್ 10 ಸುದ್ದಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕರ್ನಾಟಕ ಬಜೆಟ್ ಮಂಡಿಸಿದ್ದಾರೆ. ಒಂದು ಪೈಸೆ ತೆರಿಗೆ ಹಾಕದೆ ಸರ್ವವ್ಯಾಪಿ ಬಜೆಟ್ ಮಂಡಿಸಲಾಗಿದೆ ಎಂದು ಬಿಎಸ್‌ವೈ ಹೇಳಿದ್ದಾರೆ. ಇನ್ನು ಮಹಿಳಾ ದಿನದಂದು ಪ್ರಧಾನಿ ಮೋದಿ, ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿದ್ದಾರೆ. ದಾಖಲೆ ಮೊತ್ತಕ್ಕೆ ಕೆಜಿಎಫ್ ಚಾಪ್ಟರ್ 2 ಸೇಲ್, ಹಳೆ ಕಾರು ಗುಜ​ರಿಗೆ ಹಾಕುವವರಿಗೆ ಸರ್ಕಾರದ ಭರ್ಜರಿ ಆಫರ್ ಸೇರಿದಂತೆ ಮಾರ್ಚ್ 8ರ ಟಾಪ್ 10 ಸುದ್ದಿ ವಿವರ ಇಲ್ಲಿವೆ 2021: ಕೃಷಿ ಹಾಗೂ ಅನ್ನದಾತನಿಗೆ ಆತ್ಮ ನಿರ್ಭರದ ಬಲ, ವೈಜ್ಞಾನಿಕ ಮಾರಾಟಕ್ಕೆ ಒತ್ತು... ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೋಮವಾರ ಮಂಡಿಸಿರುವ 2021-22ನೇ ಸಾಲಿನ ಬಜೆಟ್ ನಲ್ಲಿ ಎಲ್ಲಾ ಕ್ಷೇತ್ರಕ್ಕೆ ಭರಪೂರ ಕೊಡುಗೆ ನೀಡಿದ್ದಾರೆ. ಬಜೆಟ್ ಕುರಿತ ಸಂಪೂರ್ಣ ವಿವರ ಇಲ್ಲಿದೆ. ರಾಜ್ಯ ಬಜೆಟ್ 2021: ವಿಶ್ವ ಮಹಿಳಾ ದಿನಾಚರಣೆಯಂದೇ ಮಹಿಳೆಯರಿಗೆ ಭರ್ಜರಿ ಗಿಫ್ಟ್... ಮಹಿಳಾ ದಿನಾಚರಣೆಯಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ 2021ನೇ ಸಾಲಿನ ಬಜೆಟ್‌ನಲ್ಲಿ ಮಹಿಳೆಗೆ ಭರಪೂರ ಕೊಡುಗೆ ನೀಡಿದ್ದಾರೆ. 'ಒಂದು ಪೈಸೆ ತೆರಿಗೆ ಹಾಕಿಲ್ಲ, ಇದೊಂದು ಸರ್ವವ್ಯಾಪಿ ಬಜೆಟ್'... ಬಜೆಟ್ ಮಂಡಿಸಿದ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿದ್ದಾರೆ. ಅತ್ಯಂತ ಸಂಕಷ್ಟದ ಸಂದರ್ಭದಲ್ಲಿ ಮಂಡನೆಯಾದ ಬಜೆಟ್ ಇದು. ನೈಸರ್ಕಿಗ ವಿಕೋಪ, ಕೊರೋನಾ ಕಾರಣಕ್ಕೆ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿದ್ದವು. ಲಾಕ್ ಡೌನ್ ಮತ್ತಿತರ ಕಾರಣಕ್ಕೆ ಆರ್ಥಿಕ ಚಟುವಟಿಕೆ ನಡೆಯದೆ ರಾಜಸ್ವ ಸಂಗ್ರಹಕ್ಕೆ ಪೆಟ್ಟು ಬಿದ್ದಿದೆ. ಆದರೆ ಧ್ರತಿಗೆಡದೆ ಸಂಬಳ ಇತ್ಯಾದಿ ಸಕಾಲದಲ್ಲಿ ಪಾವತಿಸಿ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ. ಭಾರತದ ಮಹಿಳಾ ಉದ್ಯಮಿಗಳಿಗೆ ನೆರವು ಘೋಷಿಸಿದ ಗೂಗಲ್... ಅಮೆರಿಕ ಮೂಲದ ಗೂಗಲ್ ಸಿಇಒ ಸುಂದರ್ ಪಿಚ್ಚೈ ಭಾರತದ ಮಹಿಳಾ ಉದ್ಯಮಿಗಳ ನೆರವಿಗೆ ಎರಡೂವರೆ ಕೋಟಿ ರೂಪಾಯಿ ನೆರವು ಘೋಷಿಸಿದ್ದಾರೆ. ಮಹಿಳಾ ದಿನ ಪ್ರಯುಕ್ತ ಮಹಿಳಾ ಉದ್ಯಮಿಗಳಿಂದ ಉತ್ಪನ್ನ ಖರೀದಿಸಿದ ಪ್ರಧಾನಿ ಮೋದಿ!... ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ ದಿನ. ಈ ವಿಶೇಷ ದಿನ, ಪ್ರಧಾನಿ ನರೇಂದ್ರ ಮೋದಿ ಭಾರತದ ಮಹಿಳಾ ಉದ್ಯಮಿಗಳು, ಮಹಿಳಾ ಸ್ವಸಹಾಯ ಗುಂಪುಗಳಿಗೆ ಪ್ರಚೋದನೆ ನೀಡುವ ಸಲುವಾಗಿ ಹಲವು ಉತ್ಪನ್ನಗಳನ್ನು ಖರೀದಿಸಿದ್ದಾರೆ. ಈ ಮೂಲಕ ಮೋದಿ, ಮಹಿಳೆಯರು ಹಾಗೂ ಆತ್ಮನಿರ್ಭರ್ ಭಾರತ್‌ಗೆ ಪ್ರಚೋದನೆ ನೀಡುವ ಪ್ರಯತ್ನ ಮಾಡಿದ್ದಾರೆ. 2021 ಸರದಿ ಆಧಾರದಲ್ಲಿ ಪಂದ್ಯಗಳು; ಯಾವ ತಂಡಕ್ಕೂ ತವರಿನಲ್ಲಿ ಪಂದ್ಯಗಳಿಲ್ಲ..!... 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಸರದಿ ಮಾದರಿಯಲ್ಲಿ ನಡೆಯಲಿದ್ದು, ಯಾವ ತಂಡಕ್ಕೆ ತನ್ನ ತವರಿನ ಲಾಭ ಸಿಗುತ್ತಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ ಎಷ್ಟು ಕೋಟಿಗೆ ಸೇಲ್ ಆಯ್ತು ಕೆಜಿಎಫ್ ಚಾಪ್ಟರ್ 2; ಬನ್ನಿ ತಿಳ್ಕೋಳಣ!... ಡಿಜಿಟಲ್ ದುನಿಯಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಹೊಸ ಹವಾ ಕ್ರಿಯೇಟ್ ಮಾಡುತ್ತಿದ್ದಾರೆ. ಕೆಜಿಎಫ್‌ ಚಾಪ್ಟರ್ 2 ಬಿಡುಗಡೆಗೆ ಕಾಯುತ್ತಿರುವ ಪ್ರಶಾಂತ್ ಆ್ಯಂಡ್ ಟೀಂ ರಜನೀಕಾಂತ್ ಅಭಿನಯದ 2.0 ಚಿತ್ರದ ಡಿಜಿಟಲ್ ದಾಖಲೆ ಮುರಿದಿರುವುದಕ್ಕೆ ಅಚ್ಚರಿ ಪಟ್ಟಿದ್ದಾರೆ. ರಿಲೀಸ್‌ಗೂ ಮುನ್ನ 128 ಕೋಟಿ ಕಲೆಕ್ಷನ್ ಮಾಡಿರುವುದು ನಿಜವೇ? ಸುಶಾಂತ್‌ ಸಿಂಗ್‌ರ ರಬ್ತಾ ಚಿತ್ರಕ್ಕೆ ಐಟಂ ಸಾಂಗ್‌ಗೆ ದೀಪಿಕಾ ಹೆಜ್ಜೆ ಹಾಕಿದ್ದು ಇದಕ್ಕಂತೆ!... ದೀಪಿಕಾ ಸುಶಾಂತ್‌ ಸಿಂಗ್‌ ರಜಪೂತ್‌ ನಟಿಸಿದ್ದ ರಬ್ತಾ ಸಿನಿಮಾದ ಐಟಂ ನಂಬರ್‌ಗೆ ಡ್ಯಾನ್ಸ್‌ ಮಾಡಲು ಒಪ್ಪಿಕೊಂಡರು. ಆದರೆ ದುಡ್ಡಿಗೊಸ್ಕರ ಅಲ್ಲ. ದೀಪಿಕಾಗೆ ಈ ಆಫರ್‌ ನಿರಾಕರಿಸಲು ಸಾಧ್ಯವಾಗಲಿಲ್ಲ. ಅದರ ಹಿಂದಿನ ಕಾರಣ ಇಲ್ಲಿದೆ. ಹಳೆ ಕಾರು ಗುಜ​ರಿಗೆ ಹಾಕುವವರಿಗೆ ಸರ್ಕಾರದ ಭರ್ಜರಿ ಆಫರ್!... ಹಳೆಯ ಕಾರನ್ನು ಗುಜ​ರಿಗೆ ಹಾಕಿ ಹೊಸ ಕಾರು ಖರೀ​ದಿ​ಸುವ ಗ್ರಾಹ​ಕ​ರಿಗೆ ನೂತನ ವಾಹನ ಖರೀದಿ ನೀತಿಯಡಿ, ಶೇ.5ರಷ್ಟುರಿಯಾಯ್ತಿ ಸಿಗ​ಲಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ತಿಳಿ​ಸಿ​ದ್ದಾರೆ. ಪುದುಚೇರಿ ಚುನಾವಣಾ ಪೂರ್ವ ಸಮೀಕ್ಷೆ; ಬಿಜೆಪಿ- ಅಬ್ಬರಕ್ಕೆ ಕಾಂಗ್ರೆಸ್ ಧೂಳೀಪಟ!... ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಇದೀಗ ಸಮೀಕ್ಷೆಗಳು ಹೊರಬರುತ್ತಿದೆ. ಪುದುಚೇರಿ ಕೇಂದ್ರಾಡಳಿತ ಪ್ರದೇಶದ ಚುನಾವಣೆ ಪೂರ್ವ ಸಮೀಕ್ಷೆ ಹೊರಬಿದ್ದಿದೆ. ಬಿಜೆಪಿ ಹಾಗೂ ಎಐಎಡಿಎಂಕೆ ಅಬ್ಬರಕ್ಕೆ, ಕಾಂಗ್ರೆಸ್ ಹಾಗೂ ಡಿಎಂಕೆ ಧೂಳೀಪಟವಾಗಿದೆ.