ಭೂ ವೀಕ್ಷಣಾ -C49 ಉಪಗ್ರಹ ಉಡಾವಣೆ ಯಶಸ್ವಿ; ಇಸ್ರೋ ಸಾಧನೆಗೆ ಮತ್ತೊಂದು ಗರಿ! ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಇಸ್ರೋ ಇದೀಗ ಮೊದಲ ಉಪಗ್ರಹ ಉಡಾವಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಭೂ ವೀಕ್ಷಣಾ -C49 ಉಪಗ್ರಹ ಉಡಾವಣೆ ಯಶಸ್ವಿಯಾಗಿದೆ. ಶ್ರೀಹರಿಕೋಟ(ನ.07):ಕೊರೋನಾ ಕಾರಣದಿಂದ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ() ಕಾರ್ಯಚಟುವಟಿಕೆಗಳು ಕೆಲ ಕಾಲ ಸ್ಥಗಿತಗೊಂಡಿತ್ತು. ಆದರೆ ಅನ್‌ಲಾಕ್ ಪ್ರಕ್ರಿಯೆ ಆರಂಭಗೊಂಡ ಬಳಿಕ ಮತ್ತೆ ಮಿಂಚಿನ ವೇಗದಲ್ಲಿ ಕಾರ್ಯರಂಭ ಮಾಡಿದೆ. ಇದೀಗ ಕೊರೋನಾ ಹಾಗೂ ಲಾಕ್‌ಡೌನ್ ಸಂಕಷ್ಟದ ಬಳಿಕ ಇದೇ ಮೊದಲ ಬಾರಿಗೆ ಇಸ್ರೋ -C49 ಉಪಗ್ರಹ ಉಡಾವಣೆ ಯಶಸ್ವಿಯಾಗಿ ಮಾಡಿದೆ. ಚಂದ್ರನ ಮೇಲೆ ಇಟ್ಟಿಗೆ ತಯಾರಿ: ಬೆಂಗಳೂರು ವಿಜ್ಞಾನಿಗಳ ಸಂಶೋಧನೆ! ಭೂ ವೀಕ್ಷಣೆ ಉಪಗ್ರಹ EOS01 ಸೇರಿದಂತೆ 10 ಉಪಗ್ರಹಗಳನ್ನೊಳಗೊಂಡ -C49 ಉಪಗ್ರಹ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಕಾಶ ಉಡಾವಣ ಕೇಂದ್ರದಿಂದ ಯಶಸ್ವಿಯಾಗಿ ಉಡಾಯಿಸಲಾಯಿತು. ಚಂದ್ರಯಾನ 2 : ಇಸ್ರೋ ಕಳಿಸಿದ್ದ ರೋವರ್ ಸುರಕ್ಷಿತ ರೀತಿಯಲ್ಲಿ ಪತ್ತೆ..! -C49 ಉಪಗ್ರಹ ಉಡಾವಣೆಗೆ 26 ಗಂಟೆಗಳ ಕೌಂಟ್‌ಡೌನ್ ನೀಡಲಾಗಿತ್ತು. ಈ ಕೌಂಟ್‌ಡೌನ್ ಬಳಿಕ ಮಧ್ಯಾಹ್ನ 3.12ಕ್ಕೆ -C49 ಉಪಗ್ರಹ ಹೊತ್ತ ರಾಕೆಟ್ ನಭೋಮಂಡಲಕ್ಕೆ ಹಾರಿತು. ಹವಾಮಾನ ವೈಪರಿತ್ಯದಿಂದ ಉಡಾವಣೆ 10 ನಿಮಿಷಗಳ ಕಾಲ ವಿಳಂವಾಗಿತ್ತು. 3.12ಕ್ಕೆ ಉಡಾವಣೆಗೊಂಡ -C49 ಉಪಗ್ರಹ 3.34ಕ್ಕೆ ಕಸ್ಟಮರ್ ಸ್ಯಾಟಲೈಟ್ ಬೇರ್ಪಟ್ಟು, ನಿರ್ದೇಶಿತ ಕಕ್ಷೆಗಳಲ್ಲಿ ಸಂಚರಿಸಿತು. ಇನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್()ರಾಕೆಟ್‌ನಿಂದ 01 ಉಪಗ್ರಹ ಬೇರ್ಪಟ್ಟು ಕಕ್ಷೆಯತ್ತ ಸಂಚರಿಸಿದೆ. ಇಸ್ರೋ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.