34 ಆ್ಯಪ್ ಡಿಲೀಟ್ ಮಾಡಿದ ಪ್ಲೇ ಸ್ಟೋರ್! ನವದೆಹಲಿ(ಅ.04):ಭದ್ರತೆ ಹಾಗೂ ಇತರ ಕಾರಣಗಳಿಂದ ಜುಲೈ ಮತ್ತು ಸೆಪ್ಟೆಂಬರ್ ನಡುವಿನ 2 ತಿಂಗಳ ಅವಧಿಯಲ್ಲಿ ಗೂಗಲ್ 34 ಆಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ಡಿಲೀಟ್ ಮಾಡಿದೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಭದ್ರತೆ ಹಾಗೂ ಸುರಕ್ಷತೆಗೆ ಧಕ್ಕೆ ತರುವ ಕಾರಣದಿಂದ ಗೂಗಲ್ 34 ಆ್ಯಪ್ ಡಿಲೀಟ್ ಮಾಡಿದೆ. ವಂಚನೆಯಿಂದ ಜಾಗರೂಕರಾಗಿರಿ: ಅಜಿತ್ ದೋವಲ್ ಎಚ್ಚರಿಕೆ! ಕ್ಯಾಲಿಫೋರ್ನಿಯಾದ ಸೈಬರ್ ಸೆಕ್ಯೂರಿಟಿ ವಿಂಗ್( ) 34 ಆಪ್ಲಿಕೇಶನ್ ಡಿಲೀಟ್ ಮಾಡಲು ಸೂಚಿಸಿದೆ. ಇದರಂತೆ ಗೂಗಲ್ ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ಡಿಲೀಟ್ ಮಾಡಿದೆ. ನಿಮ್ಮ ಫೋನ್‌ಗಳಲ್ಲಿ ಈ ಆ್ಯಪ್‌ಗಳಿದ್ದರೆ ಡಿಲೀಟ್ ಮಾಡುವುದು ಉತ್ತಮ. ವೋಡಾಫೋನ್-ಐಡಿಯಾದಿಂದ ಬಂಪರ್ ಆಫರ್: 351ರೂಗೆ 100 ಡೇಟಾ! ಕೆಲ ಆ್ಯಪ್‌ಗಳು ಗ್ರಾಹಕರಿಂದ ಅನಗತ್ಯ ಚಂದಾದಾರಿಕೆ ಮೂಲಕ ಹಣ ಸಂಗ್ರಹಿಸುತ್ತಿದೆ. ಗ್ರಾಹಕರಿಗೆ ಅರಿವಿಲ್ಲದಂತೆ ಜಾಹೀರಾತು ಮೂಲಕ ಗ್ರಾಹಕರಿಗೆ ಕೆಲ ಸೇವೆಯನ್ನು ನೀಡಿ ಬಳಿಕ ಒಟಿಪಿ ಹಂಚಿಕೊಂಡು ಹಣಪಾವತಿಗೆ ಬೇಡಿಕೆ ಇಡುತ್ತಿದೆ.