ಕೊರೋನಾದಿಂದ ಶಿಕ್ಷಣದಲ್ಲಿ ಬದಲಾವಣೆ; ಸ್ಮಾರ್ಟ್‌ಫೋನ್ ಬೇಡಿಕೆ ದುಪ್ಪಟ್ಟು! ಬೆಂಗಳೂರು(ಸೆ.24):ಸಾಂಕ್ರಾಮಿಕವು ಇಡೀ ಜಗತ್ತಿನಲ್ಲಿ ವಾಸಿಸುತ್ತಿರುವ ನಮ್ಮ ಜೀವನದ ಮೇಲೆ ಹಲವು ಮಾರ್ಗಗಳಲ್ಲಿ ಪರಿಣಾಮವನ್ನು ಬೀರಿದೆ. ಸಾಮಾಜಿಕ ಅಂತರದಿಂದ ವರ್ಚುವಲ್ ಕ್ಲಾಸ್ ರೂಂಗಳವರೆಗೆ, ನಮಗೆ ತಿಳಿದಂತೆ ಜೀವನವು ಸಾಕಷ್ಟು ಬದಲಾಗಿದೆ. ಜೀವನಶೈಲಿಯಲ್ಲಿನ ಈ ಬದಲಾವಣೆಯು ಹಲವಾರು ಬಗೆಯ ಉತ್ಪನ್ನಗಳ ಪ್ರಾಥಮಿಕ ಬಳಕೆಯಲ್ಲಿ ಹೊಸ ಪ್ರವೃತ್ತಿಗೆ ನಾಂದಿ ಹಾಡಿದೆ. ಅಂತಹ ಒಂದು ತೀವ್ರ ರೀತಿಯ ಬದಲಾವಣೆಯು ಶಿಕ್ಷಣ ಕ್ಷೇತ್ರದಲ್ಲಿ ಆಗಿದೆ. ಇದರ ಪರಿಣಾಮ ಈ ಹಿಂದಿಗಿಂತಲಲೂ ಅತ್ಯಧಿಕ ಎನಿಸುವ ರೀತಿಯಲ್ಲಿ ಜನರು ಸ್ಮಾರ್ಟ್ ಫೋನ್ ಗಳ ಮೇಲೆ ಅವಲಂಬಿತರಾಗಿದ್ದಾರೆ. ಈ ಮೂಲಕ ಅವರು ತಮ್ಮ ಮಕ್ಕಳ ಶೈಕ್ಷಣಿಕ ಮಹಾತ್ವಾಕಾಂಕ್ಷೆಗಳನ್ನು ಅಪ್ಡೇಟ್ ಮಾಡಿಕೊಳ್ಳುತ್ತಿದ್ದಾರೆ. ಈ ಸ್ಮಾರ್ಟ್ ಫೋನ್ ಗಳ ನೆರವಿನಿಂದ ವೃತ್ತಿಪರ ಕೌಶಲ್ಯಗಳನ್ನು ಕಲಿತುಕೊಳ್ಳಲು ಅನೇಕ ಮಂದಿ ಕೋರ್ಸ್ ಗಳಿಗೆ ಸೇರಿಕೊಳ್ಳುತ್ತಿದ್ದರೆ, ಉಳಿದವರು ದೈನಂದಿನ ಶಾಲಾ ತರಗತಿಗಳಿಗೆ ಲಾಗಿನ್ ಮಾಡಲು ಬಳಸುತ್ತಿದ್ದಾರೆ. ಫ್ಲಿಪ್‌ಕಾರ್ಟ್ ಸಹಯೋಗದಲ್ಲಿ ಗ್ಯಾಲಕ್ಸಿ ಸೀರಿಸ್ ಬಿಡುಗಡೆ ಮಾಡಲಿದೆ ಸ್ಯಾಮ್ಸಂಗ್!. ಈ ಸಂದರ್ಭದಲ್ಲಿ, ಫ್ಲಿಪ್ ಕಾರ್ಟ್ ದೇಶದಲ್ಲಿ ಹೆಚ್ಚುತ್ತಿರುವ ಸ್ಮಾರ್ಟ್ ಫೋನ್ ಬಳಕೆ ಮತ್ತು ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಸ್ಮಾರ್ಟ್ ಫೋನ್ ಗಳ ವಿಸ್ತಾರವಾದ ಶ್ರೇಣಿಗಳ ಬೆಲೆ ವ್ಯಾಪ್ತಿಯಲ್ಲಿ ಆಫರ್ ಗಳನ್ನು ನೀಡುತ್ತಿದೆ: ಮತ್ತು ಸುರಕ್ಷಿತ ಹಾಗೂ ಸ್ಯಾನಿಟೈಸ್ಡ್ ಪೂರೈಕೆ ಜಾಲದ ಮೂಲಕ ಈ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ವರದಿಯಲ್ಲಿ, ಭಾರತ್ ಮನೆಯಿಂದ ಹೇಗೆ ಕಲಿಯುತ್ತಿದೆ ಎಂಬುದನ್ನು ಫ್ಲಿಪ್ ಕಾರ್ಟ್ ವಿವರಿಸುತ್ತದೆ ಹಾಗೂ ಸ್ಮಾರ್ಟ್ ಫೋನ್ ವಿಭಾಗದಲ್ಲಿ ಕಂಡು ಬಂದ ಕೆಲವು ಆಸಕ್ತಿದಾಯಕ ಅಂಶಗಳನ್ನು ತಿಳಿಸುತ್ತದೆ. ಬಜೆಟ್ ಸ್ಮಾರ್ಟ್ ಫೋನ್ ಗಳಿಗೆ ಬೇಡಿಕೆಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜನರು ಮನೆಯಲ್ಲೇ ಹೆಚ್ಚು ಕಾಲ ಇರುವುದರಿಂದ ಕುಟುಂಬದ ಸದಸ್ಯರಿಗೆ ಮನೋರಂಜನೆ, ವೃತ್ತಿ ಮತ್ತು ಶಿಕ್ಷಣದ ಅಗತ್ಯಗಳು ಇರುತ್ತವೆ. ಇದಕ್ಕಾಗಿ ಒಂದೇ ಮನೆಯಲ್ಲಿ ಹೆಚ್ಚು ಸ್ಕ್ರೀನ್ ಗಳು ಅಂದರೆ ಮೊಬೈಲ್ ಫೋನ್ ಗಳ ಅಗತ್ಯವಿರುತ್ತದೆ. ಇದರ ಪರಿಣಾಮ ಸ್ಮಾರ್ಟ್ ಫೋನ್ ಗಳಿಗೆ ಅಧಿಕ ಬೇಡಿಕೆ ಕಂಡು ಬರುತ್ತಿದೆ. ಅನೇಕ ಜನರು ಈ ಸಂದರ್ಭದಲ್ಲಿ ಹಣಕಾಸು ವಿಚಾರದಲ್ಲಿ ಹೆಚ್ಚು ಜಾಗ್ರತರಾಗಿದ್ದಾರೆ. ವಿಶೇಷವಾಗಿ ಸ್ಮಾರ್ಟ್ ಫೋನ್ ಗಳನ್ನು ಖರೀದಿ ವಿಚಾರದಲ್ಲಿ ಹೆಚ್ಚು ಜಾಗರೂಕವಾದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಇದರ ಪರಿಣಾಮ ಕಳೆದ ಜೂನ್ ನಿಂದ 10,000 ರೂಪಾಯಿಯೊಳಗಿನ ವಿಭಾಗದ ಸ್ಮಾರ್ಟ್ ಫೋನ್ ಗಳ ಹುಡುಕಾಟದಲ್ಲಿ ಶೇ.60 ರಷ್ಟು ಹೆಚ್ಚಳವನ್ನು ಫ್ಲಿಪ್ ಕಾರ್ಟ್ ಕಂಡಿದೆ. 10 ಸಾವಿರ ರೂಪಾಯಿಯೊಳಗಿನ ವಿಭಾಗದ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಲು 51 ದಶಲಕ್ಷಕ್ಕೂ ಅಧಿಕ ಫ್ಲಿಪ್ ಕಾರ್ಟ್ ಬಳಕೆದಾರರು ಬಯಸಿದ್ದರು. 5000 ಮತ್ತು 6.22 ಇಂಚಿನ ಸ್ಕ್ರೀನ್, ಬ್ಯಾಟರಿ ಸಾಮರ್ಥ್ಯ ಮತ್ತು ಡಿಸ್ ಪ್ಲೇ ಗಾತ್ರವನ್ನು ಈ ವಿಭಾಗದ ಪ್ರಮುಖ ಅಂಶ ಮತ್ತು ಮಾನದಂಡವೆಂದು ಪರಿಗಣಿಸಲಾಗಿದೆ. ಆದರೆ, ಕೆಲವು ತಿಂಗಳಲ್ಲಿ ಮಾನದಂಡಗಳು ಹೆಚ್ಚಾಗಿವೆ. ಬ್ರ್ಯಾಂಡ್ ಗಳು 6000 ಬ್ಯಾಟರಿ ಮತ್ತು 6.82 ಇಂಚುಗಳ ಡಿಸ್ ಪ್ಲೇ ಹೊಂದಿರುವ ಸ್ಮಾರ್ಟ್ ಫೋನ್ ಗಳನ್ನು ಈ ದರದಲ್ಲಿ ಬಿಡುಗಡೆ ಮಾಡಿವೆ. ಸ್ಮಾರ್ಟ್ ಫೋನ್ ಬಾಳಿಕೆ ಪ್ರಮುಖ ಅಂಶವಾಗಿದೆಕಳೆದ ಕೆಲವು ತಿಂಗಳಲ್ಲಿ, ಸ್ಮಾರ್ಟ್ ಫೋನ್ ಗಳ ಅಗತ್ಯತೆಯು ಹಲವು ಜನರನ್ನು ವಿಕಸನಗೊಳಿಸಿದೆ ಮತ್ತು ಈಗಿನ ಅಗತ್ಯವೂ ಎನಿಸಿದೆ. ಜನರು ಮನೆಯಲ್ಲಿದ್ದುಕೊಂಡು ಸ್ಮಾರ್ಟ್ ಫೋನ್ ಗಳೊಂದಿಗೆ ಹೆಚ್ಚು ಸಮಯ ಇರುತ್ತಾರೆ ಮತ್ತು ಇದಕ್ಕಾಗಿ ಅವರು ಬ್ಯಾಟರಿಯ ಬಾಳಿಕೆ ವಿಚಾರದಲ್ಲಿ ರಾಜೀ ಮಾಡಿಕೊಳ್ಳುವುದಿಲ್ಲ. ದೀರ್ಘ ಬಾಳಿಕೆಯ ಬ್ಯಾಟರಿ ಇರುವ ಸ್ಮಾರ್ಟ್ ಫೋನ್ ನನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕಳೆದ ಮಾರ್ಚ್ ನಿಂದ ಬ್ಯಾಟರಿ ಸಂಬಂಧಿತ ಹುಡುಕಾಟ ವಿಚಾರಣೆಗಳ ಸಂಖ್ಯೆಯು ದ್ವಿಗುಣವಾಗಿರುವುದನ್ನು ಫ್ಲಿಪ್ ಕಾರ್ಟ್ ಕಂಡಿದೆ. ಜನಪ್ರಿಯ ಆಯ್ಕೆಗಳುಈ ಸಂದರ್ಭದಲ್ಲಿ ಬಜೆಟ್ ಫೋನ್ ಗಳಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಲವಾರು ಬ್ರ್ಯಾಂಡ್ ಗಳು ಹೊಸ ಹೊಸ ಫೋನ್ ಗಳನ್ನು ಬಿಡುಗಡೆ ಮಾಡಲು ಸಾಧ್ಯವಾಗಿದೆ. ಜನಪ್ರಿಯ ಆಯ್ಕೆಗಳಲ್ಲಿ ತನ್ನ ಸಿ ಸರಣಿ (ಸಿ2 ಮತ್ತು ಸಿ3)ಯೊಂದಿಗೆ ರಿಯಲ್ ಮಿ, ತನ್ನ ರೆಡ್ ಮಿ 8 ಮತ್ತು 8ಎ ನೊಂದಿಗೆ ಶಯೊಮಿ ಮತ್ತು ತನ್ನ ಹಾಟ್ ಸರಣಿಗಳೊಂದಿಗೆ ಇನ್ ಫಿನಿಕ್ಸ್ ಸೇರಿವೆ. ಇದಲ್ಲದೇ ಫ್ಲಿಪ್ ಕಾರ್ಟ್ ವೇದಿಕೆಯಲ್ಲಿ ಜಿಯೋನಿ, ಐಟೆಲ್ ಮತ್ತು ಟೆಕ್ನೋ ಬ್ರ್ಯಾಂಡ್ ಗಳೂ ಸಹ ತಮ್ಮ ಗ್ರಾಹಕ ಮೂಲವನ್ನು ಗಟ್ಟಿಗೊಳಿಸುವತ್ತ ಗಮನಹರಿಸಿವೆ. ·ರಿಯಲ್ ಮಿ ದೊಡ್ಡ ಡಿಸ್ ಪ್ಲೇ ಬೇಡಿಕೆಗೆ ಉತ್ತಮವಾಗಿ ಪ್ರತಿಕ್ರಿಯೆ ನೀಡಿದೆ. ಇದರ ಪರಿಣಾಮ ಕಂಪನಿಯು ತನ್ನ ಜನಪ್ರಿಯ ಸಿ ಸರಣಿಯಲ್ಲಿ (ರಿಯಲ್ ಮಿ ಸಿ11, ಸಿ12 ಮತ್ತು ಸಿ15) ಮೂರು ದೊಡ್ಡ ಸ್ಕ್ರೀನ್ ಗಳ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದೆ. ಈ ಎಲ್ಲಾ ಮೂರು ಫೋನ್ ಗಳು 6000 ವರೆಗಿನ ಬ್ಯಾಟರಿ ಮತ್ತು 6.53 ಇಂಚಿನ ಡಿಸ್ ಪ್ಲೇಯನ್ನು ಹೊಂದಿವೆ. ·ಇನ್ ಫಿನಿಕ್ಸ್ ತನ್ನ ಜನಪ್ರಿಯ ಹಾಟ್ ಸರಣಿಯ ಫೋನ್ ಗಳಾದ ಇನ್ಫಿನಿಕ್ಸ್ ಹಾಟ್ 9 ಮತ್ತು ಹಾಟ್ 9 ಪ್ರೊಗಳನ್ನು ಗ್ರಾಹಕರಿಗೆ ತಲುಪಿಸುತ್ತಿದೆ. ಈ ಎರಡೂ ಫೋನ್ ಗಳು 5000mAh ಬ್ಯಾಟರಿ ಮತ್ತು 6.6 ಇಂಚು ಡಿಸ್ ಪ್ಲೇಯನ್ನು ಹೊಂದಿವೆ. ಇದಲ್ಲದೇ< ಬಜೆಟ್ ಆಫರಿಂಗ್ ಆಗಿ ಇನ್ಫಿನಿಕ್ಸ್ ಸ್ಮಾರ್ಟ್ 4 ಪ್ಲಸ್ ಅನ್ನೂ ಸಹ ಬಿಡುಗಡೆ ಮಾಡಿದೆ. ಇದನ್ನು ವಿಶೇಷವಾಗಿ ಮನೆಯಿಂದಲೇ ಅಧ್ಯಯನ ನಡೆಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದು 6000 ಬ್ಯಾಟರಿ ಮತ್ತು 6.8 ಇಂಚಿನ ಸ್ಕ್ರೀನ್ ಅನ್ನು ಹೊಂದಿದೆ. 6000 ಹೊಂದಿರುವ ಸ್ಮಾರ್ಟ್ ಫೋನ್ ವಿಭಾಗದಲ್ಲಿ ಇದು ಅತ್ಯಂತ ಹೆಚ್ಚು ಕೈಗೆಟುಕುವ ದರದಲ್ಲಿ ಸಿಗುವ ಫೋನ್ ಆಗಿದೆ. ·ಜಿಯೋನಿ ತನ್ನ ಜಿಯೋನಿ ಮ್ಯಾಕ್ಸ್ ಸ್ಮಾರ್ಟ್ ಫೋನ್ ನೊಂದಿಗೆ ಮತ್ತೊಮ್ಮೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಅದೇ ರೀತಿ ಐಟೆಲ್ ವಿಷನ್ 1 3ಜಿಬಿ, ಟೆಕ್ನೋ ಸ್ಪಾರ್ಕ್ ಪವರ್ 2 ಮತ್ತು ಟೆಕ್ನೋ ಸ್ಪಾರ್ಕ್ ಪವರ್ ಗೊ 2020 ಸೇರಿದಂತೆ ಇನ್ನಿತರೆ ಬ್ರ್ಯಾಂಡ್ ಗಳ ಮಾದರಿಗಳು ಹೆಚ್ಚಿನ ಬೇಡಿಕೆಗಳನ್ನು ಪಡೆದುಕೊಂಡಿವೆ. ಭಾರತ ನಿರ್ಮಾಣಕೈಗೆಟುಕುವ ಡೇಟಾ ಪ್ಲಾನ್ ಗಳು 3 ನೇ ಹಂತದ ನಗರಗಳು ಸೇರಿದಂತೆ ಇನ್ನಿತರೆ ನಗರ ಪ್ರದೇಶಗಳಲ್ಲಿ ನಿಜಕ್ಕೂ ಸ್ಮಾರ್ಟ್ ಫೋನ್ ಗಳ ಬೇಡಿಕೆ ಹೆಚ್ಚಾಗುವಂತೆ ಮಾಡಿವೆ. ಇದು ಬಜೆಟ್ ಸ್ಮಾರ್ಟ್ ಫೋನ್ ಗಳ ಅಗತ್ಯತೆಯನ್ನು ಹೆಚ್ಚಳಕ್ಕೆ ಕಾರಣವಾಗಿದೆ. ಈ ಕೈಗೆಟುಕುವ ದರದ ಸ್ಮಾರ್ಟ್ ಫೋನ್ ಗಳ ಬೇಡಿಕೆಯಲ್ಲಿ ಬಹುಪಾಲು ಉತ್ತರ ಪ್ರದೇಶದ್ದಾಗಿದೆ. ನಂತರದ ಸ್ಥಾನದಲ್ಲಿ ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿವೆ. ಒಟ್ಟು ಬೇಡಿಕೆಯ ಶೇ.70 ರಷ್ಟು ಪಾಲು 2 ಮತ್ತು ಅದರ ನಂತರದ ನಗರಗಳದ್ದಾಗಿದೆ. ಗೋರಖ್ ಪುರ, ರಾಯ್ಪುರ, ಸಿವಾನ್, ಡಿಯೋರಿಯಾ, ಹಿಸ್ಸಾರ್, ಮೆಡಿನಿಪುರ್ ಮತ್ತು ಅಝಂಘರ್ ನಂತಹ ನಗರಗಳಲ್ಲಿ ಈ ಸ್ಮಾರ್ಟ್ ಫೋನ್ ಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. 5. ಮೌಲ್ಯವರ್ಧಿತ ಸೇವೆಗಳಿಂದ ಜನಪ್ರಿಯತೆ ಗಳಿಕೆಇತ್ತೀಚೆಗೆ ಪ್ರಾರಂಭಿಸಲಾದ ಸ್ಮಾರ್ಟ್ ಫೋನ್ ಗಳು ನೀಡುವ ಕ್ರಿಯಾತ್ಮಕ ವೈಶಿಷ್ಟ್ಯತೆಗಳು ಈ ಸಮಯದಲ್ಲಿ ಅವುಗಳನ್ನು ಅನೇಕ ಮನೆಗಳಲ್ಲಿ ಪ್ರಾಥಮಿಕ ಪರದೆಯನ್ನಾಗಿ ಮಾಡಿದೆ. ಇದರ ಪರಿಣಾಮ, ಗ್ರಾಹಕರು ತಮ್ಮ ಪ್ರಸ್ತುತ ಸಾಧನಗಳನ್ನು ಅಪ್ ಗ್ರೇಡ್ ಮಾಡುವ ಅವಶ್ಯಕತೆ ಇದೆ. ಫ್ಲಿಪ್ ಕಾರ್ಟ್ ಖಾತರಿ ಅಸಿಸ್ಟೆಂಟ್ ಪ್ರೋಗ್ರಾಂನಂತಹ ಹಲವಾರು ಕೈಗೆಟುಕುವ ಉಪಕ್ರಮಗಳಲ್ಲಿ ಸಾಕ್ಷಿಯಾಗಿದೆ. ಇದು ಬಳಕೆದಾರರಿಗೆ ತಮ್ಮ ಮನೆಗಳ ಸೌಕರ್ಯದಿಂದ ಬ್ರ್ಯಾಂಡ್ ಖಾತರಿ ಸೇವೆಗಳನ್ನು ಕೇವಲ 99 ರೂಪಾಯಿಗೆ ಪಡೆಯಲು ಅನುವು ಮಾಡಿಕೊಡುತ್ತದೆ. ಉತ್ಪನ್ನ ವಿನಿಮಯಕ್ಕಾಗಿ ಅಳವಡಿಸಿಕೊಳ್ಳುವುದು (ಗ್ರಾಹಕರು ತಮ್ಮ ಹಳೆಯ ಕ್ರಿಯಾತ್ಮಕ ಮೊಬೈಲ್ ಫೋನ್ ಅನ್ನು ಯಾವುದೇ ಸ್ಥಿತಿಯಲ್ಲಿ ಲಾಭಗಳನ್ನು ಪಡೆಯಲು ಹಿಂದಿರುಗಿಸಲು ಅವಕಾಶ ಮಾಡಿಕೊಡುತ್ತದೆ) ಕಳೆದ ಕೆಲವು ತಿಂಗಳುಗಳಲ್ಲಿ ಗಮನಾರ್ಹವಾಗಿ ಹೆಚ್ಚಾಗಿದೆ.