ಸರ್ವರ್ ಡೌನ್; ಲಾಗ್ ಇನ್, ಮೇಲ್ ಸೆಂಡ್ ಆಗುತ್ತಿಲ್ಲ; ಸಮಸ್ಯೆಗೆ ಪ್ರತಿಕ್ರಿಯೆ! ಭಾರತ ಸೇರಿದಂತೆ ವಿಶ್ವದಲ್ಲಿ ಬಳಕೆ ದಾರರು ಇಂದು(ಆ.20) ಸಮಸ್ಯೆ ಎದುರಿಸುತ್ತಿದ್ದಾರೆ. ಹಲವರಿಗೆ ಲಾಗ್ ಇನ್ ಆಗಲು ಸಾಧ್ಯವಾಗುತ್ತಿಲ್ಲ, ಇ ಮೇಲ್ ಸೆಂಡ್ ಆಗುತ್ತಿಲ್ಲ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಕುರಿತು ಹೇಳುವುದೇನು? ಕ್ಯಾಲಿಫೋರ್ನಿಯಾ(ಆ.20): ಬಳಕೆದಾರರು ದಿಢೀರ್ ಸಮಸ್ಯೆ ಎದುರಿಸುತ್ತಿದ್ದಾರೆ. ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಇದೇ ಸಮಸ್ಯೆ ಎದುರಿಸುತ್ತಿದೆ. ಇಂದು(ಆ.20) ತಮ್ಮ ತಮ್ಮ ಕೆಲಸ ಆರಂಭಿಸಿದ ಹಲವರಿಗೆ ಲಾನ್ ಇನ್ ಆಗಲು ಸಾಧ್ಯವಾಗಿಲ್ಲ. ಹಲವು ಭಾರಿ ಯತ್ನಿಸಿ ಲಾಗ್ ಇನ್ ಆದವರಿಗೆ ಯಾವುದೇ ಇ ಮೇಲ್ ಸೆಂಡ್ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವರು ಸಾಮಾಜಿಕ ಜಾಲತಾಣ ಸೇರಿದಂತೆ ಕೆಲ ವಿಧಾನದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರು ಸಲ್ಲಿಸಿದ್ದಾರೆ. ಸಮಸ್ಯೆ ಕುರಿತು ತಕ್ಷಣವೇ ಪ್ರತಿಕ್ರಿಯೆ ನೀಡಿದೆ. ಅಲಾರಾಂ ರೀತಿ ನಿಮ್ಮ - ಮೆಸೇಜ್‌ ಸ್ನೂಜ್ ಮಾಡಿ..! ಡೌನ್ ಆಗಿರುವುದು ನಿಜ. ನಮ್ಮ ತಂಡ ಈ ಕುರಿತು ಕಾರ್ಯನಿರ್ವಹಿಸುತ್ತಿದೆ. ಕೆಲ ಸಮಸ್ಯೆಗಳನ್ನು ಸರಿಪಡಿಸಲಾಗಿದೆ. ಹಲವರಿಗೆ ಸದ್ಯ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಇನ್ನೂ ಹಲವರು ಸಮಸ್ಯೆ ಎದುರಿಸುತ್ತಿದ್ದಾರೆ ಅನ್ನೋದು ಗಮನಕ್ಕೆ ಬಂದಿದೆ. ಆದಷ್ಟು ಬೇಗ ಸಮಸ್ಯೆ ಪರಿಹಾರವಾಗಲಿದೆ ಎಂದು ಗೂಗಲ್ ಪ್ರತಿಕ್ರಿಯೆ ನೀಡಿದೆ. ನಮ್ಮ ತಂಡ ಈ ಕುರಿತು ತನಿಖೆ ನಡೆಸುತ್ತಿದೆ. ಸಂಬಂಧ ಶೀಘ್ರದಲ್ಲಿ ಮಾಹಿತಿಗಳನ್ನ ನೀಡಲಿದ್ದೇವೆ. ಸಮಸ್ಯೆಗೆ ಪರಿಹಾರವನ್ನು ನೀಡಲಿದ್ದೇವೆ. ನಿಮ್ಮ ಸಂಯಮಕ್ಕೆ ಧನ್ಯವಾದಗಳು ಎಂದು ಗೂಗಲ್ ಪ್ರತಿಕ್ರಿಯಿಸಿದೆ. ಸಮಸ್ಯೆ ಕಂಡು ಬಂದ ಬೆನ್ನಲ್ಲೇ ಭಾರತದಲ್ಲಿ ಹಲವರು ಟ್ವಿಟರ್ ಮೂಲಕ ಪ್ರಶ್ನಿಸಿದ್ದಾರೆ. ಭಾರತದಲ್ಲಿ ಡೌನ್ ಆಗಿದೆಯಾ ಎಂದಿದ್ದಾರೆ. ಈ ಕುರಿತು ಗೂಗಲ್ ಉತ್ತರ ನೀಡಿದ್ದಾರೆ. ಭಾರತ ಮಾತ್ರವಲ್ಲ ಕೆಲ ರಾಷ್ಟ್ರಗಳಲ್ಲಿ , ಗೂಗಲ್ ಡ್ರೈವ್ ನಲ್ಲೂ ಸಮಸ್ಯೆಯಾಗಿದೆ ಎಂದು ಉತ್ತರಿಸಿದೆ. ಆಸ್ಟ್ರೇಲಿಯಾ, ಜಪಾನ್ ಸೇರಿದಂತೆ ಹಲವು ರಾಷ್ಟ್ರರದ ಬಳಕೆದಾರರು ಈ ಕುರಿತು ದೂರು ನೀಡಿದ್ದಾರೆ. ಭಾರತದಲ್ಲಿ ಬೆಳಗ್ಗೆ 11 ಗಂಟಗೆ ಸಮಸ್ಯೆ ಕಾಣಿಸಿಕೊಂಡಿದೆ. ಶೇಕಡಾ 62 ರಷ್ಟ ಮಂದಿ ಬಳಕೆದಾರರು, ಇ ಮೇಲ್ ಕಳುಹಿಸಲು ಸಾಧ್ಯವಾಗಿಲ್ಲ. ಇನ್ನು ಶೇಕಡಾ 27 ರಷ್ಟು ಮಂದಿಗೆ ಖಾತೆಗೆ ಲಾಗ್ ಇನ್ ಆಗಲು ಸಾಧ್ಯವಾಗಿಲ್ಲ. ಶೇಕಡಾ 10 ರಷ್ಟು ತಮಗೆ ಮೇಲೆ ಬರುತ್ತಿಲ್ಲ. ಯಾವುದೇ ಇ ಮೇಲ್ ಸ್ವೀಕರಣೆಯಾಗುತ್ತಿಲ್ಲ ಎಂದು ದೂರು ಸಲ್ಲಿಸಿದ್ದಾರೆ.