ಕರ್ನಾಟಕದಲ್ಲಿ 12 ಉತ್ಪಾದನೆ; ಮೋದಿ ಮೇಕ್ ಇನ್ ಇಂಡಿಯಾಗೆ ಮತ್ತಷ್ಟು ಬಲ! ಪ್ರಧಾನಿ ಮೋದಿ ಆತ್ಮನಿರ್ಭರ್ ಭಾರತ ಪರಿಕಲ್ಪನೆಯಡಿ ಹಲವು ವಿದೇಶಿ ಕಂಪನಿಗಳು ಇದೀಗ ಭಾರತದಲ್ಲೇ ಉತ್ಪಾದನೆ ಆರಂಭಿಸಿದೆ. ಇದರಲ್ಲಿ ಪ್ರಮುಖವಾಗಿ ಸ್ಮಾರ್ಟ್‌ಫೋನ್ ದಿಗ್ಗಜ ಆ್ಯಪಲ್ ಭಾರತದಲ್ಲೇ ಉತ್ಪಾದನೆ ಮಾಡುತ್ತಿದೆ. ಇದೀಗ ಭಾರತದಲ್ಲಿ 7ನೇ ಉತ್ಪಾದನೆಗೆ ಮುಂದಾಗಿದೆ. 12 ಉತ್ಪಾದನೆ ಕರ್ನಾಟಕದಲ್ಲಿ ಆಗಲಿದೆ. ಇಷ್ಟೇ ಅಲ್ಲ 10,000 ಉದ್ಯೋಗ ಕೂಡ ಸೃಷ್ಟಿಯಾಗುತ್ತಿದೆ. ನವದೆಹಲಿ(ಆ.20):ಹಲವು ವಿದೇಶಿ ಕಂಪನಿಗಳು ಭಾರತದತ್ತ ಮುಖ ಮಾಡಿದ್ದರೆ, ವಿದೇಶದಿಂದ ಬಿಡಿ ಭಾಗ ಆಮದು ಮಾಡಿ ಇಲ್ಲಿ ಜೋಡಣೆ ಮಾಡಿ ಮಾರಾಟ ಮಾಡುತ್ತಿದ್ದ ಹಲವು ಕಂಪನಿಗಳು ಇದೀಗ ಭಾರತದಲ್ಲೇ ಸಂಪೂರ್ಣ ಉತ್ಪಾದನೆ ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿಯ ಆತ್ಮನಿರ್ಭರ್ ಭಾರತ ಪರಿಕಲ್ಪನೆಯಡಿ ವಿಶ್ವದ ಕಂಪನಿಗಳು ಭಾರತದಲ್ಲಿ ಘಟಕ ಆರಂಭಿಸುತ್ತಿದೆ. ಈಗಾಗಲೇ ಆ್ಯಪಲ್ ತನ್ನ ಉತ್ಪಾದನೆಯನ್ನು ಭಾರತದಲ್ಲಿ ಮಾಡುತ್ತಿದೆ. ಇದೀಗ 12 ಫೋನ್ ಉತ್ಪಾದನೆಯನ್ನು ಕರ್ನಾಟಕದಲ್ಲಿ ಘಟಕದಲ್ಲಿ ಮಾಡಲಿದೆ. ಶೀಘ್ರದಲ್ಲಿ 12 ಮಾರುಕಟ್ಟೆಗೆ; ಐಫೋನ್11ಗಿಂತ ಕಡಿಮೆ ಬೆಲೆ!. 12 ಭಾರತದಲ್ಲೇ ಉತ್ಪಾದನೆಯಾಗುತ್ತಿರುವ ಆ್ಯಪಲ್ ಕಂಪನಿಯ 7ನೇ ಸ್ಮಾರ್ಟ್‌ಫೋನ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವರ್ಷದ ಅಂತ್ಯದಲ್ಲಿ 2020 2020 ಉತ್ಪಾದನೆಯಾಗಲಿದೆ. ಇದರ ಬೆನ್ನಲ್ಲೇ 12 ಉತ್ಪಾದನೆ ಆರಂಭಗೊಳ್ಳಲಿದೆ. ವಿಶೇಷ ಅಂದರೆ ಕರ್ನಾಟಕದಲ್ಲಿ 12 ಉತ್ಪಾದನೆಯಾಗಲಿದೆ. ಚೀನಾ ಅಲ್ಲ ಚೆನ್ನೈ; ಮೊದಲ ಭಾರಿಗೆ ಭಾರತದಲ್ಲಿ ಆ್ಯಪಲ್ 11 ಉತ್ಪಾದನೆ ಕರ್ನಾಟಕದಲ್ಲಿರುವ ವಿನ್‌ಸ್ಟೊರ್ನ್ ಘಟಕದಲ್ಲಿ 12 ಉತ್ಪಾದನೆಯಾಗಲಿದೆ. ಇದಕ್ಕಾಗಿ ವಿನ್‌ಸ್ಟೊರ್ನ್ ಬರೋಬ್ಬರಿ 10,000 ನೌಕಕರ ನೇಮಕ ಮಾಡಿಕೊಳ್ಳಲಿದೆ. ಬೆಂಗಳೂರಿನಿಂದ 70 ಕಿ.ಮೀ ದೂರದಲ್ಲಿರುವ ವಿನ್‌ಸ್ಟೊರ್ನ್ ಘಟಕದಲ್ಲಿ ಸದ್ಯ 1,000 ಉದ್ಯೋಗಿಗಳಿದ್ದಾರೆ. 2021ರ ಆರಂಭದಿಂದ 12 ಉತ್ಪಾದನೆ ಆರಂಭಗೊಳ್ಳಲಿದೆ. ಹೀಗಾಗಿ ನಾವು ನೇಮಕ ಪ್ರಕ್ರಿಯೆ ಆರಂಸಿದ್ದೇವೆ ಎಂದು ವಿನ್‌ಸ್ಟೊರ್ನ್ ಘಟಕದ ಕಾರ್ಯದರ್ಶಿ ಗೌರವ್ ಗುಪ್ತ ಹೇಳಿದ್ದಾರೆ.