ಕೊರೋನಾವೈರಸ್‌ ಸೋಂಕು ಪತ್ತೆಗೆ ಗೂಗಲ್‌ನಿಂದ ಹೊಸ ವೆಬ್‌ಸೈಟ್‌ ಶುರು ಬೆಂಗಳೂರು (ಮಾ.16): ಅಮೆರಿಕಾದ ಲಾಸಂಜಲೀಸ್‌ನಿಂದ ಹಿಡಿದು ಇತ್ತ ನ್ಯೂಜಿಲ್ಯಾಂಡ್‌ವರೆಗೂಕೊರೋನಾವೈರಸಿನದ್ದೇಕೋಲಾಹಾಲ. ವಿದ್ಯಾರ್ಥಿಗಳಿಂದ ಹಿಡಿದು ವೃದ್ಧರವರೆಗೆ, ವಿಜ್ಞಾನಿಗಳಿಂದ ಹಿಡಿದು ರಾಜಕೀಯ ನಾಯಕರವೆರೆಗೂ ಬರೇ ಇದೇ ಚಿಂತೆ. ಚೀನಾದಲ್ಲಿ ಹುಟ್ಟಿಕೊಂಡ ಕೊರೋನಾವೈರಸ್ ಸೋಂಕು (ಕೋವಿಡ್-19) ಈಗ ಜಾಗತಿಕ ಪಿಡುಗಾಗಿ ಮಾರ್ಪಟ್ಟಿದೆ. ಒಂದು ಕಡೆ ವಿಜ್ಞಾನಿಗಳು ಈ ಸೋಂಕಿಗೆ ಮದ್ದು ಕಂಡು ಹುಡುಕಲು ಅಹರ್ನಿಶಿ ದುಡಿಯುತ್ತಿದ್ದರೆ, ಇನ್ನೊಂದು ಕಡೆ ಕಾಯಿಲೆ ಹರಡುವಿಕೆಯನ್ನು ತಡೆಯಲು ಸರ್ಕಾರಗಳು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿವೆ. ಇದನ್ನೂ ಓದಿ |ಏ.1ರಿಂದ ಮೊಬೈಲ್‌ ಫೋನ್‌ ಬಲು ದುಬಾ​ರಿ!...ಈ ನಿಟ್ಟಿನಲ್ಲಿ ಸರ್ಕಾರದ ಜೊತೆ ಕೈಜೊಡಿಸಿರುವ ಟೆಕ್‌ ದೈತ್ಯ ಗೂಗಲ್, ಕೊರೋನಾವೈರಸ್ ಹೆಲ್ತ್‌ ಚೆಕಪ್‌ಗಾಗಿ ಹೊಸ ವೆಬ್‌ಸೈಟೊಂದಕ್ಕೆ ಚಾಲನೆ ನೀಡಿದೆ. ಈ ಬಗ್ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಲದಿನಗಳ ಹಿಂದೆಯೇ ಸುಳಿವು ಕೊಟ್ಟಿದ್ದರು ಕೂಡಾ. ಸದ್ಯ ಕ್ಯಾಲಿಫೋರ್ನಿಯಾ ನಿವಾಸಿಗಳು ಮಾತ್ರ ಈ ವೆಬ್‌ಸೈಟ್‌ನಿಂದ ಮಾತ್ರ ಪ್ರಯೋಜನ ಪಡೆಯಬಹುದಾಗಿದ್ದು, -19 ಬಗ್ಗೆ ಆನ್‌ಲೈನ್ ಸ್ಕ್ರೀನರ್ ಪ್ರಶ್ನಾವಳಿಗಳಿಗೆ ಉತ್ತರಿಸಬೇಕು. ಉತ್ತರಗಳ ಆಧಾರದಲ್ಲಿ, ಆ ವ್ಯಕ್ತಿ ಮುಂದಿನ ಪರೀಕ್ಷೆಗೊಳಪಡಬೇಕೋ ಇಲ್ಲವೋ ಗೊತ್ತಾಗುತ್ತದೆ. ಅಷ್ಟೇ ಅಲ್ಲ, ಆ ವ್ಯಕ್ತಿಗೆ ಹತ್ತಿರವಿರುವ ಮೊಬೈಲ್ ಲ್ಯಾಬ್‌ಗಳ ಕುರಿತು ಮಾಹಿತಿಯನ್ನೂ ಒದಗಿಸುತ್ತದೆ. ಅಲ್ಲಿ ಹೋಗಿ, ಆ ವ್ಯಕ್ತಿ ಇನ್ನಿತರ ವೈದ್ಯಕೀಯ ಪರೀಕ್ಷೆಗೊಳಪಡಬೇಕು. ಕೆಲದಿನಗಳಲ್ಲಿ -19 ಇದೆಯೋ ಇಲ್ಲವೋ ಎಂದು ಖಚಿತವಾಗುತ್ತದೆ. ಈ ಎಲ್ಲಾ ಸೇವೆಗಳು ಉಚಿತವಾಗಿವೆ. ಇದನ್ನೂ ಓದಿ |ಬಂದಿದೆ ವಿನೂತನ ಆ್ಯಪ್‌; ಸ್ಮಾರ್ಟ್‌ಫೋನಲ್ಲೇ ಬ್ಯಾಂಕ್, ಇನ್ಶೂರೆನ್ಸ್, ಸಾಲ!...ಈ ವೆಬ್‌ಸೈಟ್‌ ಹೇಗೆ ಕೆಲಸ ಮಾಡುತ್ತದೆ? ಈವೆಬ್‌ಸೈಟ್‌ಗೆಭೇಟಿ ಕೊಡಿ (://..//-19/). ಬಳಿಕGet Startedಬಟನ್‌ ಪ್ರೆಸ್ ಮಾಡಿ. ಈ ಆನ್‌ಲೈನ್‌ ಕೊರೋನಾವೈರಸ್‌ ಪರೀಕ್ಷೆಗೊಳಪಡಬೇಕಾದರೆ, 1. ವಯಸ್ಸು 18 ಆಗಿರಬೇಕು2. ಅಮೆರಿಕಾ ನಿವಾಸಿಯಾಗಿರಬೇಕು3. ಟೆಸ್ಟಿಂಗ್ ಸೌಲಭ್ಯ ಇರುವ ದೇಶದಲ್ಲಿ ವಾಸವಾಗಿರಬೇಕು4. -19 ಪಬ್ಲಿಕ್ ಹೆಲ್ತ್ ಆರ್ಗನೈಝೇಶನ್ ಅರ್ಜಿಗೆ ಸಹಿ ಹಾಕಬೇಕು5. ಇಂಗ್ಲಿಷ್ ಓದಲು, ಮಾತನಾಡಲು ಬಲ್ಲವನಾಗಿರಬೇಕು ಸದ್ಯಕ್ಕೇ ಈ ಸೌಲಭ್ಯ ಕೆಲವು ಪ್ರದೇಶಗಳಿಗೆ ಸೀಮಿತವಾಗಿದೆ. ಅಗತ್ಯಾನುಸಾರ ಈ ಸೇವೆಯನ್ನು ಇತರೆಡೆಗೂ ವಿಸ್ತರಿಸಲಾಗುವುದು ಎಂದು ಕಂಪನಿಯು ಹೇಳಿದೆ.