4 ಕ್ಯಾಮೆರಾ, 64 ಮೆಗಾಪಿಕ್ಸೆಲ್! ರಿಯಲ್‌ಮಿಯಿಂದ ಅಗ್ಗದ ಸ್ಮಾರ್ಟ್‌ಫೋನ್ ಬೆಂಗಳೂರು (ಡಿ.07): ಹೊಸ ವರ್ಷ ಬರುತ್ತಿದ್ದಂತೆ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬರಲಾರಂಭಿಸಿವೆ. ಸ್ಮಾರ್ಟ್‌ಫೋನ್ ದೈತ್ಯ ಈಗ ಎರಡು ಹೊಸ ಫೋನ್‌ಗಳನ್ನು ಹೊರತಂದಿದೆ. ಈಗ ಬಿಡುಗಡೆಯಾಗಿರುವ X2 ಮತ್ತು 5S ಸ್ಮಾರ್ಟ್‌ಫೋನ್‌ಗಳು ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿವೆ. 6.5 ಇಂಚು ಪರದೆಯ X2 ಸ್ನ್ಯಾಪ್‌ಡ್ರ್ಯಾಗನ್‌ 855 ಪ್ಲಸ್‌ ಚಿಪ್‌ಸೆಟ್ ಹೊಂದಿದೆ. ಆ್ಯಂಡ್ರಾಯಿಡ್‌ 9 ಪೈ ಆಪರೇಟಿಂಗ್ ಸಿಸ್ಟಮ್ ಹೊಂದಿದೆ. 64 ಮೆಗಾಪಿಕ್ಸೆಲ್ ಕ್ವಾಡ್‌ ಕ್ಯಾಮೆರಾ ಸೆಟಪ್ ಇದರ ವಿಶೇಷತೆ. ಉಳಿದ ಕ್ಯಾಮೆರಾಗಳು 13 ಎಂಪಿ, 8 ಎಂಪಿ ಮತ್ತು 2 ಎಂಪಿಯದ್ದಾಗಿದ್ದರೆ, ಫ್ರಂಟ್ ಕ್ಯಾಮೆರಾ 16 ಎಂಪಿ ಸಾಮರ್ಥ್ಯದ್ದಾಗಿದೆ. ಇದನ್ನೂ ನೋಡಿ |ನಿಷೇಧದ ಬಳಿಕ ಪೋರ್ನ್ ವೀಕ್ಷಣೆಗೆ ಕಳ್ಳದಾರಿ, 'ನೀಲಿ' ಪ್ರಿಯರಿಗೆ ಇದೇ ಹೆದ್ದಾರಿ!... 50 ವ್ಯಾಟ್‌ನಲ್ಲಿ ಸೂಪರ್‌ ವೂಕ್‌ ಫ್ಲ್ಯಾಶ್‌ ಚಾರ್ಜರ್ ಸೌಲಭ್ಯ ಇದರಲ್ಲಿದ್ದು, ಅತಿ ವೇಗದಲ್ಲಿ ಅಂದರೆ ಅರ್ಧಗಂಟೆಯಲ್ಲಿ ಶೇ.100 ರಷ್ಟು ಚಾರ್ಜ್ ಆಗಲಿದೆ ಎಂದು ಕಂಪೆನಿಯು ತಿಳಿಸಿದೆ. 8 128 ಸ್ಟೋರೇಜ್‌ ಹಾಗೂ 12 , 256 ಸ್ಟೋರೇಜ್‌ನಲ್ಲಿ ಇದು ಲಭ್ಯ. X2 Proನ ಬ್ಯಾಟರಿ ಸಾಮರ್ಥ್ಯ 4000 . ಇದರ ಜೊತೆಗೆ ಬಿಡುಗಡೆಯಾದ Realmeಯ ಇನ್ನೊಂದು ಸ್ಮಾರ್ಟ್‌ಫೋನ್‌ 5S. ಸ್ನ್ಯಾಪ್‌ಡ್ರ್ಯಾಗನ್‌ 665 ಚಿಪ್‌ಸೆಟ್ ಹೊಂದಿರುವ ಈ ಫೋನ್, ಆ್ಯಂಡ್ರಾಯಿಡ್‌ 9 ಪೈ ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಇದನ್ನೂ ಓದಿ |ಏರ್‌ಟೆಲ್‌, ವೊಡಾಫೋನ್‌ ಬಳಿಕ ಜಿಯೋ ದರ ಏರಿಕೆ... ಈ ಫೋನ್ 48 ಎಂಪಿ ಕ್ವಾಡ್‌ ಕ್ಯಾಮೆರಾ ಹೊಂದಿದೆ. ಇನ್ನುಳಿದ ಕ್ಯಾಮೆರಾಗಳು 8,2 ಮೆಗಾಪಿಕ್ಸೆಲ್ ಸಾಮರ್ಥ್ಯ ಹೊಂದಿವೆ. ಇದು ಕೂಡಾ ಮಾದರಿಯಲ್ಲಿ ಲಭ್ಯ. 5000 ಬ್ಯಾಟರಿ ಇದೆ. 4GB ಮತ್ತು 64GBಯಲ್ಲಿ ಹಾಗೂ 4 ಹಾಗೂ 128 ಸ್ಟೋರೇಜ್‌ನಲ್ಲಿ ಲಭ್ಯ. ಬೆಲೆ: