ದುಬಾರಿ ಒನ್‌ಪ್ಲಸ್‌ ಪ್ರೀಮಿಯಂ ಫೋನ್‌ ಖರೀದಿಸುವುದು ಇನ್ಮುಂದೆ ಸುಲಭ! ಬೆಂಗಳೂರು (ಡಿ.05): ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿರುವ ಇದೀಗ ಜನಸಾಮಾನ್ಯರ ಕೈಗೆ ಸುಲಭವಾಗಿ ಸಿಗಲಿದೆ. ಟ್ರೇಡ್‌ ಡಿಸ್ಟ್ರಿಬ್ಯೂಟಿಂಗ್‌ ಕಂಪೆನಿ ಆ್ಯರೋ ಹೆಡ್‌ ಕಮ್ಯೂನಿಕೇಶನ್ಸ್‌ ಜೊತೆಗೆ ಚೀನಾದ ಈ ಜನಪ್ರಿಯ ಕಂಪನಿ ಒಪ್ಪಂದ ಮಾಡಿಕೊಂಡಿದೆ. ಈ ಪಾಲುದಾರಿಕೆ ಮೂಲಕ ಸ್ಮಾರ್ಟ್‌ಫೋನ್‌ ಡಿವೈಸ್‌ಗಳನ್ನು ಆಫ್‌ಲೈನ್‌ ಸ್ಟೋರ್‌ಗಳಲ್ಲಿ ಖರೀದಿಸಬಹುದು. ಆ್ಯರೋ ಹೆಡ್‌ ಕಳೆದೊಂದು ದಶಕದಿಂದ ಆ್ಯಪಲ್‌, ಬ್ಲ್ಯಾಕ್‌ಬೆರ್ರಿಯಂಥಾ ಉತ್ಪನ್ನಗಳನ್ನು ವಿತರಣೆ ಮಾಡುತ್ತಿತ್ತು. ಇದೀಗ ಉತ್ಪನ್ನಗಳೂ ಸೇರಿಕೊಂಡಿವೆ. ಇದನ್ನೂ ಓದಿ |ಒನ್‌ಪ್ಲಸ್ ಮೊಬೈಲ್ ಖರೀದಿಸುವುದು ಇನ್ಮುಂದೆ ಸುಲಭ; ಇಲ್ಲಿಗೆ ಹೋದರೆ ಇನ್ನೂ ಲಾಭ!... ರಾಜ್ಯದಲ್ಲಿ 200 ಕ್ಕೂ ಹೆಚ್ಚು ರೀಟೇಲ್‌ ಸ್ಟೋರ್‌ಗಳಲ್ಲಿ ತನ್ನ ಆ್ಯರೋ ವಿತರಣಾ ಜಾಲ ಹೊಂದಿದೆ. ಈ ಸಂದರ್ಭ ಮಾತನಾಡಿದ ಇಂಡಿಯಾದ ಮುಖ್ಯಸ್ಥ ಸಿದ್ಧಾರ್ಥ್ ದೇಶಮುಖ್‌, ‘ರಾಜ್ಯದಲ್ಲಿ ಹೆಚ್ಚುತ್ತಿರುವ ಬಳಕೆದಾರರ ಅನುಕೂಲಕ್ಕಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದರು. ಇತ್ತೀಚೆಗೆ 5G ಸಪೋರ್ಟ್‌ ಮಾಡೋಒನ್‌ಪ್ಲಸ್ 7Tಫೋನ್‌ನ್ನು ಕಂಪನಿಯು ಬಿಡುಗಡೆ ಮಾಡಿತ್ತು. ಈವೆರೆಗೆ ಸ್ಮಾರ್ಟ್‌ಫೋನ್‌ ತಯಾರಿಕೆ ಕ್ಷೇತ್ರದಲ್ಲಿದ್ದ ಕಂಪನಿಯುಟೀವಿಯನ್ನುಕೂಡಾ ಬಿಡುಗಡೆ ಮಾಡಿದೆ.