ಬಜೆಟ್‌ ಫೋನ್‌ಗೆ ಹೊಸ ಸೇರ್ಪಡೆ: ವಿವೋ ಸ್ಮಾರ್ಟ್‌ಫೋನ್‌ಗೆ ಫುಲ್‌ ಬೇಡಿಕೆ ಈಗ ಮೊಬೈಲ್ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್‌ಫೋನುಗಳದ್ದೇ ಕಾರುಬಾರು. ಹೊಸ ಹೊಸ ಫೀಚರ್‌ಗಳಿರುವ ಸ್ಮಾರ್ಟ್‌ಫೋನ್ 10 ಸಾವಿರ ರೂ.ಗೆ ಸಿಗುತ್ತಿವೆ. ವಿವೋ ಈಗ ಹೊಸ ಫೋನ್‌ವೊಂದನ್ನು ಬಿಡುಗಡೆ ಮಾಡಿದೆ. ಬೆಂಗಳೂರು (ಡಿ.05): ಜನಪ್ರಿಯ ಮೊಬೈಲ್ ತಯಾರಕ ಕಂಪನಿ ವಿವೋ, ಚೆಂದದ ಫೋಟೋ ಸೆರೆಹಿಡಿಯುವ ಎಐ ಟ್ರಿಪ್ಪಲ್‌ ಕ್ಯಾಮರದಂಥಾ ವಿಶೇಷತೆ ಇರುವ ಬಜೆಟ್‌ ಮೊಬೈಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ವಿವೋನ ಸೀರೀಸ್‌ಗೆ ಸೇರ್ಪಡೆಯಾಗಿರೋ ಈ ಮೊಬೈಲ್‌ ಮಾಡೆಲ್ ಹೆಸರು ವಿವೋ U20 ಯಾಗಿದೆ. ಇದು ಎರಡು ಮಾದರಿಗಳಲ್ಲಿ ಲಭ್ಯ. 4 , 64 ಮೆಮೊರಿ ಹಾಗೂ 6 , 64 ಮೆಮೊರಿ ಆವೃತ್ತಿಗಳು ಲಭ್ಯ. ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಸ್ಟೋರೆಜ್‌ನ್ನು 256 GBಗಳಿಗೆ ವಿಸ್ತರಿಸಬಹುದು. ಇದನ್ನೂ ಓದಿ |ಏರ್‌ಟೆಲ್‌, ವೊಡಾಫೋನ್‌ ಬಳಿಕ ಜಿಯೋ ದರ ಏರಿಕೆ... 6.53 ಇಂಚಿನ ಸ್ಕ್ರೀನ್‌ ಹೊಂದಿರುವ ಈ ಫೋನ್, 18 ವ್ಯಾಟ್‌ನ ಡ್ಯುಯೆಲ್‌ ಚಾರ್ಜಿಂಗ್‌ ಆಯ್ಕೆ ಹೊಂದಿದ್ದು ಫಾಸ್ಟ್‌ ಆಗಿ ಚಾರ್ಜ್ ಆಗುತ್ತೆ. ಆಕ್ಟಾಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 675 ಚಿಪ್‌ಸೆಟ್ ಹೊಂದಿರುವ ಈ ಫೋನ್ ಆ್ಯಂಡ್ರಾಯಿಡ್ 9 ಆಪರೇಟಿಂಗ್ ಸಿಸ್ಟಮ್ ಹೊಂದಿದೆ. 5000 ಸಾಮರ್ಥ್ಯದ ಬ್ಯಾಟರಿ ಇದೆ. 16 ಮೆಗಾಪಿಕ್ಸೆಲ್ ಫ್ರಂಟ್‌ ಕ್ಯಾಮೆರಾ, 16ಎಂಪಿ ರೇರ್‌ ಕ್ಯಾಮೆರಾ, 8 ಎಂಪಿಯ ಸೂಪರ್‌ ವೈಡ್‌ ಆ್ಯಂಗಲ್‌ ಕ್ಯಾಮೆರಾ, 2 ಎಂಪಿಯ ಸೂಪರ್‌ ಮ್ಯಾಕ್ರೋ ಕ್ಯಾಮೆರಾವಿದೆ. ಇದನ್ನೂ ಓದಿ |ಏರ್ಟೆಲ್ ನೂತನ ದರಗಳು ಪ್ರಕಟ: ಎಷ್ಟು ಎಕ್ಸ್‌ಟ್ರಾ ಕೊಡ್ಬೇಕು? ಇಲ್ಲಿದೆ ಚಾರ್ಟ್... ಡ್ಯುಯಲ್ ಸಿಮ್ ಕಾರ್ಡ್ ಸೌಲಭ್ಯ ಹೊಂದಿರುವ ಈ ಫೋನ್ ತೂಕ ಬರೇ 193 ಗ್ರಾಂ ಮಾತ್ರ! ಬ್ಲೇಜ್ ಬ್ಲೂ, ರೇಸಿಂಗ್ ಬ್ಲಾಕ್ ಬಣ್ಣಗಳಲ್ಲಿ ಇದು ಲಭ್ಯವಿದೆ. ಫೇಸ್ ಅನ್ಲಾಕ್, ಫಿಂಗರ್‌ಪ್ರಿಂಟ್ ಸೆನ್ಸರ್ ಫೀಚರ್‌ಗಳನ್ನು ಕೂಡಾ ಈ ಫೋನ್ ಹೊಂದಿದೆ. ಇತರ ಕಂಪನಿಗಳ ಬಜೆಟ್ ಫೋನ್‌ಗಳಿಗೆ ಪೈಪೋಟಿಯೊಡ್ಡಲು ಕಳೆದ ಸೆಪ್ಟಂಬರ್‌ನಲ್ಲಿ ವಿವೋ U10 ಫೋನ್‌ನ್ನು ಬಿಡುಗಡೆ ಮಾಡಿತ್ತು. ಅಂದ ಹಾಗೆ ಈ ಹೊಸ ಫೋನ್ ಬೆಲೆ 10,990 ರು. ಆಗಿದೆ.