ಭಲೇ ಚಂದ್ರಯಾನ: ಸೌರಜ್ವಾಲೆ ಗುರುತಿಸಿದ ಭಾರತದ ಮಾನ! ಚಂದ್ರಯಾನ-2 ನೌಕೆಯಿಂದ ಅಪರೂಪದ ಆವಿಷ್ಕಾರ| ಸೌರಜ್ವಾಲೆ ಗುರುತಿಸಿದ ಚಂದ್ರಯಾನ-2 ನೌಕೆ| ಸೂರ್ಯನಿಂದ ಹೊರ ದೂಡಲ್ಪಟ್ಟ ಸೌರ ಜ್ವಾಲೆಗಳ ವಿಕಿರಣ ಸೆರೆ| ಚಂದ್ರಯಾನ-2 ನೌಕೆಯ ಎಕ್ಸ್ ರೇ ಮಾನಿಟರ್()ನಲ್ಲಿ ಸೆರೆಯಾದ ಸೌರಜ್ವಾಲೆ| ಸೌರ ಜ್ಚಾಲೆಗಳಿಂದ ಉತ್ಪತ್ತಿಯಾಗುವ ಎಕ್ಸ್ ರೇ ಕಿರಣಗಳ ಅಧ್ಯಯನ| ಬೆಂಗಳೂರು(ಅ.11):ಅಂತರೀಕ್ಷ ಯೋಜನೆಗಳೇ ಹಾಗೆ. ಅದರಲ್ಲಿ ಸಫಲತೆ ಹಾಗೂ ವಿಫಲತೆ ನಡುವೆ ತೆಳುವಾದ ಗೆರೆ ಇರುತ್ತದೆ. ಹೀಗಾಗಿ ನಿರ್ದಿಷ್ಟ ಅಂತರೀಕ್ಷ ಯೋಜನೆ ಯಶಸ್ವಿಯಾಯಿತೋ ಅಥವಾ ಇಲ್ಲವೋ ಎಂಬುದನ್ನು ಹೇಳುವುದು ಕಷ್ಟ. ಅದರಂತೆ ನಮ್ಮಇಸ್ರೋಉಡಾಯಿಸಿದ್ದ ಚಂದ್ರಯಾನ-2 ನೌಕೆಯವಿಕ್ರಮ್ ಲ್ಯಾಂಡರ್ಚಂದ್ರನ ನೆಲ ಸ್ಪರ್ಶಿಸುವ ವೇಳೆ ಸಂಪರ್ಕ ಕಡಿದುಕೊಂಡಿದ್ದು, ಯೋಜನೆ ತಾಂತ್ರಿಕವಾಗಿ ವಿಫಲ ಎಂದೇ ಉಲ್ಲೇಖಿಸಲಾಗಿದೆ. ಆದರೆ ಇನ್ನೂಚಂದ್ರನನ್ನು ಸುತ್ತುತ್ತಿರುವ ಚಂದ್ರಯಾನ-2 ನೌಕೆ ಮಾತ್ರ ತನ್ನ ಕರ್ತವ್ಯವನ್ನು ಮುಂದುವರೆಸಿದ್ದು, ಚಂದ್ರನ ಕುರಿತು ಅಗತ್ಯ ಮಾಹಿತಿಗಳನ್ನು ಇಸ್ರೋ ಕೇಂದ್ರಕ್ಕೆ ರವಾನಿಸುತ್ತಲೇ ಇದೆ. ಈ ಮಧ್ಯೆಚಂದ್ರಯಾನ-2ನೌಕೆ ಸೌರಜ್ವಾಲೆಗಳನ್ನು ಗುರುತಿಸಿದ್ದು, 24 ಗಂಟೆಗಳ ಅವಧಿಯಲ್ಲಿ ಸೂರ್ಯನಿಂದ ಹೊರ ದೂಡಲ್ಪಟ್ಟ ಸೌರಜ್ವಾಲೆಗಳನ್ನು ಚಂದ್ರಯಾನ-2 ನೌಕೆ ಸೆರೆ ಹಿಡಿದಿದೆ. ಸೌರಜ್ವಾಲೆಗಳನ್ನು ಹೊರಸೂಸುವ ವೇಳೆ ಹರಡುವ ವಿಕಿರಣಗಳನ್ನು ಚಂದ್ರಯಾನ-2 ನೌಕೆಯ ಸೋಲಾರ್ ಎಕ್ಸ್ ರೇ ಮಾನಿಟರ್() ಸೆರೆ ಹಿಡಿದಿದ್ದು, ಇದರಿಂದ ಸೂರ್ಯ ವಿಕಿರಣಗಳ ಕುರಿತು ಅಧ್ಯಯನ ನಡೆಸಲು ಅನುಕೂಲವಾಗಲಿದೆ ಎನ್ನಲಾಗಿದೆ. ಸೂರ್ಯನಿಂದ ಹೊರ ದೂಡಲ್ಪಟ್ಟ ಸೌರ ಜ್ವಾಲೆಗಳ ವಿಕಿರಣ ಚಂದ್ರನಮೇಲ್ಮೈಯನ್ನು ಸ್ಪರ್ಶಿಸುವ ಸಮಯದಲ್ಲಿ ಚಂದ್ರಯಾನ-2 ನೌಕೆಯ ‍ ಅದನ್ನು ಸೆರೆ ಹಿಡಯುತ್ತದೆ ಎಂದು ಇಸ್ರೋ ತಿಳಿಸಿದೆ. ಇದೇ ವೇಳೆ ಸೌರ ಜ್ಚಾಲೆಗಳಿಂದ ಉತ್ಪತ್ತಿಯಾಗುವ ಎಕ್ಸ್ ರೇ ಕಿರಣಗಳು ಚಂದ್ರನ ನೆಲ ಸ್ಪರ್ಶಿಸುವ ವೇಳೆ ಉಂಟಾಗುವ ರಾಸಾಯನಿಕ ಪ್ರಕ್ರಿಯೆ ಕುರಿತು ನೌಕೆ ಅಧ್ಯಯನ ನಡೆಸಲಿದೆ. ಚಂದ್ರನ ಸುತ್ತುತ್ತಿರುವ ಇಸ್ರೋದಚಂದ್ರಯಾನ-2ನೌಕೆ ಚಂದ್ರನಲ್ಲಿರುವ ಖನಿಜಗಳನ್ನು ಪತ್ತೆ ಮಾಡಿದ್ದು, ಚಂದರನ ಕುರಿತಾದ ಭವಿಸ್ಯದ ಅಧ್ಯಯನಕ್ಕಾಗಿ ಅಗತ್ಯ ಮಾಹಿತಿ ರವಾನಿಸುತ್ತಿದೆ ಎಂದು ಇಸ್ರೋ ಸ್ಪಷ್ಟಪಡಿಸಿದೆ.