ಮರೆಯಾಯ್ತು ಚಂದ್ರಯಾನ: ಇಸ್ರೋ ಮುಂದಿನ ಯೋಜನೆ ಗಗನಯಾನ! ವಿಕ್ರಮ್ ಲ್ಯಾಂಡರ್ ಮರು ಸಂಪರ್ಕ ಸಾಧ್ಯತೆ ಕ್ಷೀಣ| ಮರು ಸಂಪರ್ಕಕ್ಕೆ ನಿಗದಿಯಾಗಿದ್ದ ಕಾಲಮೀತಿ ಮೀರಿದ ಪರಿಣಾಮ| ಗಗನಯಾನ್ ಯೋಜನೆಯತ್ತ ಚಿತ್ತ ಹರಿಸಲಿರುವ ಇಸ್ರೋ ವಿಜ್ಞಾನಿಗಳು| ಮಾನವ ಸಹಿತ ಬಾಹ್ಯಾಕಾಶ ಯಾತ್ರೆಯ ಯೋಜನೆ ಗಗನಯಾನ್| ನವದೆಹಲಿ(ಸೆ.21):ವಿಕ್ರಮ್ ಲ್ಯಾಂಡರ್ ಮತ್ತೆ ಸಂಪರ್ಕಕ್ಕೆ ಸಿಗುವ ಸಾಧ್ಯತೆ ಕ್ಷೀಣಿಸಿರುವುದರಿಂದಚಂದ್ರಯಾನ-2ಯೋಜನೆಯ ನಿರೀಕ್ಷಿತ ಗುರಿ ಸಾಧನೆ ಸಾಧ್ಯವಾಗಿಲ್ಲ. ವಿಕ್ರಮ್ ಲ್ಯಾಂಡರ್ ಮರು ಸಂಪರ್ಕಕ್ಕೆ ನಿಗದಿಯಾಗಿದ್ದ ಕಾಲಮೀತಿ ಮೀರಿದ್ದು, ಲ್ಯಾಂಡರ್ ಜೊತೆ ಸಂಪರ್ಕದ ಸಾಧ್ಯತೆ ಕ್ಷೀಣವಾಗಿದೆ. ಈ ಕುರಿತು ಖುದ್ದು ಇಸ್ರೋ ಅಧ್ಯಕ್ಷ ಕೆ. ಶಿವನ್ ಮಾಹಿತಿ ನೀಡಿದ್ದಾರೆ. #Chandrayaan2Orbiter . ://./Tr9Gx4RUHQMeanwhile, # ಇನ್ನು ಇಸ್ರೋದ ಭವಿಷ್ಯದ ಯೋಜನೆಯಾದ ಗಗನಯಾನ್’ನತ್ತ ವಿಜ್ಞಾನಿಗಳು ಚಿತ್ತ ಹರಿಸಲಿದ್ದಾರೆ ಎಂದು ಶಿವನ್ ಸ್ಪಷ್ಟಪಡಿಸಿದ್ದಾರೆ. ಮಾನವ ಸಹಿತ ಬಾಹ್ಯಾಕಾಶ ಯಾತ್ರೆಯ ಯೋಜನೆಯಾಗಿರುವಗಗನಯಾನ್ಕುರಿತು ಇಸ್ರೋ ಚಿತ್ತ ಹರಿಸಲಿದ್ದು, ಯೋಜನೆಯ ಯಶಸ್ವಿಗಾಗಿ ಸಂಸ್ಥೆ ಹಗಲಿರುಳು ದುಡಿಯಲಿದೆ ಎಂದು ಶಿವನ್ ಭರವಸೆ ನೀಡಿದ್ದಾರೆ.