ಭರವಸೆಯ ಬೆಳಕು: ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಿದ ಇಸ್ರೋ! ಕೊನೆಗೂ ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಿದ ಇಸ್ರೋ| ವಿಕ್ರಮ್ ಲ್ಯಾಂಡರ್ ಇರುವ ಸ್ಥಳ ಪತ್ತೆ ಹಚ್ಚಿದ ಇಸ್ರೋ| ಆರ್ಬೀಟರ್ ಕ್ಯಾಮರಾದಲ್ಲಿ ಸೆರೆಯಾದ ವಿಕ್ರಮ್ ಲ್ಯಾಂಡರ್| ವಿಕ್ರಮ್ ಸಂಪರ್ಕ ಸಾಧಿಸಲು ಇಸ್ರೋ ನಿರಂತರ ಪ್ರಯತ್ನ| ಬೆಂಗಳೂರು(ಸೆ.08):ಚಂದ್ರಯಾನ-2ಯೋಜನೆಯ ಹಿನ್ನಡೆಯಿಂದಾಗಿ ನಿರಾಸೆಯಲ್ಲಿದ್ದಇಸ್ರೋ, ಸಂಪರ್ಕ ಕಡಿದುಕೊಂಡಿರುವ ವಿಕ್ರಮ್ ಲ್ಯಾಂಡರ್’ನ್ನು ಪತ್ತೆ ಹಚ್ಚಿ ಹೊಸ ಆಶಾವಾದ ಮೂಡಿಸಿದೆ. ಹೌದು, ಸಂಪರ್ಕ ಕಡಿದುಕೊಂಡಿರುವ ವಿಕ್ರಮ್ ಲ್ಯಾಂಡರ್’ನ ಸ್ಥಳವನ್ನು ಇಸ್ರೋ ಪತ್ತೆ ಹಚ್ಚಿದೆ.ಚಂದ್ರಯಾನ-2ನೌಕೆಯ ಆರ್ಬಿಟರ್ ಕ್ಯಾಮರಾದಲ್ಲಿ ವಿಕ್ರಮ್ ಲ್ಯಾಂಡರ್ ಸೆರೆಯಾಗಿದೆ. ಆರ್ಬಿಟರ್ ಕ್ಯಾಮರಾದಲ್ಲಿ ವಿಕ್ರಮ್ ಲ್ಯಾಂಡರ್’ನ ಥರ್ಮಲ್ ಇಮೇಜ್ ಸೆರೆಯಾಗಿದ್ದು, ಇನ್ನೂ ಸಂಪರ್ಕ ಸಾಧ್ಯವಾಗಿಲ್ಲ ಎಂದುಇಸ್ರೋತಿಳಿಸಿದೆ. "