ಕಂಪ್ಯೂಟರ್ ಕೆಲಸ ಇನ್ನೂ ಸುಲಭ; ಕಿಂಗ್‌ಸಾಫ್ಟ್ ತುಂಬುತ್ತೆ ಬಲ! ಸಾಫ್ಟ್‌ವೇರ್ ಮತ್ತು ಅದಕ್ಕೆ ಸಂಬಂಧಿಸಿದ ಸೇವೆಗಳನ್ನು ಒದಗಿಸುವ ಕಿಂಗ್‌ಸಾಫ್ಟ್ ಕಂಪನಿಯು 2020 ಸಾಫ್ಟ್ ವೇರನ್ನು ಬಿಡುಗಡೆ ಮಾಡಿದೆ. ಮೂಲಕ ಭಾರತದ ಮಾರುಕಟ್ಟೆಗೆ ಪ್ರವೇಶಿಸಿದೆ. 2020 ಇತ್ತೀಚಿನ ಅಂತಾರಾಷ್ಟ್ರೀಯ ಆವೃತ್ತಿಯಾಗಿದ್ದು, ಆಲ್-ಇನ್-ಒನ್ ಸಾಫ್ಟ್‌ವೇರ್ ಸೂಟ್ ಆಗಿದೆ. ಈಗಾಗಲೇ ಭಾರತದಲ್ಲಿ 23 ದಶಲಕ್ಷ ಬಳಕೆದಾರರನ್ನು ಹೊಂದಿದೆ. 200 ದೇಶಗಳಲ್ಲಿ ಕಚೇರಿ ಹೊಂದಿರುವ ಕಿಂಗ್ ಸಾಫ್ಟ್ ಉತ್ಪನ್ನ ಮತ್ತು ಸೇವೆಗಳನ್ನು ಒದಗಿಸುತ್ತಿದೆ. ವಿಂಡೋಸ್, ಆಂಡ್ರಾಯ್ಡ್, ಈಒಎಸ್, ಲೈನಕ್ಸ್ ಪೂರಕವಾದ ಸಾಫ್ಟ್‌ವೇರ್‌ಗಳಿಗೆ ಸೇವೆಗಳನ್ನು ಕಿಂಗ್ ಸಾಫ್ಟ್ ಅಭಿವೃದ್ಧಿಪಡಿಸುತ್ತಿದೆ. ಈ ಒನ್‌ಸ್ಟಾಪ್ ಆಫೀಸ್ ಉಚಿತ ಮತ್ತು ಪ್ರೀಮಿಯಂ ಆವೃತ್ತಿಗಳಲ್ಲಿ ಲಭ್ಯವಿದೆ. ಇದನ್ನೂ ಓದಿ |ವಿಶೇಷ ಕ್ಯಾಮೆರಾ ಇರುವ ಮೋಟೋರೋಲ ಹೊಸ ಫೋನ್‌; ಆ.30ಕ್ಕೆ ಸೇಲ್ ಶುರು! 2020 ಅನ್ನು ಹೊಸ ಪೀಳಿಗೆಯ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಫ್ರೀಲ್ಯಾನ್ಸರ್‌ಗಳ ಹುಡುಕುತ್ತಿರುವ ಟೂಲ್‌ಗಳನ್ನು ನೀಡುವ ಮೂಲಕ ಅವರ ಅವಶ್ಯಕತೆಗಳನ್ನು ಪೂರೈಸಿ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ತಯಾರಿಸಲಾಗಿದೆ. ಈ ಸಾಫ್ಟ್‌ವೇರ್ ಅನ್ನು ವಿಶೇಷವಾಗಿ ಆ್ಯಪಲ್ ಡಿವೈಸ್‌ಗಳು ತಡೆರಹಿತವಾಗಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. ಎಲ್ಲಾ ಮುಖ್ಯವಾಹಿನಿಯ ಆಪರೇಟಿಂಗ್ ಸಿಸ್ಟಮ್‌ಗಳು, ಮ್ಯಾಕ್, ವಿಂಡೋಸ್, ಲೈನಕ್ಸ್, ಐಒಎಸ್ ಮತ್ತು ಆಂಡ್ರಾಯ್ಡ್‌ಗಳಿಗೆ ಡಬ್ಲ್ಯೂಪಿಎಸ್ ಆಫೀಸ್ 2020 ಆನ್‌ಲೈನ್‌ನಲ್ಲಿ ಲಭ್ಯವಿದೆ.