ಇವು ನಿಮ್ಮ ಆರೋಗ್ಯಕ್ಕೆ ಡೇಂಜರಸ್ ಪೋನ್‌ಗಳಂತೆ! ಕೋರ್ಟ್‌ನಲ್ಲಿ ಕೇಸ್ ದಾಖಲು ತಂತ್ರಜ್ಞಾನ, ವಿಶೇಷವಾಗಿ ಮೊಬೈಲ್‌ನಂಥ ಇಲೆಕ್ಟ್ರಾನಿಕ್ಸ್ ಉಪಕರಣಗಳ ಸೈಡ್ ಎಫೆಕ್ಟ್‌ಗಳ ಬಗ್ಗೆ ಹಿಂದಿನಿಂದಲೂ ಚರ್ಚೆಯಾಗುತ್ತಲೇ ಇದೆ. ಅದಕ್ಕೆ ಪುಷ್ಠಿ ನೀಡುವಂತೆ, 2 ಮೊಬೈಲ್ ಕಂಪನಿಗಳ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಮೊಬೈಲ್ ದೈತ್ಯ ಕಂಪನಿಗಳಾದ ಸ್ಯಾಮ್ಸಂಗ್ ಮತ್ತು ಆ್ಯಪಲ್ ವಿರುದ್ಧ ಅಮೆರಿಕಾ ಕೋರ್ಟಿನಲ್ಲಿ ದಾವೆ ಹೂಡಲಾಗಿದೆ. ಈ ಕಂಪನಿಯ ಫೋನ್‌ಗಳು ನಿಗದಿತ ಮಟ್ಟಕ್ಕಿಂತ ಹೆಚ್ಚಿನ ಮಟ್ಟದಲ್ಲಿ ರೇಡಿಯೋ ತರಂಗಗಳನ್ನು( ) ಹೊರಸೂಸುತ್ತಿದ್ದು, ಅಪಾಯಕಾರಿಯಾಗಿವೆ ಎಂದು ದೂರುದಾರರು ಆರೋಪಿಸಿದ್ದಾರೆ. ಆ್ಯಪಲ್ ಕಂಪನಿಯ 7 , 8 ಮತ್ತು , ಸ್ಯಾಮ್ಸಂಗ್ ಕಂಪನಿಯ S8 ಮತ್ತು 8 ಫೋನ್‌ಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ |ಹುಚ್ಚೆಬ್ಬಿಸಿದೆ 64MP ಕ್ಯಾಮೆರಾದ ಹೊಸ ಪೋನ್; ಒಂದೇ ದಿನದಲ್ಲಿ ಒಂದು ಮಿಲಿಯನ್ ಬುಕಿಂಗ್! ಬೇರೆ ಬೇರೆ ಅಧ್ಯಯನ ವರದಿಗಳು ಕೂಡಾ ಈ ವಾದವನ್ನು ಪುಷ್ಠಿಕರಿಸಿದ್ದು, ಕಾನೂನುಬದ್ಧ ಲಿಮಿಟ್‌ಗಿಂತ ಹೆಚ್ಚು ರೇಡಿಯೋ ತರಂಗಗಳನ್ನು ಇವು ಹೊರಸೂಸುತ್ತಿವೆ ಎಂದು ಹೇಳಿವೆ. ಇವುಗಳಿಂದಾಗಿ ಕ್ಯಾನ್ಸರ್‌ನಂಥ ಮಾರಕ ಕಾಯಿಲೆಗಳು ಬರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಆದರೆ ಆ್ಯಪಲ್ ಕಂಪನಿಯು ಈ ಆರೋಪಗಳನ್ನು ನಿರಾಕರಿಸಿದ್ದು, ಫೋನ್‌ಗಳು ಸರ್ಕಾರದ ನಿಯಮಗಳಿಗೆ ಅನುಗುಣವಾಗಿದ್ದು, ಬಳಕೆಗೆ ಯೋಗ್ಯವಾಗಿವೆ ಎಂದಿದೆ.