ನಡುಗಿ ಹೋದ ಗುರು ಗ್ರಹ: ಡಿಕ್ಕಿ ಹೊಡೆಯಿತೊಂದು ಕ್ಷುದ್ರಗ್ರಹ! ಗುರುಗ್ರಹಕ್ಕೆ ಡಿಕ್ಕಿ ಹೊಡೆದ ಬೃಹತ್ ಕ್ಷುದ್ರಗ್ರಹ| ಅಪರೂಪದ ದೃಶ್ಯ ಸೆರೆ ಹಿಡಿದ ಖಗೋಳ ವಿಜ್ಞಾನಿ ಎಥಾನ್ ಚಾಪೆಲ್| ಗುರು ಗ್ರಹದ ವಾತಾವರಣ ಪ್ರವೇಶಿಸಿ ಭಸ್ಮವಾದ ಬೃಹತ್ ಕ್ಷುದ್ರಗ್ರಹ| ಟೆಲಿಸ್ಕೋಪ್’ನಲ್ಲಿ ಸೆರೆಯಾಯ್ತು ಅಪರೂಪದ ಖಗೋಳ ವಿದ್ಯಮಾನ| 2009ರಲ್ಲಿ ಪೆಸಿಫಿಕ್ ಮಹಾಸಾಗರ ಗಾತ್ರದ ಕ್ಷುದ್ರಗ್ರಹ ಡಿಕ್ಕಿ| ವಾಷಿಂಗ್ಟನ್(ಆ.12):ನಮ್ಮ ಸೌರಮಂಡಲದ ಅತ್ಯಂತ ದೊಡ್ಡ ಗ್ರಹವಾದ ಗುರು ಗ್ರಹಕ್ಕೆ ಕ್ಷುದ್ರಗ್ರಹವೊಂದು ಡಿಕ್ಕಿ ಹೊಡೆದಿದ್ದು, ಗ್ರಹದ ಮೇಲ್ಮೈಗೆ ಕ್ಷುದ್ರಗ್ರಹ ಡಿಕ್ಕಿ ಹೊಡೆಯುತ್ತಿರುವ ಅಪರೂಪದ ದೃಶ್ಯ ಸೆರೆಯಾಗಿದೆ. ಖಗೋಳ ವಿಜ್ಞಾನಿ ಎಥಾನ್ ಚಾಪೆಲ್ ತಮ್ ಟೆಲಿಸ್ಕೋಪ್’ನಲ್ಲಿ ಈ ಅಪರೂಪದ ದೃಶ್ಯವನ್ನು ಸೆರೆ ಹಿಡಿದಿದ್ದು, ಗುರು ಗ್ರಹದ ವಾತಾವರಣ ಪ್ರವೇಶಿಸಿದ ಕ್ಷುದ್ರಗ್ರಹ ಉರಿದು ಭಸ್ಮವಾಗುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. #.../ ಗುರುವಿನ ವೀಕ್ಷಣೆಯಲ್ಲಿ ನಿರತರಾಗಿದ್ದ ಎಥಾನ್ ಚಾಪೆಲ್ ಅವರಿಗೆ, ದೊಡ್ಡ ಕ್ಷುದ್ರಗ್ರಹವೊಂದು ಡಿಕ್ಕಿ ಹೊಡೆಯುತ್ತಿರುವ ದೃಶ್ಯ ಗೋಚರವಾಗಿದೆ. ಟೆಲಿಸ್ಕೋಪ್’ನಲ್ಲಿ ಸ್ಪಷ್ಟವಾಗಿ ಸೆರೆಯಾದ ಈ ದೃಶ್ಯವನ್ನು ಆಧರಿಸಿ, ಗುರುವಿಗೆ ಡಿಕ್ಕಿ ಹೊಡೆದ ಕ್ಷುದ್ರಗ್ರಹ ಗಾತ್ರದಲ್ಲಿ ಅತ್ಯಂತ ದೊಡ್ಡದಾಗಿರಬಹುದು ಎಂದು ಊಹಿಸಲಾಗಿದೆ. ' #. , ' .../z5EChRybf4 ಆದರೆ ಎಥಾನ್ ಚಾಪೆಲ್ ಸೆರೆ ಹಿಡಿದಿರುವುದು ಕ್ಷುದ್ರಗ್ರಹ ಡಿಕ್ಕಿ ಹೊಡೆಯುತ್ತಿರುವ ದೃಶ್ಯವೋ ಅಥವಾ ಗುರುಗ್ರಹದ ಆಂತರಿಕ ಬದಲಾವಣೆಗಳ ದೃಶ್ಯವೋ ಎಂಬುದು ಸ್ಪಷ್ಟವಾಗಬೇಕಿದೆ. ' ' #. , ' 6 7.../POQynVOlA8 ಕಳೆದ 2009ರಲ್ಲಿ ಪೆಸಿಫಿಕ್ ಮಹಾಸಾಗರದಷ್ಟು ಅಗಾಧ ಗಾತ್ರದ ಬೃಹತ್ ಕ್ಷುದ್ರಗ್ರಹವೊಂದು ಗುರು ಗ್ರಹಕ್ಕೆ ಡಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ಗುರಿವಿನ ಮೇಲ್ಮೈ ಮೇಲಿರುವ ’ದಿ ಗ್ರೇಟ್ ರೆಡ್ ಸ್ಪಾಟ್’ ಗಾತ್ರದ ಮತ್ತೊಂದು ಕುಳಿ ನಿರ್ಮಾಣವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.