ಒಂದು ಗ್ರಹಕ್ಕೆ ಮೂವರು ಭಾಸ್ಕರ: ಯಾರನ್ನು ಸುತ್ತುವುದು ಗಿರಗಿರ? ಒಂದಲ್ಲ, ಎರಡಲ್ಲ, ಈ ಗ್ರಹಕ್ಕೆ ಮೂವರು ಸೂರ್ಯರು| ಗ್ರಹದ ಮೇಲ್ಮೆಯಿಂದ ಮೂವರು ಸೂರ್ಯರ ದರ್ಶನ| ಹೊಸ ಗ್ರಹ ಅನ್ವೇಷಿಸಿದ ನಾಸಾದ ಟೆಲಿಸ್ಕೋಪ್| ಭೂಮಿಯಿಂದ 22.5 ಜ್ಯೋತಿವರ್ಷ ದೂರದಲ್ಲಿದಲ್ಲಿರುವ 144Ab ಗ್ರಹ| 144Ab ಗ್ರಹದ ಸುತ್ತ ಮೂರು ಕೆಂಪು ದೈತ್ಯ ನಕ್ಷತ್ರಗಳು| ವಾಷಿಂಗ್ಟನ್(ಜು.27):ಬ್ರಹ್ಮಾಂಡದ ವಿಸ್ಮಯತೆಗೆ ಕೊನೆ ಮೊದಲಿಲ್ಲ. ಅನಂತತೆಯನ್ನೇ ಉಸಿರಾಡುವ ಬ್ರಹ್ಮಾಂಡದಲ್ಲಿ ವಿಸ್ಮಯ ಜಗತ್ತುಗಳಿಗೆ ಬರವಿಲ್ಲ. ನಮ್ಮಿಂದ ಊಹಿಸಲಸಾಧ್ಯ ದೂರದಲ್ಲಿ ವಿಸ್ಮಯ ಪ್ರಪಂಚದ ಸರಮಾಲೆಯನ್ನೇ ಹೊದ್ದು ಮಲಗಿದೆ ಬ್ರಹ್ಮಾಂಡ. ಆದರೆ ಈ ಬ್ರಹ್ಮಾಂಡದ ಅನಂತತೆಯನ್ನು ಸೀಳಲು ನಿರ್ಧರಿಸಿರುವ ಮಾನವ, ದೂರದ ವಿಸ್ಮಯಗಳನ್ನು ಸಂಶೋಧಿಸುತ್ತಾ ತನ್ನ ಜ್ಞಾನದ ಪರಿಯನ್ನು ವೃದ್ಧಿಸಿಕೊಳ್ಳುತ್ತಿದ್ದಾನೆ. ಅದರಂತೆ ನಮ್ಮ ಸೌರಮಂಡಲದಾಚೆಗಿನ ಪ್ರಪಂಚವನ್ನು ಅರಿಯುವಲ್ಲಿ ನಿರತವಾಗಿರುವ ನಾಸಾದ ಟ್ರಾನ್ಸಿಟಿಂಗ್ ಎಕ್ಸೋಪ್ಲ್ಯಾನೆಟ್ ಸರ್ವೆ ಸ್ಯಾಟಲೈಟ್(), ಹೊಸ ಗ್ರಹವೊಂದನ್ನು ಶೋಧಿಸಿದೆ. 144Ab ಎಂಬ ಹೆಸರಿನ ಈ ಗ್ರಹಕ್ಕೆ ಮೂವರು ಸೂರ್ಯರು ಪೋಷಕರು. ಮೂರು ಸೂರ್ಯರ ಗುರುತ್ವಾಕರ್ಷಣೆಗೆ ಒಳಪಟ್ಟಿರುವ ಈ ಗ್ರಹ, ಒಂದು ನಿರ್ದಿಷ್ಟ ಗ್ರಹವನ್ನು ಸುತ್ತುವುದಾದರೂ, ಉಳಿದೆರಡೂ ಸೂರ್ಯರನ್ನೂ ತನ್ನ ಸಂಬಂಧಿಕರಂದೇ ಭಾವಿಸಿದೆ. 144Ab ಗ್ರಹದ ಸುತ್ತ ಮೂರು ಕೆಂಪು ದೈತ್ಯ ನಕ್ಷತ್ರಗಳಿದ್ದು, ಇವುಗಳ ಪೈಕಿ ಒಂದು ನಕ್ಷತ್ರ ಮಾತ್ರ 144Ab ಗ್ರಹದ ನೈಜ ಪೋಷಕ ನಕ್ಷತ್ರವಾಗಿದೆ. ಆದರೆ ನಕ್ಷತ್ರಗಳ ಸಾಮೀಪ್ಯದ ಪರಿಣಾಮ ಈ ಗ್ರಹದ ಮೇಲ್ಭಾಗದಿಂದ ಮೂವರು ಸೂರ್ಯರು ಕಾಣುತ್ತಾರೆ. 144Ab ಗ್ರಹ ಭೂಮಿಯಿಂದ ಸುಮಾರು 22.5 ಜ್ಯೋತಿವರ್ಷ ದೂರದಲ್ಲಿದಲ್ಲಿದ್ದು, ಮೂವರು ಸೂರ್ಯರ ಪೈಕಿ ಎರಡು ಅನತಿ ದೂರದಲ್ಲಿದ್ದು, ಮಾತೃ ನಕ್ಷತ್ರ ಗ್ರಹದ ಅತ್ಯಂತ ಸಮೀಪದಲ್ಲಿದೆ ಎಂದು ನಾಸಾ ತಿಳಿಸಿದೆ.