ಜು.21 ಅಥವಾ 22ರಂದು ಚಂದ್ರಯಾನ-2 ಉಡ್ಡಯನ? ತಾಂತ್ರಿಕ ದೋಷದಿಂದ ಮುಂದೂಡಲ್ಪಟ್ಟಿರುವ ಚಂದ್ರಯಾನ-2| ಜುಲೈ 21 ಅಥವಾ 22ರಂದು ಕೈಗೆತ್ತಿಕೊಳ್ಳಲು ಇಸ್ರೋ ನಿರ್ಧಾರ?| ಜಿಎಸ್‌ಲ್‌ವಿ-ಎಂಕೆಐ2 ರಾಕೆಟ್’ನಲ್ಲಿ ಕ್ರಯೋಜನಿಕ್ ಇಂಧನ ಸೋರಿಕೆ ಹಿನ್ನೆಲೆ| ಬೆಂಗಳೂರು(ಜು.17):ತಾಂತ್ರಿಕ ದೋಷದಿಂದ ಮುಂದೂಡಲ್ಪಟ್ಟಿರುವಚಂದ್ರಯಾನ-2ಯೋಜನೆಯನ್ನು, ಇದೇ ಜುಲೈ 21 ಅಥವಾ 22ರಂದು ಕೈಗೆತ್ತಿಕೊಳ್ಳಲುಇಸ್ರೋನಿರ್ಧರಿಸಿದೆ. ಜುಲೈ 15ರಂದು ನಡೆಯಬೇಕಿದ್ದ ಉಡ್ಡಯನ ಕೊನೇ ಕ್ಷಣದಲ್ಲಿತಾಂತ್ರಿಕ ದೋಷದಿಂದಾಗಿ ರದ್ದಾಗಿತ್ತು. ಜಿಎಸ್‌ಲ್‌ವಿ-ಎಂಕೆಐ2 ರಾಕೆಟ್’ನಲ್ಲಿ ಕ್ರಯೋಜನಿಕ್ ಇಂಧನ ಸೋರಿಕೆ ಹಿನ್ನೆಲೆಯಲ್ಲಿ ಉಡ್ಡಯನ ರದ್ದುಪಡಿಸಲಾಗಿತ್ತು. ವಿಜ್ಞಾನಿಗಳುಹಾಗೂ ತಂತ್ರಜ್ಞರು ಇಂಧನ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸತತ ಪರಿಶ್ರಮ ವಹಿಸಿದ್ದು , ಜು.21 ರ ಮಧ್ಯಾಹ್ನ ಅಥವಾ ಜು.22ರ ಬೆಳಗಿನ ಜಾವ ಉಡ್ಡಯನ ನಡೆಸಲು ಇಸ್ರೋ ಯೋಚಿಸಿದೆ ಎನ್ನಲಾಗಿದೆ.