ಇನ್ನೈದು ದಿನ, ನಿಮ್ಮ ಕೈಗೆ Xiaomiಯ ಅಗ್ಗದ ಫೋನ್! ಉತ್ತಮ ಗುಣಮಟ್ಟದ ಫೋನ್‌ಗಳ ಮೂಲಕ ಭಾರತದಲ್ಲಿ ಜನಪ್ರಿಯವಾಗಿರುವ ಕಂಪನಿಯು ಮತ್ತೊಂದು ಅಗ್ಗದ ಮೊಬೈಲ್ ಫೋನ್ ಇತ್ತೀಚೆಗೆ ಬಿಡುಗಡೆ ಮಾಡಿದೆ. ಫೀಚರ್, ಬೆಲೆ ಮತ್ತು ಲಭ್ಯತೆ ಬಗ್ಗೆ ಇಲ್ಲಿದೆ ಮಾಹಿತಿ: ಬೆಂಗಳೂರು (ಜು. 06): ಅಗ್ಗದ ಸ್ಮಾರ್ಟ್‌ಫೋನ್‌ಗಳ ಪೈಕಿ ಒಂದಾದ Xiaomiಯ 7A ಇನ್ನು ಕೆಲವೇ ದಿನಗಳಲ್ಲಿ ಮೊಬೈಲ್ ಪ್ರಿಯರ ಕೈ ಸೇರಲಿದೆ. + ಡಿಸ್ಪ್ಲೇ, ಒಕ್ಟಾಕೋರ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ 439 ಚಿಪ್ ಸೆಟ್, ಮತ್ತು 3GB - 32GB ಸ್ಟೋರೆಜ್ ಹೊಂದಿರುವ ಈ ಹೊಸ ಸ್ಮಾರ್ಟ್‌ಫೋನ್ ಜು.11 ಮತ್ತು 12ರಂದು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ. ಜೊತೆಗೆ . ಹಾಗೂ ಸ್ಟೋರ್‌ಗಳಲ್ಲೂ ಇದನ್ನು ಖರೀದಿಸಬಹುದು. ಇದನ್ನೂ ಓದಿ |Xiaomiಯಿಂದ 2 ಹೊಸ ಫೋನ್‌ಗಳು ಬಿಡುಗಡೆ ಕಡಿಮೆ ದರದ M10 ಮತ್ತು 2.2 ಫೋನ್‌ಗಳು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾಗಿದ್ದು, ಅವುಗಳಿಗೆ ಪೈಪೋಟಿ ನೀಡುವಂತಿದೆ Xiaomiಯ ಈ ಹೊಸ ಫೋನ್. 5.45 ಇಂಚು ಪರದೆ, ಫೇಸ್ ಅನ್‌ಲಾಕ್, 12 ಮೆಗಾಪಿಕ್ಸೆಲ್ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ, ಮತ್ತು 4000 ಬ್ಯಾಟರಿ ಈ ಫೋನ್‌ನ ಇನ್ನಿತರ ಪ್ರಮುಖ ಫೀಚರ್‌ಗಳು. 2 ವರ್ಷ ವ್ಯಾರಂಟಿ ಹೊಂದಿರುವ ಈ ಫೋನ್ ಬೆಲೆ ₹5999 ಆಗಿದೆ.