5 ಕ್ಯಾಮೆರಾವುಳ್ಳ 9 ಬಿಡುಗಡೆ; ಫೀಚರ್ಸ್ ಮತ್ತು ಬೆಲೆ ಒಂದಲ್ಲ ಎರಡಲ್ಲ... ಬರೋಬ್ಬರಿ 5 ಕ್ಯಾಮೆರಾ ಹೊಂದಿರುವ ನೋಕಿಯಾ ಹೊಸ ಫೋನ್ ಮಾರುಕಟ್ಟೆಗೆ. ಹೇಗಿದೆ? ಬೆಲೆ ಎಷ್ಟು? ಇಲ್ಲಿದೆ ವಿವರ... ಬೆಂಗಳೂರು (ಜು.10): 9 ಭಾರತದಲ್ಲಿ ಬಿಡುಗಡೆಗೆ ಸಿದ್ಧವಾಗಿರುವುದನ್ನುಸುವರ್ಣನ್ಯೂಸ್.ಕಾಂಕಳೆದ ವಾರವರದಿಮಾಡಿತ್ತು. ಹಿಂಬದಿ ಪ್ಯಾನೆಲ್‌ನಲ್ಲಿ 5 ಕ್ಯಾಮೆರಾ ಹೊಂದಿರುವ ಈ ವಿಶಿಷ್ಟ ಫೋನ್ ಕೊನೆಗೂ ಭಾರತದ ಮೊಬೈಲ್ ಮಾರುಕಟ್ಟೆಗೆ ಪದಾರ್ಪಣೆ ಮಾಡಿದೆ. ಕಂಪನಿಯ ಈ ಹೊಸ ಫೋನ್ 6 ಇಂಚಿನ ಪರದೆ, 18.5:9 ಆ್ಯಸ್ಪೆಕ್ಟ್ ರೇಶ್ಯೋ ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಫೀಚರ್ ಹೊಂದಿದೆ. ಇದನ್ನೂ ಓದಿ |ಅನ್‌ಇನ್ಸ್ಟಾಲ್ ಮಾಡದೇ WhatsAppನಿಂದ ಮಾಯವಾಗುವ (ಕು)ತಂತ್ರ ಇದು! 6GB , 128GB ಸ್ಟೋರೆಜ್ ಇರುವ 9 ಫೋನ್, ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವಿರುವ 3,320mAh ಬ್ಯಾಟರಿಯನ್ನು ಹೊಂದಿದೆ. ಹಿಂಬದಿಯಲ್ಲಿ ಬರೋಬ್ಬರಿ 5 ಕ್ಯಾಮೆರಾ ಹಾಗೂ ಸೆಲ್ಫಿ ಪ್ರಿಯರಿಗೆ 20 ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾವನ್ನು ಹೊಂದಿರುವುದು 9 PureViewನ ವಿಶೇಷತೆ. ಕಳೆದ ಫೆಬ್ರವರಿಯಲ್ಲಿ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2019ರಲ್ಲಿ ಇದನ್ನು ಮೊದಲ ಬಾರಿಗೆ ಪ್ರದರ್ಶನಕ್ಕಿಡಲಾಗಿತ್ತು. ಲಭ್ಯತೆ: ಆನ್‌ಲೈನ್‌ನಲ್ಲಿ ಖರೀದಿಸುವವರಿಗೆ ಇಂದಿನಿಂದ (ಜು.10) ಫ್ಲಿಪ್‌ಕಾರ್ಟ್‌ ಮತ್ತು ನೋಕಿಯಾ ವೆಬ್‌ಸೈಟ್‌ನಲ್ಲಿ 9 ಮಾರಾಟ ಆರಂಭವಾಗಿದೆ. ಆಫ್‌ಲೈನ್ ಗ್ರಾಹಕರಿಗೆ ಜು.17ರಿಂದ ಮೊಬೈಲ್ ಸ್ಟೋರ್‌ಗಳಲ್ಲಿ ಈ ಫೋನ್ ಲಭ್ಯವಾಗಲಿದೆ. ಬೆಲೆ? ಮಿಡ್‌ನೈಟ್ ಬ್ಲೂ ಕಲರ್‌ನಲ್ಲಿ ಲಭ್ಯವಿರುವ 9 ಬೆಲೆ ಭಾರತದಲ್ಲಿ ಬರೋಬ್ಬರಿ 49,999 ರೂಪಾಯಿ.